ಪಾವಂಜೆ ಯಾಗಕ್ಕೆ ಚಾಲನೆ

ಕಿನ್ನಿಗೋಳಿ : ಹಳೆಯಂಗಡಿಯ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಳದಲ್ಲಿ ವಿಶೇಷ ಸಂಕಲ್ಪದಲ್ಲಿ ಹಮ್ಮಿಕೊಂಡಿರುವ ವಿಶ್ವ ಜಿಗೀಷದ್ ಯಾಗದ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿತು.
ಸೋಮವಾರ ಗೋಧೋಳಿ ಲಗ್ನದಲ್ಲಿ ಕಲಶ ಸ್ಥಾಪನೆ ಮಾಡಿಕೊಂಡು, ಗಂಗಾಪೂಜೆಯ ಮೂಲಕ ಸುಮಂಗಲೆಯರು ವೇದ ಮಂತ್ರಗಳ ಘೋಷಣೆಯ ಜೊತೆಗೆ ಗಂಗಾ ಕಳಶವನ್ನು ದೇವಳದ ಶಾರಧ್ವತ ಯಜ್ಞಾಂಗಣಕ್ಕೆ ಮೆರವಣಿಗೆಯಲ್ಲಿ ತಂದರು. ಯಜ್ಞಾಂಗಣದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗೌತಮೇಶ್ವರ ಶಿವಲಿಂಗಕ್ಕೆ ದೀಕ್ಷಾ ಬದ್ಧ ಹದಿನಾರು ದೀಕ್ಷಿತರು ಅಭಿಷೇಕ ಮಾಡಿ ಯಾಗ ಸಾಂಗತೆಯ ಸಂಕಲ್ಪವನ್ನು ಸ್ವೀಕರಿಸಿದರು.
ಮಂಗಳವಾರ ಮುಂಜಾನೆಯಿಂದ ಯಾಗದ ಅಗ್ನಿ ಕುಂಡವಾದ ಪ್ರಧಾನ ಕುಂಡ, ಸಂಘ ಪ್ರಾದ್ವ, ಋಷಿ ಸ್ವರ, ಕೃತವೇಶೀ, ಹಿಮರುಚಿ ಯಾಗದ ಕುಂಡದಲ್ಲಿ ವೈದಿಕರು ಮತ್ರೋಚ್ಚಾರದೊಂದಿಗೆ ಯಾಗದ ಪ್ರಕ್ರಿಯೆಯು ಆರಂಭಗೊಂಡಿತು.
ಶಾರಧ್ವತ ಯಜ್ಞಾಂಗಣದಲ್ಲಿ ಬೆಳಿಗ್ಗೆ ೬ರಿಂದ ೮, ಮಧ್ಯಾಹ್ನ 11ರಿಂದ 12-30, ಸಂಜೆ 3ರಿಂದ 4-30ರವರೆಗೆ ತ್ರಿಕಾಲ ಯಾಗಕ್ಕೆ. ಹಾಗೂ ಜನಪ್ರತಿನಿಧಿಗಳಿಗೆ ಸಂಜೆ ನಿತ್ಯ ಪೂರ್ಣಾಹುತಿಯನ್ನು ಸಂಜೆ 4-30ರಿಂದ 6ರವರೆಗೆ ಅವಕಾಶ ನೀಡಲಾಗಿದೆ.
ಈ ಸಂದರ್ಭ ಯಾಗದ ನಿರ್ದೇಶಕರಾದ ಕೆ.ಎಸ್.ನಿತ್ಯಾನಂದ ಅವರು ಯಾಗದ ಸ್ವರೂಪ ಹಾಗೂ ಮೂಲ ಉದ್ದೇಶಗಳನ್ನು ಹೇಳಿದರು. ಭಾರತ ಪರಿಕ್ರಮವ ಯಾತ್ರೆಯನ್ನು ಕೈಗೊಂಡಿದ್ದ ಸೀತಾರಾಂ ಕೆದಿಲಾಯ ಯಾಗದ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ದೇವಳದ ಧರ್ಮದರ್ಶಿ ಡಾ.ಯಾಜಿ ನಿರಂಜನ್ ಭಟ್, ಮೊಕ್ತೇಸರ ಎಂ.ಶಶೀಂದ್ರಕುಮಾರ್, ಯಾಗದ ವಕ್ತಾರ ಡಾ.ಸೋಂದಾ ಭಾಸ್ಕರ ಭಟ್ ಕಟೀಲು, ಯಾಗ ಉಪ ಸಮಿತಿಯ ಪ್ರಮುಖರು, ಮತ್ತಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ ಜಾತೂಕರ್ಣ ವೇದಿಕೆಯಲ್ಲಿ ಕಡಂಬೋಡಿ ಆಶ್ರಯ ಮಹಿಳಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಿತು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ವಯಂ ಸೇವಕರಾಗಿ ಅನ್ನಪ್ರಸಾದ ವಿತರಣೆಯಲ್ಲಿ ತೊಡಗಿಕೊಂಡಿದ್ದರು.

Kinnigoli-11041803

Comments

comments

Comments are closed.

Read previous post:
Kinnigoli-11041802
ಕೊಯಿಕುಡೆ ಹಾಲು ಉತ್ಪಾದಕರ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದಲ್ಲಿ ಹಾಲು ಸೊಸೈಟಿಯನ್ನು ಸ್ಥಾಪಿಸಿ ಜನರನ್ನು ಆರ್ಥಿಕವಾಗಿ ಸಧೃಡರನ್ನಾಗಿಸಲು ಸಾಧ್ಯ ಎಂದು ಗುತ್ತಿನಾರ್ ಭೋಜ ಶೆಟ್ಟಿ ಹೇಳಿದರು. ಪಂಜ - ಕೊಯಿಕುಡೆ ಹಾಲು ಉತ್ಪಾದಕರ ಸಹಕಾರಿ...

Close