ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ

ಕಿನ್ನಿಗೋಳಿ : ಯಕ್ಷಗಾನ ಕ್ಷೇತ್ರದಲ್ಲಿ ಅಗರಿ ಶ್ರೀನಿವಾಸ ಭಾಗವತರ ಕೊಡುಗೆ ಅನನ್ಯ ಕಟೀಲು ಮೇಳದ ದೇವಿ ಮಹಾತ್ಮೆ ಪ್ರಸಂಗಕ್ಕೆ ಹಿರಿಯ ಬಲಿಪ ಭಾಗವತರ ಜೊತೆಗೆ ಅಗರಿಯವರು ಉತ್ತಮ ರಂಗ ತರಬೇತಿ ನೀಡಿದ್ದಾರೆ. ಅದು ಇಂದಿಗೂ ಪಬುದ್ದತೆ ಹೊಂದಿದ್ದು ಎಲ್ಲರೂ ಮೆಚ್ಚುವಂತಾಗಿದೆ. ಎಂದು ಕಟೀಲು ದೇವಳದ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸರಸ್ವತೀ ಸದನದಲ್ಲಿ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ ವೇದಿಕೆ ಸುರತ್ಕಲ್, ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರ ( ರಿ ) ಗೋವಿಂದದಾಸ ಕಾಲೇಜು ಸುರತ್ಕಲ್, ದುರ್ಗಾ ಮಕ್ಕಳ ಮೇಳ ಕಟೀಲು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಶ್ರಯದಲ್ಲಿ ಭಾನುವಾರ ನಡೆದ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ – ಸಮ್ಮಾನ – ಅಗರಿ ಗಾನ ಸ್ಮರಣೆ, ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯ ಯಕ್ಷಗಾನ ಕಲಾವಿದ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಅವರಿಗೆ ಅಗರಿ ಪ್ರಶಸ್ತಿ ಹಾಗೂ ನಗದು ರೂ 20,000ರೂ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭ ಅಗರಿ ಶೈಲಿಯ ಹಾಡುಗಾರಿಕೆಯ ವರ್ಷದ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರನ್ನು ಮೈಕ್ರೋಮ್ಯಾಕ್ಸ್ ಕಂಪೆನಿ ವತಿಯಿಂದ ಟಿ. ವಿ ಸಹಿತ ಪುರಸ್ಕಾರ ನೀಡಿ ಗೌರವಿಸಲಾಯಿತು.
ಯಕ್ಷಗಾನ ಅರ್ಥದಾರಿ ಮೂಡಂಬಲು ಗೋಪಾಲಕೃಷ್ಣ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಕರ್ನಾಟಕ ಜನಪದ ವಿವಿಯ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ, ಮೂಡಬಿದಿರೆ ಧನಲಕ್ಷ್ಮೀ ಸಂಸ್ಥೆಯ ಶ್ರೀಪತಿ ಭಟ್, ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಸಂಸ್ಮರಣ ವೇದಿಕೆಯ ಗೌರವಾಧ್ಯಕ್ಷ ಭಾಗವತ ಅಗರಿ ರಘುರಾಮ ರಾವ್, ಅಧ್ಯಕ್ಷ ಪರಮೇಶ್ವರ ಐತಾಳ್, ಉಪಾಧ್ಯಕ್ಷ ಡಾ. ಬಿ. ಮುರಳೀಧರ ರಾವ್, ಪ್ರೊ. ಪಿ. ಕೃಷ್ಣಮೂರ್ತಿ, ಅಗರಿ ಭಾಸ್ಕರ ರಾವ್, ಅಗರಿ ಶ್ರೀನಿವಾಸ ರಾವ್, ನಿತೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಮೂಡಬಿದಿರೆ ಯಕ್ಷಗಾನ ಸಂಘಟಕ ಎಂ. ಶಾಂತಾರಾಮ ಕುಡ್ವ ಅಗರಿ ಸಂಸ್ಮರಣಾ ಭಾಷಣಗೈದರು. ಕಟೀಲು ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅಭಿನಂದನಾ ಭಾಷಣಗೈದರು. ವೇದಿಕೆಯ ಕಾರ್ಯಧ್ಯಕ್ಷ ಅಗರಿ ರಾಘವೇಂದ್ರ ರಾವ್ ಸುರತ್ಕಲ್ ಸ್ವಾಗತಿಸಿದರು. ಪಶುಪತಿ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್ :
ನೀಡಿದ ಪ್ರಶಸ್ತಿಯ ಮೊತ್ತವನ್ನು ನನ್ನ ಊರಿನ ನಾನು ಕಲಿತ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ನೀಡುತ್ತೇನೆ
– ಡಾ ಪ್ರಭಾಕರ ಜೋಷಿ

Kinnigoli-03041804

Comments

comments

Comments are closed.

Read previous post:
Kinnigoli-03041803
ಸೈಂಟ್ ಮೇರಿಸ್ ಟೇಬಲ್ ಮತ್ತು ಕುರ್ಚಿ ಹಸ್ತಾಂತರ

ಕಿನ್ನಿಗೋಳಿ : ತಾಳಿಪಾಡಿ ಬ್ರಹ್ಮಶ್ರೀ ನಾರಾಯಣ ಗುರು ಪರಿಪಾಲನಾ ಸಮಿತಿ(ರಿ) ವತಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತಿದೆ ಎಂದು ಸಮಿತಿ ಅಧ್ಯಕ್ಷ ಕುಶಲ ಪೂಜಾರಿ ಹೇಳಿದರು. ಕಿನ್ನಿಗೋಳಿ ಸೈಂಟ್ ಮೇರಿಸ್...

Close