ಪಾವಂಜೆ ಯಾಗ : ಪ್ರಮುಖರ ಭೇಟಿ

ಕಿನ್ನಿಗೋಳಿ : ಹಳೆಯಂಗಡಿ ಬಳಿಯ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ನಡೆಯುತ್ತಿರುವ ವಿಶ್ವ ಜಿಗೀಷದ್ ಯಾಗದಲ್ಲಿ ಶುಕ್ರವಾರ ನಡೆದ ನಾಲ್ಕನೇ ದಿನದಲ್ಲಿ ವಿವಿಧ ಜನಪ್ರತಿನಿಧಿಗಳು ಭಾಗವಹಿಸಿ ಪೂರ್ಣಾಹುತಿಯಲ್ಲಿ ಭಾಗವಹಿಸಿದರು.
ಯಾಜ್ಞಾಂಗಣಕ್ಕೆ ಚಿನ್ಮಯ ಮಿಷನ್‌ನ ಮುಖ್ಯಸ್ಥರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಭೇಟಿ ನೀಡಿ ಯಾಗ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ವಟುಗಳಿಗೆ ಉಪನಯನವು ವೇದೋಕ್ತವಾಗಿ ನಡೆಯಿತು.
ಯಾಗದ ಕಾರ್ಯಕ್ರಮದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಮುಲ್ಕಿ ಮೂಡಬಿದ್ರೆ ಶಾಸಕ ಕೆ.ಅಭಯಚಂದ್ರ, ಜನಪ್ರತಿನಿಧಿಗಳು ಭೇಟಿ ನೀಡಿ ಪೂರ್ಣಾಹುತಿಯಲ್ಲಿ ಭಾಗವಹಿಸಿದರು.
ಮಹರ್ಷಿ ಜಾತೂಕರ್ಣ ವೇದಿಕೆಯಲ್ಲಿ ಕೊಲೆಕಾಡಿ ವಿಶ್ವಕರ್ಮ ಮಹಿಳಾ ಮಂಡಳಿ ಭಜನಾ ಸಂಕೀರ್ತನೆ ನಡೆಸಿದರು. ಕಲ್ಲಡ್ಕ ವಿಠಲ ನಾಯಕ್ ಅವರಿಂದ ಸಾಹಿತ್ಯ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಿತು.

Kinnigoli-16041802 Kinnigoli-16041803

Comments

comments

Comments are closed.

Read previous post:
Kinnigoli-16041801
ಪಾವಂಜೆ ಯಾಗದಲ್ಲಿ ಚಿಂತನ ಮಂಥನ

ಕಿನ್ನಿಗೋಳಿ : ನಮ್ಮಲ್ಲಿನ ಸತ್ಕರ್ಮಗಳಿಗೂ ಜಿಎಸ್‌ಟಿ ಮಾದರಿ ತೆರಿಗೆ ಪಾವತಿ ಮಾಡಬೇಕು, ಯಜ್ಞ ಯಾಗಾದಿಗಳ ಮೂಲಕ ಆಧ್ಯಾತ್ಮಿಕತೆಯ ಚಿಂತನೆಗಳನ್ನೇ ಮೂಲ ತೆರಿಗೆಯಾಗಿ ಪಾವತಿಸುವಂತಹ ಪ್ರವೃತ್ತಿ ನಮ್ಮದಾಗಬೇಕು ಜೀವನದಲ್ಲಿ ಇದು ಅನಿವಾರ್ಯ...

Close