ಪಾವಂಜೆ ಯಾಗ : ಭಕ್ತರ ಸಂಖ್ಯೆಯಲ್ಲಿ ಏರಿಕೆ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ವಿಶ್ವ ಜಿಗೀಷದ್ ಯಾಗದಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚುವರಿಯಾಗಿದ್ದು, ವಿವಿಧ ಶಾಂತಿ ಪ್ರಕ್ರಿಯೆಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.
ಯಾಗದ ಯಜ್ಞಾಂಗಣದಲ್ಲಿ ವಟುಗಳಿಗೆ ಉಪನಯನ, ಹಿರಿಯ ದಂಪತಿಗಳು ಶಾಂತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಸಂಜೆ ೩೦ ಮಂದಿ ವಿವಿಧ ಕ್ಷೇತ್ರದ ಜನಪ್ರತಿನಿಽಗಳು ಪೂರ್ಣಾಹುತಿಯಲ್ಲಿ ಭಾಗವಹಿಸಿದರು.
ಮಹರ್ಷಿ ಜಾತೂಕರ್ಣ ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ಮಾತೃ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ಹಾಗೂ ಮಧ್ಯಾಹ್ನ ಮಾಂಡೋಲಿನ್ ವಾದನವನ್ನು ಸದ್ಗುಣ ಐತಾಳ್ ಹಾಗೂ ಮೃದಂಗದಲ್ಲಿ ಸುಮುಖ ಕಾರಂತ್ ಅವರು ನುಡಿಸಿದರು. ಸಂಜೆ ಸತೀಶ್ ಸುರತ್ಕಲ್ ಬಳಗದಿಂದ ಭಕ್ತಿ ಭಾವ ಗಾಯನ ನಡೆಯಿತು.
ಹಳೆಯಂಗಡಿ, ತೋಕೂರು, ಕೋಟೆಬಬ್ಬು ದೈವಸ್ಥಾನದ ವತಿಯಿಂದ ಹೊರೆಕಾಣಿಕೆಯನ್ನು ಸಲ್ಲಿಸಲಾಯಿತು.

Kinnigoli-17041804

Comments

comments

Comments are closed.

Read previous post:
Kinnigoli-17041802
ಕಟೀಲು ಯಕ್ಷಗಾನ ಮೇಳದ ಚೌಕಿಯಲ್ಲಿ ಯುಗಾದಿ

ಕಟೀಲು : ಹೊಸವರುಷ ಯುಗಾದಿ ಆಚರಣೆ ವಿವಿಧೆಡೆ ವಿಶಿಷ್ಟವಾಗಿ ನಡೆಯುತ್ತದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಚೌಕಿಗಳಲ್ಲಿ ಯುಗಾದಿ ಆಚರಣೆ ವಿಶಿಷ್ಟನಡೆಯುವುದು...

Close