ಪಕ್ಷಿಕೆರೆ : ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ

ಕಿನ್ನಿಗೋಳಿ : ಡಾ| ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು ಸ್ವಸ್ಥ ಸಮಾಜದ ನಿರ್ಮಾಣ ಮಾಡಬೇಕು ಎಂದು ಶ್ರೀಧರ್ ಪಕ್ಷಿಕೆರೆ ಹೇಳಿದರು.
ಪಕ್ಷಿಕೆರೆ ಶ್ರೀ ವೈದ್ಯನಾಥ ಯುವಕ ಮಂಡಲದ ಆಶ್ರಯದಲ್ಲಿ ಶ್ರೀ ಕೋರ‍್ದಬ್ಬು ದೈವಸ್ಥಾನ ವಠಾರದ ಅಂಬೇಡ್ಕರ್ ಭವನದಲ್ಲಿ ಡಾ| ಬಿ.ಆರ್.ಅಂಬೇಡ್ಕರ್ ಅವರ ೧೨೭ ನೇ ಜನ್ಮ ದಿನೋತ್ಸವದ ಸಂದರ್ಭ ಉಪನ್ಯಾಸ ನೀಡಿ ಮಾತನಾಡಿದರು.
ಪಕ್ಷಿಕೆರೆ ಶ್ರೀ ಕೋರ‍್ದಬ್ಬು ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಾಧಿತ್ಯ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು, ಪಿಡಿಒ ರಮೇಶ್ ರಾಥೋಡ್, ಕಟೀಲು ಗ್ರಾಮ ಪಂಚಾಯಿತಿ ಪಿಡಿಒ ಪ್ರಕಾಶ್ ಬಿ., ಪಂಚಾಯಿತಿ ಸದಸ್ಯ ಮಯ್ಯದ್ದಿ, ಪಕ್ಷಿಕೆರೆ ಶ್ರೀ ಕೋರ‍್ದಬ್ಬು ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಸುಭಾಷಿಣಿ, ಪಕ್ಷಿಕೆರೆ ಶ್ರೀ ವೈದ್ಯನಾಥ ಯುವಕ ಮಂಡಲ ಉಪಾಧ್ಯಕ್ಷ ದಯಾನಂದ, ಗುರಿಕಾರ ಸತೀಶ್ ಅಮೀನ್, ದಲಿತ ಸಂಘರ್ಷ ಸಮಿತಿಯ ರುಕ್ಮಯ್ಯ ಕಟೀಲು, ಕಮಲಾಕ್ಷ ಮತ್ತಿತರರು ಉಪಸ್ಥಿತರಿದ್ದರು.
ತಾರಾ ಪ್ರಾರ್ಥಿಸಿದರು. ನಿತಿನ್ ವಾಸ್ ಸ್ವಾಗತಿಸಿದರು. ಧನು ಕಾರ್ಯಕ್ರಮ ನಿರೂಪಿಸಿದರು.

Kinnigoli-16041806

Comments

comments

Comments are closed.

Read previous post:
Kinnigoli-16041805
ಕಟೀಲು : ಡಾ| ಬಿ.ಆರ್.ಅಂಬೇಡ್ಕರ್ ಜಯಂತಿ

ಕಿನ್ನಿಗೋಳಿ : ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ಶಾರದಾಸದನ ಸಭಾಭವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಮಾಜ ಅಧ್ಯಾಪಕ ಪುಂಡಲೀಕ ಕೊಠಾರಿ ಡಾ. ಬಿ.ಆರ್.ಅಂಬೇಡ್ಕರ್ ಜೀವನಚರಿತ್ರೆಯ...

Close