ಪಾವಂಜೆ ಯಾಗದಲ್ಲಿ ಚಿಂತನ ಮಂಥನ

ಕಿನ್ನಿಗೋಳಿ : ನಮ್ಮಲ್ಲಿನ ಸತ್ಕರ್ಮಗಳಿಗೂ ಜಿಎಸ್‌ಟಿ ಮಾದರಿ ತೆರಿಗೆ ಪಾವತಿ ಮಾಡಬೇಕು, ಯಜ್ಞ ಯಾಗಾದಿಗಳ ಮೂಲಕ ಆಧ್ಯಾತ್ಮಿಕತೆಯ ಚಿಂತನೆಗಳನ್ನೇ ಮೂಲ ತೆರಿಗೆಯಾಗಿ ಪಾವತಿಸುವಂತಹ ಪ್ರವೃತ್ತಿ ನಮ್ಮದಾಗಬೇಕು ಜೀವನದಲ್ಲಿ ಇದು ಅನಿವಾರ್ಯ ಎಂದು ಚಿಕ್ಕಮಗಳೂರಿನ ವೇದ ಕೃಷಿಕ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ಹೇಳಿದರು.
ಹಳೆಯಂಗಡಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ಗುರುವಾರ ನಡೆದ ವಿಶ್ವ ಜಿಗೀಷದ್ ಯಾಗದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಯಾಗದ ಬಗ್ಗೆ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದರು. ಪೌರಾಣಿಕ ಕಥಾನಕಗಳು ಕೇವಲ ನೋಡಲು ಕೇಳಲು ಮಾತ್ರ ಸೀಮಿತವಲ್ಲ ಬದಲಾಗಿ ಅದರಲ್ಲಿನ ಸತ್ವ ಭರಿತ ಸತ್ಯಗಳು ನಮ್ಮ ಬದುಕನ್ನು ಆವರಿಸಬೇಕು, ನಮ್ಮ ತಪ್ಪುಗಳಿಂದ ನಾವೇ ಸುಳಿಯಲ್ಲಿ ಸಿಲುಕಿಕೊಳ್ಳುತ್ತೇವೆ ಆಗ ಭಗವಂತನ ಸ್ಮರಣೆ ಮಾಡುವ ನಾವು ತಪ್ಪಿಗಿಂತ ಮೊದಲೇ ಚಿಂತನೆ ಮಾಡಿದರೇ ನಂತರ ಪಡುವ ಪಶ್ಚಾತ್ತಾಪ ಕಾಡುವುದಿಲ್ಲ ಎಂದರು.
ಈ ಸಂದರ್ಭ ದೇವಳದ ಧರ್ಮದರ್ಶಿ ಡಾ.ಯಾಜಿ ನಿರಂಜನ್ ಭಟ್, ಮೊಕ್ತೇಸರ ಎಂ.ಶಶೀಂದ್ರಕುಮಾರ್, ಸೀತಾರಾಮ ಕೆದಿಲಾಯ ಯಾಗದ ಉಪ ಸಮಿತಿಯ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

Kinnigoli-16041801

Comments

comments

Comments are closed.

Read previous post:
ಎ.19-25 ಉಳೆಪಾಡಿ ದೇವಳ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಉಳೆಪಾಡಿಯ ಶ್ರೀ ಉಮಾ ಮಹೇಶ್ವರ ಮಹಾಗಣಪತಿ ದೇವಳದಲ್ಲಿ ನೂತನ ಗರ್ಭಗ್ರಹದಲ್ಲಿ ಬಿಂಬ ಪ್ರತಿಷ್ತೆ,ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಮಹೋತ್ಸವವು ಎಪ್ರಿಲ್ 19 ರಿಂದ 25 ರ ವರೆಗೆ ಜರಗಲಿದೆ...

Close