ಪುನರೂರು : ಅಕ್ಯುಪ್ರೆಶರ್ ಸುಜೋಕ್ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ : ನಮ್ಮ ಆರೋಗ್ಯವನ್ನು ಮದ್ದಿನ ಅಗತ್ಯವಿಲ್ಲದೆ ಕಡಿಮೆ ವೆಚ್ಚದ ಅಕ್ಯುಪ್ರೆಶರ್ ಮತ್ತು ಸುಜೋಕ್ ಚಿಕಿತ್ಸಾ ವಿಧಾನದಲ್ಲಿ ಸರಿಪಡಿಸಬಹುದು ಎಂದು ವೈದ್ಯ ಡಾ. ಪಿ. ಸುಬ್ರಹ್ಮಣ್ಯ ಭಟ್ ಹೇಳಿದರು. ವಿಪ್ರ ಸಂಪದ ಪುನರೂರು ನೇತೃತ್ವದಲ್ಲಿ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಶನಿವಾರ ನಡೆದ ಅಂಗೈಯಲ್ಲಿ ಆರೋಗ್ಯ ಉಚಿತ ಅಕ್ಯುಪ್ರೆಶರ್ ಮತ್ತು ಸುಜೋಕ್ ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂತಹ ಚಿಕಿತ್ಸೆಗಳು ಬಡವರ್ಗಕ್ಕೆ ತಲುಪಬೇಕು ಅದರಿಂದ ದುಬಾರಿ ವೆಚ್ಚದ ಮದ್ದಿನ ಖರ್ಚು ಕಡಿಮೆ ಮಾಡಬಹುದು ಎಂದು ಹೇಳಿದರು.
ಉದ್ಯಮಿ ಪಟೇಲ್ ವಾಸುದೇವ ರಾವ್ ಅಧ್ಯಕ್ಷತೆ ವಹಿಸಿದ್ದರು. ಯುಗಪುರುಷದ ಕೆ. ಭುವನಾಭಿರಾಮ ಉಡುಪ, ವಿಪ್ರಸಂಪದ ಅಧ್ಯಕ್ಷ ಜನಕರಾಜ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು. ಪ್ರಾಣೇಶ್ ಭಟ್ ದೇಂದಡ್ಕ ಕಾರ್ಯಕ್ರಮ ನಿರೂಪಿಸಿದರು.

Kinnigoli-16041804

Comments

comments

Comments are closed.

Read previous post:
Kinnigoli-16041803
ಪಾವಂಜೆ ಯಾಗ : ಪ್ರಮುಖರ ಭೇಟಿ

ಕಿನ್ನಿಗೋಳಿ : ಹಳೆಯಂಗಡಿ ಬಳಿಯ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ನಡೆಯುತ್ತಿರುವ ವಿಶ್ವ ಜಿಗೀಷದ್ ಯಾಗದಲ್ಲಿ ಶುಕ್ರವಾರ ನಡೆದ ನಾಲ್ಕನೇ ದಿನದಲ್ಲಿ ವಿವಿಧ ಜನಪ್ರತಿನಿಧಿಗಳು ಭಾಗವಹಿಸಿ ಪೂರ್ಣಾಹುತಿಯಲ್ಲಿ...

Close