ಶಾಂತಿ, ಸಹನೆಗೆ ಯಾಗವೇ ಪ್ರೇರಕ

ಕಿನ್ನಿಗೋಳಿ : ಮನಸ್ಸಿಗೆ ಶಾಂತಿ, ಸಹನೆಗೆ ಪ್ರೇರಣೆ ನೀಡಲು ಯಾಗಗಳು ಸಹಕಾರಿಯಾಗಿವೆ. ನಮ್ಮ ಸನಾತನ ಋಷಿ ಮುನಿಗಳು ಶೋಸಿದ ಯಾಗ ಪ್ರಕ್ರಿಯೆಗಳು ಲೋಕದ ಒಳಿತನ್ನು ಹಾರೈಸುತ್ತವೆ. ತ್ಯಾಗಮಯ ಬದುಕಿನ ಸಂದೇಶವನ್ನು ಸಾರುವ ಪ್ರಯತ್ನ ಇದರಲ್ಲಿದೆ ಎಂದು ಬಾಳೆಕುದ್ರು ಶ್ರೀ ಮಠದ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ನಡೆಯುತ್ತಿರುವ ವಿಶ್ವ ಜಿಗೀಷದ್ ಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸಿ ನಂತರ ನಡೆದ ಧಾರ್ಮಿಕ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಸಮಾಜದ ಮೇಲಿನ ಪ್ರೀತಿ, ರಾಷ್ಟ್ರಪ್ರೇಮ, ಸರ್ವರ ಹಿತಚಿಂತನೆಯಲ್ಲಿ ನಡೆದ ಯಾಗವು ಪ್ರತೀಯೋರ್ವ ಪ್ರಜೆಯಲ್ಲಿ ಒಳಿತಾಗಬೇಕು. ಪಾವಂಜೆಯಲ್ಲಿ ನಡೆದ ಯಾಗದಲ್ಲಿ ಸಹ ಸಾಮೂಹಿಕವಾಗಿ ಸ್ವಯಂ ಸೇವಕ ಬಂಧುಗಳು ಮುಕ್ತವಾಗಿ ಭಾಗವಹಿಸಿರುವುದು ವಿಶೇಷವಾಗಿದೆ. ಇದು ಸಹ ದೇಶ ಭಕ್ತಿಯ ಸಾರುತ್ತದೆ ಎಂದರು.
ಈ ಸಂದರ್ಭ ಸ್ವಾಮೀಜಿಯವರನ್ನು ದೇವಳದ ವತಿಯಿಂದ ದೇವಳದ ಮೊಕ್ತೇಸರರಾದ ಎಂ.ಶಶೀಂದ್ರಕುಮಾರ್ ಸನ್ಮಾನಿಸಿದರು.
ಯಾಗದ ವಕ್ತಾರ ಡಾ.ಸೋಂದಾ ಭಾಸ್ಕರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-18041806

Comments

comments

Comments are closed.

Read previous post:
Kinnigoli-18041804
ಪಾವಂಜೆ ಯಾಗ ಪೂರ್ಣಾಹುತಿ ಸಂಪನ್ನ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ಮಂಗಳವಾರ ನಡೆದ ವಿಶ್ವ ಜಿಗೀಷದ್ ಯಾಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರದ್ಧಾ ಭಕ್ತಿಯಿಂದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ...

Close