ಪುನರೂರು : ಬಾಲವಿಕಾಸ ಶಿಬಿರ ಸಮಾರೋಪ

ಕಿನ್ನಿಗೋಳಿ : ಬಾಲ್ಯದಲ್ಲಿ ಮಕ್ಕಳಿಗೆ ಸಂಸ್ಕಾರ , ಸಂಸ್ಕೃತಿ ನಮ್ಮ ಆಚಾರ ವಿಚಾರ ಹಾಗೂ ಸೃಜನಶೀಲತೆಯ ಪಾಠ ಹೇಳುವ ಕೆಲಸ ಇಂತಹ ಶಿಬಿರಗಳಿಂದ ನಡೆದಿದೆ. ಜನಪಯೋಗಿ ಕೆಲಸ ಮಾಡುವ ಮೂಲಕವಾಗಿ ಪುನರೂರು ಪ್ರತಿಷ್ಠಾನ ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದು ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಕೆ. ಜಗದೀಶ ಹೊಳ್ಳ ಹೇಳಿದರು.
ಪುನರೂರು ಪ್ರತಿಷ್ಠಾನ ಆಶ್ರಯದಲ್ಲಿ ಜನವಿಕಾಸ ಸಮಿತಿ ಮುಲ್ಕಿ ಸಹಕಾರದೊಂದಿಗೆ ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಗಂಣದಲ್ಲಿ ಭಾನುವಾರ ನಡೆದ ಬಾಲ ವಿಕಾಸ ಶಿಬಿರ – 2018 ಮಕ್ಕಳ ಬೌದ್ಧಿಕ ಬೆಳವಣಿಗಾಗಿ ಉಚಿತ ಬೇಸಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯೋಗಗುರು ಜಯಮುದ್ದು ಶೆಟ್ಟಿ, ಜೀತೇಂದ್ರ ವಿ. ರಾವ್, ಸೋಂದಾ ಭಾಸ್ಕರ ಭಟ್, ವೆಂಕಿ ಪಲಿಮಾರು, ಸುರೇಶ್ ಆಚಾರ್ಯ ಅವರನ್ನು ಗೌರವಿಸಲಾಯಿತು.
ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ. ಶೆಟ್ಟಿ ಪ್ರಮಾಣ ಪತ್ರ ವಿತರಿಸಿದರು.
ಅತಿಕಾರಿಬೆಟ್ಟು ಹಾಲು ಉತ್ಪದಕರ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ಬರ್ಕೆತೋಟ, ಯಕ್ಷಲಹರಿಯ ಅಧ್ಯಕ್ಷ ಪಿ. ಸತೀಶ್ ರಾವ್, ಎಚ್. ಕೆ. ಉಷಾರಾಣಿ, ಜನವಿಕಾಸ ಸಮಿತಿಯ ಅಧ್ಯಕ್ಷೆ ಗೀತಾ ಶೆಟ್ಟಿ, ಟ್ರಸ್ಟ್ ಸುರೇಶ್ ರಾವ್, ಭಾಗ್ಯ ರಾಜೇಶ್, ಶೋಭಾ ರಾವ್, ಆನಂದ ಮೇಲಾಂಟ, ದಾಮೋದರ ಶೆಟ್ಟಿ, ಜೀವನ್ ಶೆಟ್ಟಿ, ಪ್ರಾಣೇಶ್ ಭಟ್ ದೇಂದಡ್ಕ ಮತ್ತಿತರರು ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಭಾಗ್ಯ ರಾಜೇಶ್ ಪ್ರಮಾಣ ಪತ್ರ ಪಟ್ಟಿಯನ್ನು ವಾಚಿಸಿದರು. ರಾಘವೇಂದ್ರ ಭಟ್ ವಂದಿಸಿದರು. ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-16041808

Comments

comments

Comments are closed.

Read previous post:
Kinnigoli-16041806
ಪಕ್ಷಿಕೆರೆ : ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ

ಕಿನ್ನಿಗೋಳಿ : ಡಾ| ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು ಸ್ವಸ್ಥ ಸಮಾಜದ ನಿರ್ಮಾಣ ಮಾಡಬೇಕು ಎಂದು ಶ್ರೀಧರ್ ಪಕ್ಷಿಕೆರೆ ಹೇಳಿದರು. ಪಕ್ಷಿಕೆರೆ ಶ್ರೀ ವೈದ್ಯನಾಥ ಯುವಕ...

Close