ಪಾವಂಜೆ : ವಿಶ್ವ ಜಿಗೀಷದ್ ಯಾಗ ಚಾಲನೆ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗಕ್ಕೆ ಬುಧವಾರ ವಿದ್ಯುಕ್ತವಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಯಿತು.
ಯಾಗ ನಿರ್ದೇಶಕ ವೇದ ಕೃಷಿಕ ಕೆ.ಎಸ್.ನಿತ್ಯಾನಂದ ಅವರು ಶಾರಧ್ವತ ಯಜ್ಞಾಂಗಣದಲ್ಲಿ ವಿಶ್ವ ಜಿಗೀಷದ್ ಯಾಗದ ಬಗ್ಗೆ ಮಾರ್ಗದರ್ಶನ ನೀಡಿದರು. ಸುಮಂಗಲೆಯರು ಕುಂಭ ಕಲಶದೊಂದಿಗೆ ಗೌತಮೇಶ್ವರ ಶಿವಲಿಂಗ ಮತ್ತು ಮಹರ್ಷಿ ವಸಿಷ್ಠರ ಶಿಲಾ ಮೂರ್ತಿಯನ್ನು ಚಂಡೆ ವಾದ್ಯಗಳೊಂದಿಗೆ ಯಜ್ಞಾಂಗಣದಲ್ಲಿ ಪ್ರತಿಷ್ಠಾಪನೆಗೊಂಡಿತು.
ಯಾಗದ ಪ್ರಮುಖ ದೇವಳದ ಧರ್ಮದರ್ಶಿ ಡಾ.ಯಾಜಿ ನಿರಂಜನ್ ಭಟ್ ಹಾಗೂ ಮೊಕ್ತೇಸರ ಎಂ.ಶಶೀಂದ್ರಕುಮಾರ್ ವಿಶೇಷ ಪೂಜೆಯನ್ನು ಸಲ್ಲಿಸಿ ಯಾಗದ ಅಗ್ನಿ ಪ್ರತಿಷ್ಟೆಯನ್ನು ಪ್ರಜ್ವಲನಗೊಳಿಸಲಾಯಿತು. ಯಾಗ ಸಮಿತಿಯ ಪ್ರಮುಖರು ಶಿವಲಿಂಗಕ್ಕೆ ಜಲವನ್ನು ಅರ್ಪಿಸುವ ಮೂಲಕ ಸಾಮೂಹಿಕ ಯಾಗಕ್ಕೆ ಚಾಲನೆ ನೀಡಿದರು.
ಯಾಗ ಸಮಿತಿಯ ಪ್ರಮುಖರಾದ ಮುರ ಸದಾಶಿವ ಶೆಟ್ಟಿ, ಸುಕುಮಾರ್ ಬೊಳ್ಳೂರು, ಶಶೀಂದ್ರ ಎಂ. ಸಾಲ್ಯಾನ್, ರತ್ನಾಕರ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರ್, ಉದಯ ಬಿ. ಸುವರ್ಣ, ಕೃಷ್ಣಪ್ಪ ದೇವಾಡಿಗ, ಯೋಗೀಶ್ ರಾಮನಗರ, ದಯಾನಂದ ಹೆಜಮಾಡಿ, ರಜನಿ ದುಗ್ಗಣ್ಣ, ಜಿನರಾಜ್ ಸಾಲ್ಯಾನ್ ಹೆಜಮಾಡಿ, ಪ್ರಬೋದ್‌ಶ್ಚಂದ್ರ ಹೆಜಮಾಡಿ, ಗೀತಾಂಜಲಿ ಸುವರ್ಣ, ಮಹೇಶ್ ಶೆಟ್ಟಿ ತಿಮರೋಡಿ, ಜೀವನ್ ಪ್ರಕಾಶ್ ಕಾಮೆರೊಟ್ಟು, ಜ್ಯೋತಿ ರಾಮಚಂದ್ರ, ಪೀತಾಂಬರ ಶೆಟ್ಟಿಗಾರ್, ಜಗನ್ನಾಥ ಕರ್ಕೇರ, ಜೈಕೃಷ್ಣ ಕೋಟ್ಯಾನ್, ಉಮೇಶ್ ಪೂಜಾರಿ ಪಡುಪಣಂಬೂರು, ಶೋಭೇಂದ್ರ ಸಸಿಹಿತ್ಲು, ಸಾವಿತ್ರಿ ದಿವಾಕರ್ ಭಟ್, ವಿದ್ಯಾಶಂಕರ್, ಎಚ್.ರಾಮಚಂದ್ರ ಶೆಣೈ, ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು.

Kinnigoli-06041806

Comments

comments

Comments are closed.

Read previous post:
Kinnigoli-06041805
ಪಾವಂಜೆ ವಿಶ್ವಜಿತ್ ಯಾಗದಲ್ಲಿ ಮಾತೃ ಶಕ್ತಿ ಜಾಗೃತಿ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗದಲ್ಲಿ ಮಾತೃ ಶಕ್ತಿ ಜಾಗೃತಿಯ ವಿಶೇಷತೆಯನ್ನು ಕಾಣಲು ಸಾಧ್ಯವಿದೆ. ಶಾಂತಿ ಸ್ವರೂಪಿ ಹಾಗೂ ಭೂ...

Close