ಸ್ವಚ್ಚ ಪಾವಂಜೆ, ಶುಚಿತ್ವ ಅಭಿಯಾನ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವ ಭಾವಿಯಾಗಿ ಭಾನುವಾರ ಸ್ವಚ್ಚ ಪಾವಂಜೆ ಅಭಿಯಾನವನ್ನು ವಿವಿಧ ಸಂಘ ಸಂಸ್ಥೆಗಳು, ಯಾಗ ಸಮಿತಿಯ ಉಪ ಸಮಿತಿಯ ಸದಸ್ಯರು, ಸ್ವಯಂ ಸೇವಕರು ನಡೆಸಿದರು.
ಚಿಕ್ಕಮಗಳೂರಿನ ವೇದ ಕೃಷಿಕ ಕೆ.ಎಸ್.ನಿತ್ಯಾನಂದ ಸ್ವಚ್ಚ ಪಾವಂಜೆ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ದೇವಳದ ಡಾ.ಯಾಜಿ ನಿರಂಜನ ಭಟ್, ಎಂ.ಶಶೀಂದ್ರಕುಮಾರ್, ಮಂಗಳೂರಿನ ರಾಮಕೃಷ್ಣ ಮಿಷನ್‌ನ ಪಡುಪಣಂಬೂರು ಘಟಕ, ಹಳೆಯಂಗಡಿ ಘಟಕ, ವೇದವಿಜ್ಞಾನ ಮಂದಿರ ಚಿಕ್ಕಮಗಳೂರು, ಚಂದ್ರಮ್ಮ ವಾಸು ಭಟ್ಟ ಸ್ಮಾರಕ ಮಹಿಳಾ ಮಂಡಳಿ ಪಾವಂಜೆ, ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ, ಶ್ರೀ ವಿದ್ಯಾವಿನಾಯಕ ಯುವಕ, ಯುವತಿ ಮತ್ತು ಮಹಿಳಾ ಮಂಡಳಿ ಹಳೆಯಂಗಡಿ, ಓಂ ಕ್ರಿಕೇಟರ್ಸ್ ಪಾವಂಜೆ, ನಂದಿನಿ ಕ್ರಿಕೇಟರ್ಸ್ ಅರಂದು, ಫ್ರೇಂಡ್ಸ್ ಕ್ರಿಕೇಟರ‍್ಸ್ ಹಳೆಯಂಗಡಿ, ತೋಕೂರು ಯುವಕ ಸಂಘ, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, ಹಿಂದೂಸ್ತಾನಿ ಯೂತ್ ಕ್ಲಬ್ ಬೆಳ್ಳಾಯರು, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಹಳೆಯಂಗಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಳೆಯಂಗಡಿ, ಹಿಂದೂ ಜಾಗರಣ ವೇದಿಕೆ ಹಳೆಯಂಗಡಿ ಮತ್ತಿತರ ಸಂಘ ಸಂಸ್ಥೆಗಳು ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡರು.

Kinnigoli-09041805

Comments

comments

Comments are closed.

Read previous post:
Kinnigoli-09041804
ಪುನರೂರು ಬಾಲವಿಕಾಸ ಶಿಬಿರ ಉದ್ಘಾಟನೆ

ಕಿನ್ನಿಗೋಳಿ: ಮಕ್ಕಳಿಗೆ ಸನಾತನ ಸಂಸ್ಕೃತಿಯ ಅರಿವು , ಸಂಸ್ಕಾರ ಬಾಲ್ಯದಲ್ಲಿಯೇ ಕಲಿಸಿದಾಗ ಭವಿಷ್ಯದಲ್ಲಿ ಸನ್ನಡತೆಯ ಪ್ರಜೆಯಾಗಲು ಸಹಕಾರಿಯಗುತ್ತದೆ. ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಪುನರೂರು ಶ್ರೀ...

Close