ಪಾವಂಜೆ ಯಾಗ ಪೂರ್ಣಾಹುತಿ ಸಂಪನ್ನ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ಮಂಗಳವಾರ ನಡೆದ ವಿಶ್ವ ಜಿಗೀಷದ್ ಯಾಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರದ್ಧಾ ಭಕ್ತಿಯಿಂದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಶಾರಧ್ವತ ಯಜ್ಞಾಂಗಣದಲ್ಲಿ ಮುಂಜಾನೆಯಿಂದ ಭಕ್ತಾಭಿಮಾನಿಗಳು ಸರದಿ ಸಾಲಿನಲ್ಲಿ ಬಂದು ಪೂರ್ಣಾಹುತಿಯಲ್ಲಿ ತಮ್ಮ ಇಚ್ಚಾನುಸಾರವಾಗಿ ವಿವಿಧ ನಿದಿಷ್ಟ ದ್ರವ್ಯಗಳನ್ನು ಆಹುತಿಯಾಗಿ ನೀಡಿ ಯಾಗದ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭ ಜನಪ್ರತಿನಿಗಳು, ಸಾಮಾಜಿಕ ಕ್ಷೇತ್ರದ ವಿಶೇಷ ಗಣ್ಯರು ಹಾಗೂ 22 ಸಾವಿರಕ್ಕಿಂತಲೂ ಹೆಚ್ಚು ಮಂದಿ ಭಕ್ತರು ಭಾಗವಹಿಸಿದ್ದರು. ಉಪಹಾರ ಹಾಗೂ ಅನ್ನದಾನವನ್ನು ಬೆಳಿಗ್ಗೆಯಿಂದ ನಡೆಸಿ ನಿರಂತರವಾಗಿ ನೀಡಲಾಯಿತು.
ಯಾಗದ ಪ್ರದೇಶಕ್ಕೆ ಆಗಮಿಸುವ ವಿವಿಧ ವಾಹನಗಳಿಗೆ ಹೆದ್ದಾರಿಯಲ್ಲಿ ಸಂಚಾರದ ಒತ್ತಡವನ್ನು ನಿಯಂತ್ರಿಸಲು ಪ್ರತ್ಯೇಕವಾದ ವಾಹನಗಳ ತಂಗುದಾಣವನ್ನು ಬಾಕಿಮಾರು ಗದ್ದೆಯಲ್ಲಿ ನಿರ್ಮಿಸಿಲಾಗಿದ್ದು ಮಂಗಳವಾರ ಮುಂಜಾನೆ ಸುರಿದ ಭಾರೀ ಮಳೆಯಿಂದ ಪಾರ್ಕಿಂಗ್ ವ್ಯವಸ್ಥೆಗೆ ತೊಂದರೆಯಾಗಿತ್ತು. ಗದ್ದೆಯಲ್ಲಿ ನೀರು ನಿಂತಿದ್ದರಿಂದ ಸಂಚಾರ ಸಮಿತಿಯು ತಕ್ಷಣ ಪರ್ಯಾಯ ವ್ಯವಸ್ಥೆಯನ್ನು ಮುಂಜಾನೆಯಿಂದಲೆ ಸ್ವಯಂ ಸೇವಕರ ಮೂಲಕ ಮಾಡಿದ್ದರಿಂದ ಯಾವುದೇ ರಸ್ತೆಯ ಒತ್ತಡವಿಲ್ಲದೇ ಸಂಚಾರಕ್ಕೂ ಅಡಚಣೆಯಾಗದೇ ನಿಯಂತ್ರಣದ ವ್ಯವಸ್ಥೆ ನಡೆದಿತ್ತು.
ಉಪಹಾರ ಮತ್ತು ಮಹಾ ಅನ್ನ ಸಂತರ್ಪಣೆಯನ್ನು ನಿರ್ವಹಿಸಲು ಸುಮಾರು ಎರಡೂವರೆ ಸಾವಿರ ಮಂದಿ ಸ್ವಯಂ ಸೇವಕರಾಗಿ ವಿವಿಧ ಸೇವಾ ಸಂಸ್ಥೆಗಳ ಮೂಲಕ ಸೇವೆಯನ್ನು ನೀಡಿದ್ದರು. ಇದರಲ್ಲಿ ಸುಮಾರು 600 ಮಂದಿ ಜಿಲ್ಲಾ ಯೋಗ ಸಮಿತಿಯ ಸ್ವಯಂ ಸೇವಕರು ಭಾಗವಹಿಸಿದ್ದರು.
ಚುನಾವಣಾ ನೀತಿ ಸಂಹಿತೆ ಇದ್ದುದರಿಂದ ಯಾಗದ ಪರಿಸರದಲ್ಲಿ ವಿಡಿಯೋ ಕ್ಯಾಮರಾದೊಂದಿಗೆ ಚುನಾವಣಾ ಅಕಾರಿಗಳು ಸಹ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು.

ಸರ್ವ ಧರ್ಮ ಸಮನ್ವಯ
ಪಾವಂಜೆಯಲ್ಲಿ ನಡೆದ ವಿಶ್ವ ಜಿಗೀಷದ್ ಯಾಗದಲ್ಲಿ ಮಂಗಳವಾರ ನಡೆದ ಪೂರ್ಣಾಹುತಿಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಬಾಂಧವರು ಸಹ ಯಾಗ ಶಾಲೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

Kinnigoli-18041804 Kinnigoli-18041805

Comments

comments

Comments are closed.

Read previous post:
ಕಿನ್ನಿಗೋಳಿ : ಬಿಜೆಪಿ ಸುದ್ದಿಗೋಷ್ಠಿ

ಕಿನ್ನಿಗೋಳಿ : ಬಿಜೆಪಿಯ ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಟಿಕೇಟ್ ಹಂಚಿಕೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಟ್ಟು ಸೇರಿ ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರವನ್ನು ಬಿಜೆಪಿ ಪಕ್ಷ...

Close