ತೋಕೂರು ಸ್ಪೋರ್ಟ್ಸ್ ಕ್ಲಬ್ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಎಪ್ರಿಲ್ 20 ರಿಂದ 21 ರ ವರೆಗೆ ಜರಗಲಿದೆ ಎಂದು ಕ್ಲಬ್ ಕಟ್ಟಡ ಸಮಿತಿ ಅಧ್ಯಕ್ಷ ಮೋಹನ್ ದಾಸ್ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಕಟ್ಟಡದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 1987 ರಲ್ಲಿ ಸ್ಥಾಪಿಸಲ್ಪಟ್ಟ ಸಂಸ್ಥೆಗೆ ಹೇಮನಾಥ ಅಮೀನ್ 2 ಸೆಂಟ್ಸ್ ಜಾಗವನ್ನು ನೀಡಿದ್ದು ಸುಮಾರು 25 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ.
ಎಪ್ರಿಲ್ 20 ರ ಶುಕ್ರವಾರ ನೂತನ ಕಟ್ಟಡದಲ್ಲಿ ಗಣ ಹೋಮ ಬಳಿಕ ಸಂಜೆ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ ವಠಾರದಲ್ಲಿ ಜರಗಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪ ವಹಿಸಲಿದ್ದಾರೆ. ಎಂ ಆರ್ ಪಿ ಎಲ್ ನ ಪ್ರಧಾನ ವ್ಯವಸ್ಥಾಪಕ ಲಕ್ಷ್ಮೀಕುಮಾರನ್ ದೀಪ ಪ್ರಜ್ವಲನ ಮಾಡಲಿದ್ದು ನೂತನ ಕಟ್ಟಡವನ್ನು ಶಾಸಕ ಕೆ ಅಭಯಚಂದ್ರ ಜ್ಯೆನ್ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ನೆರವೇರಿಸಲಿದ್ದು ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ತಂತ್ರಿ, ಸುರತ್ಕಲ್ ಚೊಕ್ಕಬೆಟ್ಟು ಜಾಮೀಯ ಮಸೀದಿಯ ಧರ್ಮಗುರುಗಳಾದ ಜನಾಬ್ ಅಬ್ದುಲ್ ಅಜೀಜ್ ದಾರಿಮಿ ಮತ್ತು ಪಕ್ಷಿಕೆರೆಯ ಸ್ಯೆಂಟ್ ಜೂಡ್ ಚರ್ಚಿನ ಧರ್ಮಗುರು ಆಂಡ್ರ್ಯೂ ಲಿಯೋ ಡಿಸೋಜ ಶುಭಾಶಂಸನೆಗ್ಯೆಯಲಿದ್ದಾರೆ. ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ, ಬೆಂಗಳೂರು ವಿ ವಿಯ ಪ್ರೊಫೆಸರ್ ಕೆ ವ್ಯೆ ನಾರಾಯಣ ಸ್ವಾಮಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭ ಕಟ್ಟಡದ ಸ್ಥಳದಾನಿ ಹೇಮನಾಥ ಅಮೀನ್ ಅವರನ್ನು ಅಭಿನಂದಿಸಲಾಗುವುದು ಹಾಗೂ ಅಂತರಾಷ್ಡ್ರೀಯ ಕಬಡ್ಡಿ ಆಟಗಾರ ರಿಶಾಂಕ್ ದೇವಾಡಿಗ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಉಮೇಶ್ ಮಿಜಾರ್ ತಂಡದಿಂದ ತೆಲಿಕೆದ ಗೊಂಚಿಲ್ ಕಾರ್ಯಕ್ರಮ ಜರಗಲಿರುವುದು. ಎಪ್ರಿಲ್ 21 ರ ಶನಿವಾರ ಬೆಳಿಗ್ಗೆ ಜರಗಲಿರುವ ನೂತನ ಧ್ವಜಸ್ಥಂಭದ ಉದ್ಘಾಟನೆಯನ್ನು ಉದ್ಯಮಿ ಜ್ಯೆಕೃಷ್ಣ ಕೋಟ್ಯಾನ್ ನೆರವೇರಿಸಲಿದ್ದು ಹಿರಿಯ ಕಾಷ್ಟ ಶಿಲ್ಪಿ ಪುರುಷೋತ್ತಮ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉದ್ಯಮಿ ಸುನೀಲ್ ಡಿ ರ‍್ಯೆ ಧ್ವಜಾರೋಹಣ ಗ್ಯೆಯಲಿದ್ದು ಸಂಜೆ ಜರಗಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಸಂಪರ್ಕ ಅಧಿಕಾರಿ ಡಾ ಗಣನಾಥ ಎಕ್ಕಾರು ವಹಿಸಲಿದ್ದು ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಮೂಡಾ ಸದಸ್ಯ ವಸಂತ ಬೆರ್ನಾಡ್, ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭ ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲವನ್ನು ಅಭಿನಂದಿಸಲಾಗುವುದು. ರಾತ್ರಿ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಕೆ ಕೆ ನೌಷದ್ ಮತ್ತು ಬಳಗ ಮಂಗಳೂರು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ರತನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕೋಶಾಧಿಕಾರಿ ಪ್ರಶಾಂತ್ ಕುಮಾರ್ ಬೇಕಲ್, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kateel000
ಕಟೀಲು ವರ್ಷಾವಧಿ ಉತ್ಸವ

ಕಟೀಲು: ವರ್ಷಾವಧಿ ಉತ್ಸವ

Close