ಪಾವಂಜೆ ಹೊರೆಕಾಣಿಕೆ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವ ಭಾವಿಯಾಗಿ ಭಾನುವಾರ ಬ್ರಹ್ಮಕಲಶೋತ್ಸವಕ್ಕೆ ಹಳೆಯಂಗಡಿ, ಪಡುಪಣಂಬೂರು, ಹಾಗೂ ಕೆಮ್ರಾಲ್ ಪಂಚಾಯತ್ ವ್ಯಾಪ್ತಿಯ ಹಾಗೂ ಇನ್ನಿತರ ಕಡೆಗಳಿಂದ ಬೃಹತ್ ಹೊರೆಕಾಣಿಕೆಯ ಸಮರ್ಪಣಾ ಕಾರ್ಯಕ್ರಮ ನಡೆಯಿತು. ಹಳೆಯಂಗಡಿ ಒಳ ಪೇಟೆಯ ಮೂಲಕ ವಿವಿಧ ಚಂಡೆ, ತಾಸೆ ದೋಲು, ವಾದ್ಯ ಹಾಗೂ ಪೂರ್ಣ ಕುಂಭ ಕಲಶದೊಂದಿಗೆ, ಸಾಗಿ ಪಾವಂಜೆ ಕ್ಷೇತ್ರಕ್ಕೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಯಾಗದ ಉಪ ಸಮಿತಿಯ ಪ್ರಮುಖರು, ಸ್ವಯಂ ಸೇವಕರು, ಭಕ್ತಾಽಗಳು ಭಾಗವಹಿಸಿದ್ದರು.
ದೇವಳದಲ್ಲಿ ಯಾಗದ ಪ್ರಧಾನಿ ನಳಿನ್‌ಕುಮಾರ್ ಕಟೀಲು, ಯಾಗದ ನಿರ್ದೇಶಕ ಕೆ.ಎಸ್.ನಿತ್ಯಾನಂದ, ಧರ್ಮದರ್ಶಿ ಡಾ.ಯಾಜಿ.ನಿರಂಜನ್ ಭಟ್, ಮೊಕ್ತೇಸರ ಎಂ.ಶಶೀಂದ್ರಕುಮಾರ್, ಯಾಗದ ಪ್ರಮುಖರು ಹೊರೆಕಾಣಿಕೆಯನ್ನು ಕ್ಷೇತ್ರದಲ್ಲಿ ಬರಮಾಡಿಕೊಂಡರು.

Kinnigoli-10041801 Kinnigoli-10041802

Comments

comments

Comments are closed.

Read previous post:
Kinnigoli-06041806
ಪಾವಂಜೆ : ವಿಶ್ವ ಜಿಗೀಷದ್ ಯಾಗ ಚಾಲನೆ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗಕ್ಕೆ ಬುಧವಾರ ವಿದ್ಯುಕ್ತವಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಯಿತು. ಯಾಗ ನಿರ್ದೇಶಕ...

Close