ಪಾವಂಜೆ : ಜನಪ್ರತಿನಿಧಿಗಳಿಂದ ಪೂರ್ಣಾಹುತಿ

ಕಿನ್ನಿಗೋಳಿ : ಯಾಗದಲ್ಲಿ ಭಾಗವಹಿಸುವಾಗ ದಂಪತಿಗಳು ಯಾಗಕ್ಕೆ ಅನಿವಾರ್ಯವಲ್ಲ ಇದಕ್ಕೆ ಯುಗ ಯುಗಾಂತರದ ಐತಿಹ್ಯವಿದೆ. ಕೃತಯುಗದಲ್ಲಿ ಮರೀಚ ಮಹರ್ಷಿಗಳು ಅನ್ವೇಷಿಸಿ, ಪರಿಷ್ಕರಿಸಿ ಇದನ್ನು ಲೋಕಾರ್ಪಣೆ ಮಾಡಿದ್ದಾರೆ. ಎಂದು ಚಿಕ್ಕಮಗಳೂರಿನ ವೇದ ಕೃಷಿಕ ಕೆ.ಎಸ್.ನಿತ್ಯಾನಂದ ಹೇಳಿದರು.
ಹಳೆಯಂಗಡಿ ಬಳಿಯ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಳದಲ್ಲಿ ನಡೆಯುತ್ತಿರುವ ವಿಶ್ವ ಜಿಗೀಷದ್ ಯಾಗದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಬುಧವಾರ ಯಾಗದ ಬಗ್ಗೆ ಮಾಹಿತಿ ನೀಡಿದರು.
ಸಮಾನತೆಯನ್ನು ಸಾರುವುದೇ ಸಂಕಲ್ಪವಾಗಬೇಕು. ಸಮಾನತೆಯನ್ನು ಬಲವಂತವಾಗಿ ಹೇರಬಾರದು, ರಾಷ್ಟ್ರದ ಗೌರವ ಹೆಚ್ಚಿಸಬೇಕು. ದೇಶಕ್ಕಾಗಿ ತೊಡಗಿಸಿಕೊಳ್ಳುವ ಪ್ರಯತ್ನ ನಮ್ಮಿಂದಲೇ ಆರಂಭವಾಗಬೇಕು. ನಮ್ಮ ಜವಬ್ದಾರಿ ಅರಿತು ಕಾರ್ಯೋನ್ಮುಖರಾಗಬೇಕು ಇದಕ್ಕೆ ವಿಶ್ವಜಿಗೀಷದ್ ಯಾಗವು ಪ್ರೇರಣೆಯಾಗಲಿ ಎಂದರು.
ಈ ಸಂದರ್ಭ ಯಾಗದ ಬಗ್ಗೆ ಭಕ್ತರೊಂದಿಗೆ ವಿಶೇಷ ಸಂವಾದ ನಡೆಸಿದರು.
ದೇವಳದ ಧರ್ಮದರ್ಶಿ ಡಾ.ಯಾಜಿ ನಿರಂಜನ್ ಭಟ್, ಮೊಕ್ತೇಸರ ಎಂ.ಶಶೀಂದ್ರಕುಮಾರ್, ಸೀತಾರಾಮ ಕೆದಿಲಾಯ ಯಾಗದ ಉಪ ಸಮಿತಿಯ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ವಿಶ್ವ ಜಿಗೀಷದ್ ಯಾಗದ ಹಿನ್ನೆಲೆ
ಯಾಗವನ್ನು ಹೈಹಯ ಮಹಾರಾಜ ಮೊದಲು ಮಾಡಿದನು. ಯಾಗ ಪ್ರಕ್ರಿಯೆಯಲ್ಲಿ ಹಲವಾರು ದೋಷಗಳು ನುಸುಳಿದ ಕಾರಣ ಆತನಿಗೆ ಸಂಕಲ್ಪ ಸಿದ್ಧಿಸಲಿಲ್ಲ. ಯಾಗಾನುಷ್ಠಾನದ ಫಲ ಅವನಿಗೆ ಪ್ರಾಪ್ತವಾಗದೇ ಅವನ ಮಗನಾದ ಕೃತವೀರ್ಯನಿಗೆ ಪ್ರಾಪ್ತವಾಯಿತು. ಅವನ ಮಗನೇ ಲೋಕ ಪ್ರಸಿದ್ಧನಾದ ಕಾರ್ತವೀರ್ಯ, ತ್ರೇತೆಯಲ್ಲಿ ವಿಜಿಗೀಷು ಚಕ್ರವರ್ತಿಯು ಈ ಯಾಗವನ್ನು ಕೈಗೊಂಡರು. ಅವನ ಮೊಮ್ಮಗ ಅಜ, ಅಜನ ಮಗ ದಶರಥ, ದಶರಥನ ಮಗನೇ ಶ್ರೀರಾಮನಿಂದ ಯಾಗ ಪ್ರಕ್ರಿಯೆ ಮುಂದುವರಿಯಿತು ಎಂದು ವಿವರಿಸಿದರು.

ಜನಪ್ರತಿನಿಧಿಗಳಿಂದ ಪೂರ್ಣಾಹುತಿ
ವಿಶ್ವ ಜಿಗೀಷದ್ ಯಾಗದಲ್ಲಿ ಪೂರ್ಣಾಹುತಿಯನ್ನು ನೀಡಲು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೀತಾಂಜಲಿ ಸುವರ್ಣ, ವಿನೋದ್ ಕುಮಾರ್ ಬೊಳ್ಳೂರು, ಮನಪಾ ಸದಸ್ಯ ಗಣೇಶ್ ಹೊಸಬೆಟ್ಟು, ಮಾಜಿ ಮೇಯರ್ ರಜನಿ ದುಗ್ಗಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಉಮೇಶ್ ಪೂಜಾರಿ ಪಡುಪಣಂಬೂರು, ಕುಸುಮಾ ಚಂದ್ರಶೇಖರ್, ಪುಷ್ಪಾ, ಹೇಮಂತ್ ಅಮೀನ್, ದಿನೇಶ್ ಕುಲಾಲ್, ಜೊತೆಗೆ ಉಮಾನಾಥ ಕೋಟ್ಯಾನ್, ಮೀರಾ ಬಾ ಮತ್ತಿತರರು ಪಾಲ್ಗೊಂಡರು.

Kinnigoli-13041801

 

Comments

comments

Comments are closed.

Read previous post:
ತೋಕೂರು ಸ್ಪೋರ್ಟ್ಸ್ ಕ್ಲಬ್ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಎಪ್ರಿಲ್ 20 ರಿಂದ 21 ರ ವರೆಗೆ ಜರಗಲಿದೆ ಎಂದು ಕ್ಲಬ್...

Close