ಕಟೀಲು ಯಕ್ಷಗಾನ ಮೇಳದ ಚೌಕಿಯಲ್ಲಿ ಯುಗಾದಿ

ಕಟೀಲು : ಹೊಸವರುಷ ಯುಗಾದಿ ಆಚರಣೆ ವಿವಿಧೆಡೆ ವಿಶಿಷ್ಟವಾಗಿ ನಡೆಯುತ್ತದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಚೌಕಿಗಳಲ್ಲಿ ಯುಗಾದಿ ಆಚರಣೆ ವಿಶಿಷ್ಟನಡೆಯುವುದು ವಿಶೇಷ.
ಯಕ್ಷಗಾನ ಪ್ರಸಂಗ ಮಂಗಳವಾದ ಬಳಿಕ, ಮೇಳದ ದೇವರಿಗೆ ಹಣ್ಣುಹಂಪಲು, ಕಷಾಯ, ಪಂಚಕಜ್ಜಾಯದ ನೈವೇದ್ಯ ಸಮರ್ಪಿಸಿ, ಮೇಳದ ಭಾಗವತರಿಂದ ಸ್ತುತಿ ಪದ್ಯದೊಂದಿಗೆ ಪೂಜೆ ನಡೆಯುತ್ತದೆ. ಈ ಸಂದರ್ಭ ಮೇಳದ ದೇವರ ಎದುರು ಫಲಪುಷ್ಪ ಸಹಿತ, ಕನ್ನಡಿ ಇಡಲಾಗುತ್ತದೆ. ಬಳಿಕ ಮೇಳದ ಅರ್ಚಕರು ಪಂಚಾಂಗ ಪಠಣ ಮಾಡುತ್ತಾರೆ. ಈ ಸಂದರ್ಭ ಕಲಾವಿದರೆಲ್ಲರೂ ಕುಳಿತು ಪಂಚಾಂಗ ಶ್ರವಣ ಮಾಡುತ್ತಾರೆ. ಅನಂತರ ಮೇಳದ ಕಲಾವಿದರಿಗೆ, ಆಟ ಆಡಿಸುವ ಸೇವಾದಾರರಿಗೆ ಪ್ರಸಾದ ನೀಡಲಾಗುತ್ತದೆ. ಹಣ್ಣುಗಳು, ಪಂಚಕಜ್ಜಾಯ, ಕಷಾಯ ಪ್ರಸಾದ ವಿತರಣೆ ನಡೆಯುತ್ತದೆ. ಕಲಾವಿದರೆಲ್ಲೂ ಪರಸ್ಪರ ಯುಗಾದಿಯ ಶುಭಹಾರೈಸುತ್ತಾರೆ. ಹಿರಿಯ ಕಲಾವಿದರಿಂದ ಆಶೀರ್ವಾದ ಪಡೆಯುತ್ತಾರೆ. ಕಲಾವಿದರಿಗೆ ಯುಗಾದಿಯ ಭಕ್ಷೀಸು ನೀಡಲಾಗುತ್ತದೆ. ಒಟ್ಟಾರೆ ಕಟೀಲು ಮೇಳಗಳ ಚೌಕಿಯಲ್ಲಿ ಯುಗಾದಿಯ ಆಚರಣೆಯ ಸಂಭ್ರಮವನ್ನು ಕಾಣಬಹುದಾಗಿದೆ.

Kinnigoli-17041801 Kinnigoli-17041802 Kinnigoli-17041803

Comments

comments

Comments are closed.

Read previous post:
Kinnigoli-16041808
ಪುನರೂರು : ಬಾಲವಿಕಾಸ ಶಿಬಿರ ಸಮಾರೋಪ

ಕಿನ್ನಿಗೋಳಿ : ಬಾಲ್ಯದಲ್ಲಿ ಮಕ್ಕಳಿಗೆ ಸಂಸ್ಕಾರ , ಸಂಸ್ಕೃತಿ ನಮ್ಮ ಆಚಾರ ವಿಚಾರ ಹಾಗೂ ಸೃಜನಶೀಲತೆಯ ಪಾಠ ಹೇಳುವ ಕೆಲಸ ಇಂತಹ ಶಿಬಿರಗಳಿಂದ ನಡೆದಿದೆ. ಜನಪಯೋಗಿ ಕೆಲಸ ಮಾಡುವ ಮೂಲಕವಾಗಿ...

Close