ಎ.19-25 ಉಳೆಪಾಡಿ ದೇವಳ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಉಳೆಪಾಡಿಯ ಶ್ರೀ ಉಮಾ ಮಹೇಶ್ವರ ಮಹಾಗಣಪತಿ ದೇವಳದಲ್ಲಿ ನೂತನ ಗರ್ಭಗ್ರಹದಲ್ಲಿ ಬಿಂಬ ಪ್ರತಿಷ್ತೆ,ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಮಹೋತ್ಸವವು ಎಪ್ರಿಲ್ 19 ರಿಂದ 25 ರ ವರೆಗೆ ಜರಗಲಿದೆ ಎಂದು ದೇವಳದ ಜೀರ್ಣೋದ್ದಾರದ ಮುಂಬ್ಯೆ ಸಮಿತಿ ಅಧ್ಯಕ್ಷ ಬಾಲಕೃಷ್ಣ ಸಿ ಶೆಟ್ಟಿ ಉಳೆಪಾಡಿ ಗುತ್ತಬೆಟ್ಟು ತಿಳಿಸಿದರು.
ಶ್ರೀ ಉಮಾ ಮಹೇಶ್ವರ ಮಹಾಗಣಪತಿ ದೇವಳದಲ್ಲಿ ಜರಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ದಾನಿಗಳ ಸಹಕಾರದಿಂದ ನಿರ್ಮಾಣವಾದ ದೇವಳದಲ್ಲಿ ಎ. 23 ರ ಸೋಮವಾರ ಬೆಳಿಗ್ಗೆ ಎಡಪದವು ಬ್ರಹ್ಮಶ್ರೀ ವೆಂಕಟೇಶ ತಂತ್ರಿಗಳ ನೇತ್ರತ್ವದಲ್ಲಿ ಮುಂಡ್ಕೂರು ವೇದಮೂರ್ತಿ ಅನಂತ ಕೃಷ್ಣ ಆಚಾರ್ಯರ ಸಹ ಭಾಗಿತ್ವದಲ್ಲಿ ಬ್ರಹ್ಮ ಕಲಶಾಭಿಷೇಕವು ಜರಗಲಿದೆ. ಎ. 19 ರ ಗುರುವಾರ ಬೆಳಿಗ್ಗೆ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗಣಹೋಮ, ಸಂಜೆ ಸಾಮೂಹಿಕ ಪ್ರಾರ್ಥನೆ, ವಾಸ್ತು ಹೋಮ, ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಎ.20 ರ ಶುಕ್ರವಾರ ಬೆಳಿಗ್ಗೆ ಅಷ್ಟದ್ರವ್ಯ ಗಣಪತಿ ಹೋಮ, ನವಗ್ರಹ ಯಾಗ, ಬೆಳಿಗ್ಗೆ 11.05 ಕ್ಕೆ ಶ್ರೀ ಉಮಾ ಮಹೇಶ್ವರ ದೇವರ ಲಿಂಗ ಪ್ರತಿಷ್ಟೆ, ಗಣಪತಿ ಬಿಂಬ ಪ್ರತಿಷ್ಟೆ, ಅಷ್ಟಬಂಧ ಲೇಪನ, ಪ್ರಸನ್ನ ಪೂಜೆ, ಸಂಜೆ, ಪರಿವಾರ ಪ್ರತಿಷ್ಟೆ, ದುರ್ಗಾ ನಮಸ್ಕಾರ ಪೂಜೆ, ಎ.21 ರ ಶನಿವಾರ ಬೆಳಿಗ್ಗೆ ಮೃತ್ಯುಂಜಯ ಯಾಗ, ಬಿಂಬ ಶುದ್ದಿ, ದ್ಯೆವ ಪ್ರತಿಷ್ಟೆ, ಸಂಜೆ ಭದ್ರಕ ಮಂಡಲ ಪೂಜೆ, ಎ.22 ರ ರವಿವಾರ ಬೆಳಿಗ್ಗೆ ರುದ್ರ ಯಾಗ, ಕಲಶ ಮಂಡಲ ರಚನೆ, ಸಂಜೆ ಬ್ರಹ್ಮಕಲಶಾಧಿವಾಸ, ಆಧಿವಾಸ ಹೋಮಗಳು ನಡೆಯಲಿದೆ. ಎ.23 ರ ಸೋಮವಾರ ಬೆಳಿಗ್ಗೆ 10.50 ರ ಮಿಥುನ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ, ನ್ಯಾಸ ಪೂಜೆ, ಧ್ವಜಾರೋಹಣ, ಮಹಾಪೂಜೆ, ಮಧ್ಯಾಹ್ನ ಪಲ್ಲ ಪೂಜೆ, ಅನ್ನ ಸಂತರ್ಪಣೆ, ಸಂಜೆ ರಂಗ ಪೂಜೆ, ಉತ್ಸವ ಬಲಿ ಜರಗಲಿದೆ. ಎ.24 ರ ಮಂಗಳವಾರ ಬೆಳಿಗ್ಗೆ ಕಲಶಾಭಿಷೇಕ, ಸಂಜೆ ಕಟ್ಟೆ ಪೂಜೆ, ಭೂತ ಬಲಿ, ಕವಾಟ ಬಂಧನ, ಎ. 25 ರ ಬುಧವಾರ ಬೆಳಿಗ್ಗೆ ಕವಾಟೋಧ್ಘಾಟನೆ, ಚೂರ್ಣೋತ್ಸವ, ಸಂಜೆ ಯಾತ್ರಾ ಹೋಮ, ಅವಭೃತ, ಧ್ವಜಾವರೋಹಣ, ಮಂತ್ರಾಕ್ಷತೆ ಜರಗಲಿದೆಯೆಂದು ಅವರು ತಿಳಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಎ.20 ರ ಶುಕ್ರವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಶ್ರೀ ಕ್ಷೇತ್ರ ಮುಂಡ್ಕೂರಿನ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ಆಚಾರ್ಯ ನೆರವೇರಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ರಂಗಕರ್ಮಿ ಚಂದ್ರಶೇಖರ ಸುವರ್ಣ ಮೂಲ್ಕಿ ಮತ್ತು ಮುಂಡ್ಕೂರು ಶ್ರೀ ವಿದ್ಯಾವರ್ಧಕ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸವಿತಾ ಸದಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಯುವವಾಹಿನಿ ಮೂಲ್ಕಿ ಘಟಕದವರಿಂದ ತುಳುನಾಡ ವ್ಯೆಭವ ಕಾರ್ಯಕ್ರಮ ಜರಗಲಿದೆ. ಎ.21ರ ಶನಿವಾರ ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ವ್ಯೆವಿಧ್ಯಮಯ ಕಾರ್ಯಕ್ರಮಗಳು, ಮುಂಡ್ಕೂರು ಜೇಸಿಐ, ಭಾರ್ಗವ ಜೇಸಿರೆಟ್ ಮತ್ತು ಜ್ಯೂನಿಯರ್ ಜೇಸಿ ವಿಭಾಗದ ವತಿಯಿಂದ ನೃತ್ಯ ವ್ಯೆಭವ, ಬೆಳ್ಮಣ್ ಹೊಸಮಾರು ಹಳೆ ವಿದ್ಯಾರ್ಥಿ ಸಂಘದ ಸದಸ್ಯರಿಂದ ತೂಪಿನಾಯೆ ಒರಿ ಉಲ್ಲೆ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ. ಎ.22 ರ ಬಾನುವಾರ ಸಂಜೆ ಜರಗಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೇಮಾರು ಸಾಂದಿಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು ಶ್ರೀ ಕ್ಷೇತ್ರ ಕಟೀಲು ದೇವಳ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ, ಶ್ರೀ ಕ್ಷೇತ್ರ ಮುಂಡ್ಕೂರು ದೇವಳ ಅರ್ಚಕ ಅನಂತಕೃಷ್ಣ ಆಚಾರ್ಯ, ಮಧುಪತಿ ಆಚಾರ್ಯ, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಏಳಿಂಜೆ ಶ್ರೀ ಲಕ್ಷ್ಮಮೀ ಜನಾರ್ದನ ಮಹಾಗಣಪತಿ ದೇವಳ ಅರ್ಚಕ ಗಣೇಶ್ ಭಟ್ ಏಳಿಂಜೆ, ಮೂಲ್ಕಿ ಪೊಲೀಸ್ ಠಾಣಾ ಉಪ ನಿರೀಕ್ಷಕ ಶೀತಲ್ ಅಲಗೂರು, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯೆ ರಶ್ಮಿ ಆಚಾರ್ಯ, ಐಕಳ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಮತ್ತಿತರರು ಉಪಸ್ಥಿತರಿರುವರು.
ಸಂಜೆ ಗೌತಮ್ ನಾಯಕ್ ಮತ್ತು ಬಳಗದಿಂದ ಕೊಳಲು ವಾದನ, ರಾತ್ರಿ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಲಯನ್ ಕಿಶೋರ್ ಡಿ ಶೆಟ್ಟಿ ತಂಡದಿಂದ ಕಟೀಲ್ದಪ್ಪೆ ಉಳ್ಳಾಲ್ದಿ ತುಳು ಪೌರಾಣಿಕ ನಾಟಕ ಪ್ರದರ್ಶನ ಜರಗಲಿದೆ, ಎ.23 ರ ಸೋಮವಾರ ಸಂಜೆ ಜರಗಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಮೂಡಬಿದ್ರೆ ಶಾಸಕ ಕೆ ಅಭಯಚಂದ್ರ ಜ್ಯೆನ್ ವಹಿಸಲಿದ್ದು, ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಕಟೀಲು ದೇವಳದ ಅರ್ಚಕ ವೇದಮೂರ್ತಿ ಲಕ್ಷ್ಮೀ ನಾರಾಯಣ ಆಸ್ರಣ್ಣ ಶುಭಾ ಶಂಸನೆಗ್ಯೆಯಲಿದ್ದು, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ, ಮೂಲ್ಕಿ ಶ್ರೀ ಕ್ಷೇತ್ರ ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿ, ಶ್ರೀ ಕ್ಷೇತ್ರ ಕಟೀಲು ದೇವಳದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಳದ ಆಡಳಿತ ಮೊಕ್ತೇಸರ ಶಿವರಾಮ್ ಶೆಟ್ಟಿ ಅಜೆಕಾರು, ಮುಂಬೈ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ, ರೋಹಿತ್ ಹೆಗ್ಡೆ ಎರ್ಮಾಳು, ಐಕಳ ಹರೀಶ್ ಶೆಟ್ಟಿ, ಕಿನ್ನಿಗೋಳಿಯ ಯುಗಪುರುಷದ ಕೆ ಭುವನಾಭಿರಾಮ ಉಡುಪ ಮತ್ತಿತರರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ-ಸಾಹಿತ್ಯ ಸಂಭ್ರಮ. ರಾತ್ರಿ ಕಿನ್ನಿಗೋಳಿಯ ವಿಜಯ ಕಲಾವಿದರಿಂದ ಬಿಲೆ ಕಟ್ಟರೆ ಆವಂದಿನ ತುಳು ನಾಟಕ ಪ್ರದರ್ಶನ, ಎ.24 ರ ಮಂಗಳವಾರ ರಾತ್ರಿ ಕೆರೆಕಾಡಿನ ಶ್ರಿ ವಿನಾಯಕ ಮಕ್ಕಳ ಮೇಳದಿಂದ ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನ ಜರಗಲಿದೆಯೆಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ರಾಜೇಶ್ ಶೆಟ್ಟಿ ಪುಲ್ಲೋಡಿಬೀಡು ತಿಳಿಸಿದರು. ಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಕಾರ್ಯಧ್ಯಕ್ಷ ದಿವಾಕರ ಚೌಟ ಬಡಗು ಮನೆ, ನಾರಾಯಣ ಶೆಟ್ಟಿ, ರಾಮದಾಸ್ ಭಟ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಬಡಗುಮನೆ, ಕೋಶಾಧಿಕಾರಿ ನವೀನ್ ಶೆಟ್ಟಿ ಕೃಷ್ಣ ಶೆಟ್ಟಿ, ರವೀಂದ್ರ ಶೆಟ್ಟಿ ಉಳೆಪಾಡಿಗುತ್ತು ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-16041807
ಕಟೀಲು ದೇವಳ : ಧ್ವಜಾರೋಹಣ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಮಧ್ಯಾಹ್ನ ಧ್ವಜಾರೋಹಣ ನಡೆಯಿತು.

Close