ಕೊಯಿಕುಡೆ ಹಾಲು ಉತ್ಪಾದಕರ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದಲ್ಲಿ ಹಾಲು ಸೊಸೈಟಿಯನ್ನು ಸ್ಥಾಪಿಸಿ ಜನರನ್ನು ಆರ್ಥಿಕವಾಗಿ ಸಧೃಡರನ್ನಾಗಿಸಲು ಸಾಧ್ಯ ಎಂದು ಗುತ್ತಿನಾರ್ ಭೋಜ ಶೆಟ್ಟಿ ಹೇಳಿದರು.
ಪಂಜ – ಕೊಯಿಕುಡೆ ಹಾಲು ಉತ್ಪಾದಕರ ಸಹಕಾರಿ ಸಂಘ( ರಿ ) ಇದರ ನೂತನ ಕಟ್ಟಡ ನಂದಿನಿ ಕ್ಷೀರಧಾಮವನ್ನು ಉದ್ಘಾಟಿಸಿ ಮಾತನಾಡಿದರು.
ದ. ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅಧ್ಯಕ್ಷತೆವಹಿಸಿದರು. ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಶುಭ ಹಾರೈಸಿದರು.
ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸುಚರಿತ ಶೆಟ್ಟಿ ನೂತನ ಪಶು ಆಹಾರ ಕೊಠಡಿ ಉದ್ಘಾಟಿಸಿದರು.
ಕಟ್ಟಡಕ್ಕೆ ಸ್ಥಳ ಕೊಟ್ಟ ದಾನಿ ಪ್ರಕಾಶ್ ಶೆಟ್ಟಿ ನಲ್ಯಗುತ್ತು, ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಗಣೇಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ದ. ಕ . ಒಕ್ಕೂಟದ ನಿರ್ದೇಶಕ ಡಾ. ಕೆ. ಎಂ. ಕೃಷ್ಣ ಭಟ್, ಡಾ. ನಿತ್ಯಾನಂದ ಭಕ್ತ, ಎಸ್‌ಕೆಡಿಆರ್‌ಪಿ ಧರ್ಮಸ್ಥಳ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಪಂಜದಗುತ್ತು ವಿಶ್ವನಾಥ ಶೆಟ್ಟಿ , ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ , ಸತೀಶ್ ಶೆಟ್ಟಿ ಬಲಗುತ್ತು, ಕಸ್ತೂರಿ ಪಂಜ, ವಜ್ರಾಕ್ಷಿ ಶೆಟ್ಟಿ , ನಾಗೇಶ್ ಅಂಚನ್, ಸುರೇಶ್ ಪಂಜ, ಡಾ. ಮಧೂಸೂದನ ಕಾಮತ್ , ಡಾ. ವಿಷ್ಣುಮೂರ್ತಿ ಉಪಾಧ್ಯಾಯ, ವಿಸ್ತಣಾಧಿಕಾರಿ ಅಬ್ದುಲ್ ಶಮೀರ್ ಉಪಸ್ಥಿತರಿದ್ದತು.
ಸಂಘದ ಸದಸ್ಯೆ ಅನಾರೋಗ್ಯ ಪೀಡಿತೆ ಗುಲಾಬಿ ದೇವಾಡಿಗರಿಗೆ ಸಂಘದ ವತಿಯಿಂದ ೫೦೦೦ ರೂ ನಗದು ನೀಡಲಯಿತು.
ಸತೀಶ್ ಶೆಟ್ಟಿ ಬೈಲಗುತ್ತು ಸ್ವಾಗತಿಸಿದರು. ಉಪಾಧ್ಯಕ್ಷ ನವೀನ್ ಶೆಟ್ಟಿ ನಲ್ಯಗುತ್ತು ವಂದಿಸಿದರು. ಉದಯ ಶೆಟ್ಟಿ ಚೇಳಾಯರು ಕಾರ್ಯಕ್ರಮ ನಿರೂಪಿಸಿದರು.

Kinnigoli-11041802

Comments

comments

Comments are closed.

Read previous post:
Kinnigoli-11041801
ಎಸ್. ಕೋಡಿ ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತ

ಕಿನ್ನಿಗೋಳಿ : ಮೂಲ್ಕಿ - ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಎಸ್. ಕೋಡಿ ಬಳಿ ಸೋಮವಾರ ತಡರಾತ್ರಿ ದೂಪದ ಮರವೊಂದು ರಸ್ತೆಗೆ ಆಡ್ಡವಾಗಿ ಬಿದ್ದು ರಸ್ತೆ ಸಂಚಾರಕ್ಕೆ ತೊಡಕು ಉಂಟಾಗಿತ್ತು. ಮರ...

Close