ಕಿನ್ನಿಗೋಳಿ : ಬಿಜೆಪಿ ಸುದ್ದಿಗೋಷ್ಠಿ

ಕಿನ್ನಿಗೋಳಿ : ಬಿಜೆಪಿಯ ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಟಿಕೇಟ್ ಹಂಚಿಕೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಟ್ಟು ಸೇರಿ ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರವನ್ನು ಬಿಜೆಪಿ ಪಕ್ಷ ಗೆದ್ದು ಇತಿಹಾಸ ನಿರ್ಮಿಸಲಿದೆ. ಎಂದು ಬಿಜೆಪಿಯ ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಅಧ್ಯಕ್ಷ ಈಶ್ವರ್ ಕಟೀಲ್ ಹೇಳಿದರು.
ಕಿನ್ನಿಗೊಳಿಯ ಯುಗಪುರುಷ ಸಭಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಮಾತನಾಡಿ ನರೇಂದ್ರ ಮೋದಿಯವರ ಸುಭದ್ರ ಸರಕಾರದಿಂದ ದೇಶದಲ್ಲಿ ಪರಿವರ್ತನೆ ಆಗುತ್ತಿದೆ. ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ 5 ಜಿಲ್ಲಾ ಪಂಚಾಯಿತಿ, 20 ತಾಲೂಕು ಪಂಚಾಯಿತಿಗಳಲ್ಲಿ 14 ಹಾಗೂ 31 ಗ್ರಾಮ ಪಂಚಾಯಿತಿಗಳಲ್ಲಿ 31 ನ್ನು ಗೆದ್ದುಕೊಂಡು ಬಿಜೆಪಿ ಪ್ರಬಲವಾಗುತ್ತಿದೆ ಜನರು ಬಿಜೆಪಿಯನ್ನು ಈ ರೀತಿ ಸ್ವಾಗತಿಸಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಭರವಸೆ ನೀಡುತ್ತಿದ್ದಾರೆ. ಇಲ್ಲಿಯವರೆಗೂ ಮುಲ್ಕಿ ಮೂಡಬಿದ್ರಿ ಗಳಲ್ಲಿ ಸೂಕ್ತ ಒಳ ಚರಂಡಿ ವ್ಯವಸ್ಥೆಯಾಗಿಲ್ಲ. ಆದರೆ ಬಿಜೆಪಿ ಅಭಿವೃದ್ದಿಪರ ಕೆಲಸ ಮಾಡುತ್ತಿದೆ. ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಕಳೆದ 5 ವರ್ಷಗಳಲ್ಲಿ ಕ್ಷೇತ್ರ ಎಲ್ಲಾ ಕಡೆ ಸಂಚರಿಸಿ ಜನರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದಾರೆ. ಕರ್ನಾಟಕದ ಕಾಂಗ್ರೇಸ್ ಸರಕಾರ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಇದು ವಿಷಾದನೀಯ ಎಂದರು.
ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮಾತನಾಡಿ ಪಕ್ಷದಿಂದ ಸ್ಪರ್ಧಿಸುವ ಅವಕಾಶ ಮಾಡಿಕೊಟ್ಟ ಪಕ್ಷದ ಹಿರಿಯರು, ನಾಯಕರು ಹಾಗೂ ಸಮಸ್ತ ಕಾರ್ಯಕರ್ತರಿಗೆ ನಾನು ಚಿರಋಣಿಯಾಗಿದ್ದೇನೆ. ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದಾರೆ. ಸಾಂಘಿಕ ಪ್ರಯತ್ನ ನಮ್ಮದಾಗಿದೆ. ಪಕ್ಷ ಭೇದ ಮರೆತು ಕ್ಷೇತ್ರದ ಸಮಸ್ಯೆ ಅವಶ್ಯಕತೆಗಳನ್ನು ಅರಿತು ಯಾವುದೇ ತಾರತಮ್ಯವಿಲ್ಲದೆ ಸಂಪೂರ್ಣ ಪಾರದರ್ಶಕತೆಯಿಂದ ನಡೆದುಕೊಳ್ಳುತ್ತೇನೆ. ಕ್ಷೇತ್ರದ ಮತದಾರ ಜನರು ಗೆಲ್ಲಿಸುತ್ತಾರೆ. ಎಂಬ ಧೃಡ ವಿಶ್ವಾಸ ನನ್ನಲ್ಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬಾಲಕೃಷ್ಣ ಭಟ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಜಿಲ್ಲಾ ಸಮಿತಿಯ ಕೆ. ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-17041806
ಪ್ರೀಮಿಯರ್ ಲೀಗ್-2018 ಕ್ರಿಕೇಟ್ ಪಂದ್ಯಾಟ

ಕಿನ್ನಿಗೋಳಿ : ಕ್ರೀಡಾ ಮನೋಭಾನೆಯು ನಮ್ಮ ಮನದಲ್ಲಿದ್ದರೆ ಜೀವನದಲ್ಲಿ ಯಾವ ಎಡರು ತೊಡರನ್ನು ಸಹ ಸುಲಭವಾಗಿ ನೀಗಿಸಬಹುದು, ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ಮುಕ್ತವಾಗಿ ಅವಕಾಶ ನೀಡುವಂತಹ ವಾತಾವರಣ ನಿರ್ಮಿಸಿರಿ,...

Close