ಪಾವಂಜೆ ವಿಶ್ವಜಿತ್ ಯಾಗದಲ್ಲಿ ಮಾತೃ ಶಕ್ತಿ ಜಾಗೃತಿ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗದಲ್ಲಿ ಮಾತೃ ಶಕ್ತಿ ಜಾಗೃತಿಯ ವಿಶೇಷತೆಯನ್ನು ಕಾಣಲು ಸಾಧ್ಯವಿದೆ. ಶಾಂತಿ ಸ್ವರೂಪಿ ಹಾಗೂ ಭೂ ಸ್ವರೂಪಿಣಿ ಎಂದು ಮಾತೃ ವಾತ್ಸಲ್ಯದಿಂದ ಸ್ವಯಂ ಸೇವಕರಾಗಿ ದುಡಿಯುವ ಸಂಕಲ್ಪವನ್ನು ಹೊಂದಿದ್ದಾರೆ ಎಂದು ಚಿಕ್ಕಮಗಳೂರಿನ ವೇದ ಕೃಷಿಕ ಕೆ.ಎಸ್.ನಿತ್ಯಾನಂದ ಅವರು ಹೇಳಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗದ ಮಾತೃ ಮಂಡಳಿಯ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.
ದೇವಳದ ಆಡಳಿತ ಮೊಕ್ತೇಸರ ಎಂ. ಶಶೀಂದ್ರಕುಮಾರ್ ಆಧ್ಯಕ್ಷತೆ ವಹಿಸಿದ್ದರು.
ಯಾಗದ ವಕ್ತಾರ ಡಾ. ಸೋಂದಾ ಭಾಸ್ಕರ ಭಟ್ ಯಾಗದ ಮಹತ್ವ ತಿಳಿಸಿದರು.
ದೇವಳದ ಧರ್ಮದರ್ಶಿ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡಿದರು.
ಕ್ಷೇತ್ರದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳಾ ಸದಸ್ಯರಿಗೆ ತಮ್ಮ ತಮ್ಮ ಜವಾಬ್ದಾರಿಯನ್ನು ಹಂಚಲಾಯಿತು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ, ಮಾತೃ ಮಂಡಳಿಯ ಪ್ರಧಾನರಾದ ಸಾವಿತ್ರಿ ದಿವಾಕರ ಭಟ್ ಉಪಸ್ಥಿತರಿದ್ದರು.
ಮನಪಾದ ಮಾಜಿ ಮೇಯರ್ ರಜನಿ ದುಗ್ಗಣ್ಣ ಸ್ವಾಗತಿಸಿದರು, ಮಾತೃಮಂಡಳಿಯ ನಿರ್ವಾಹಕಿ ಚಿತ್ರಾ ಸುಕೇಶ್ ಸಸಿಹಿತ್ಲು ವಂದಿಸಿದರು, ಕಾರ್ಯಾಲಯ ಮುಖ್ಯಸ್ಥರಾದ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು ನಿರೂಪಿಸಿದರು.

Kinnigoli-06041805

Comments

comments

Comments are closed.

Read previous post:
Kinnigoli-06041804
ಮತದಾನ ನಮ್ಮೆಲ್ಲರ ಕರ್ತವ್ಯವಾಗಲಿ

ಕಿನ್ನಿಗೋಳಿ : ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣಾ ಸಮಯದಲ್ಲಿ ಮತದಾನ ಮಾಡುವುದು ಪ್ರತಿಯೋರ್ವ ನಾಗರಿಕನ ಕರ್ತವ್ಯ. ಗ್ರಾಮೀಣ ಭಾಗದಲ್ಲಿನ ಮತದಾರರನ್ನು ಮತದಾನದ ಬಗ್ಗೆ ಜಾಗೃತಿಗೊಳಿಸಲು ಸಂಘ ಸಂಸ್ಥೆಗಳು ಸಹಕಾರ...

Close