ಪುನರೂರು ಬಾಲವಿಕಾಸ ಶಿಬಿರ ಉದ್ಘಾಟನೆ

ಕಿನ್ನಿಗೋಳಿ: ಮಕ್ಕಳಿಗೆ ಸನಾತನ ಸಂಸ್ಕೃತಿಯ ಅರಿವು , ಸಂಸ್ಕಾರ ಬಾಲ್ಯದಲ್ಲಿಯೇ ಕಲಿಸಿದಾಗ ಭವಿಷ್ಯದಲ್ಲಿ ಸನ್ನಡತೆಯ ಪ್ರಜೆಯಾಗಲು ಸಹಕಾರಿಯಗುತ್ತದೆ. ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ಪುನರೂರು ಪ್ರತಿಷ್ಠಾನ ( ರಿ ) ಇದರ ಆಶ್ರಯದಲ್ಲಿ ಮುಲ್ಕಿ ಜನವಿಕಾಸ ಸಮಿತಿ ಸಹಕಾರದಲ್ಲಿ ಭಾನುವಾರ ನಡೆದ ಬಾಲವಿಕಾಸ ಶಿಬಿರ – 2018 ( ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ ಉಚಿತ ಬೇಸಗೆ ಶಿಬಿರ ) ಉದ್ಘಾಟಿಸಿ ಮಾತನಾಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಆಧುನಿತೆಯತ್ತ ಮಾರುಹೋಗುತ್ತಿರುವ ಜೀವನ ಪದ್ಧತಿಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಧಾರ್ಮಿಕ ಸಾಮಾಜಿಕ ಕಳಕಳಿಯುಳ್ಳ ನೈತಿಕತೆಯ ಮಾರ್ಗದರ್ಶನ ನೀಡುವ ಕೆಲಸ ಆಗಬೇಕು ಎಂದು ಹೇಳಿದರು.
ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಉದ್ಯಮಿ ವಾಸುದೇವ ರಾವ್, ಪುನರೂರು ಶಾಲಾ ಸಂಚಾಲಕ ವಿನೋಭನಾಥ ಐಕಳ, ಪತ್ರಕರ್ತ ಹರಿಶ್ಚಂದ್ರ ಪಿ. ಸಾಲ್ಯಾನ್, ಜನವಿಕಾಸ ಸಮಿತಿಯ ಅಧ್ಯಕ್ಷೆ ಗೀತಾ ಶೆಟ್ಟಿ, ಯೋಗಗುರು ಜಯ ಮುದ್ದು ಶೆಟ್ಟಿ, ಶ್ಲೋಕ ಶಿಕ್ಷಕ ಜಿತೇಂದ್ರ ಭಟ್, ಸಮಿತಿಯ ದಾಮೋದರ ಶೆಟ್ಟಿ , ಭಾಗ್ಯ ಕೆರೆಕಾಡು, ಶಶಿಕರ್ ಕೆರೆಕಾಡು, ಜೀವನ್ ಶೆಟ್ಟಿ, ಶೋಭಾ ರಾವ್, ಪ್ರಾಣೇಶ್ ಭಟ್ ದೇಂದಡ್ಕ, ಮತ್ತಿತರರು ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ರಾಘವೇಂದ್ರ ಭಟ್ ವಂದಿಸಿದರು. ಸುಚಿತ್ರಾ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಪ್ರತಿದಿನ ಯೋಗ ಶಿಕ್ಷಕ ಜಯ ಮುದ್ದು ಶೆಟ್ಟಿ ಅವರಿಂದ ಯೋಗ ಕಲಿಕೆ, ಜಿತೇಂದ್ರ ರಾವ್ ಅವರಿಂದ ಶ್ಲೋಕ ಕಂಠಪಾಠ, ಸೋಂದಾ ಭಾಸ್ಕರ ಭಟ್ ಅವರಿಂದ ನೀತಿಕಥೆ, ವೆಂಕಿ ಫಲಿಮಾರು ಅವರಿಂದ ಅವೆಮಣ್ಣಿನ ಕಲಾಕೃತಿ ರಚನೆ, ಸುರೇಶ್ ಆಚಾರ್ಯ ಅವರಿಂದ ಭಜನೆ ತರಬೇತಿ ನಡೆಯಲಿದೆ.

Kinnigoli-09041804

Comments

comments

Comments are closed.

Read previous post:
Kinnigoli-09041803
ಸಸಿಹಿತ್ಲು : ನಡಾವಳಿ ಮಹೋತ್ಸವಕ್ಕೆ ಚಾಲನೆ

ಕಿನ್ನಿಗೋಳಿ: ಶ್ರೀ ಭಗವತೀ ದೇವಸ್ಥಾನ ಸಸಿಹಿತ್ಲುವಿನಲ್ಲಿ ವರ್ಷಾವ ನಡೆಯುವ ನಡಾವಳಿ ಮಹೋತ್ಸವವು ಭಾನುವಾರ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿತು. ನಾಗತಂಬಿಲ ಸೇವೆಯ ಹರಕೆಯೊಂದಿಗೆ ಆರಂಭಗೊಂಡು, ವಿವಿಧ ರೀತಿಯ...

Close