ಪ್ರೀಮಿಯರ್ ಲೀಗ್-2018 ಕ್ರಿಕೇಟ್ ಪಂದ್ಯಾಟ

ಕಿನ್ನಿಗೋಳಿ : ಕ್ರೀಡಾ ಮನೋಭಾನೆಯು ನಮ್ಮ ಮನದಲ್ಲಿದ್ದರೆ ಜೀವನದಲ್ಲಿ ಯಾವ ಎಡರು ತೊಡರನ್ನು ಸಹ ಸುಲಭವಾಗಿ ನೀಗಿಸಬಹುದು, ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ಮುಕ್ತವಾಗಿ ಅವಕಾಶ ನೀಡುವಂತಹ ವಾತಾವರಣ ನಿರ್ಮಿಸಿರಿ, ಕ್ರಿಕೇಟ್‌ನಂತಹ ಕ್ರೀಡೆಯಲ್ಲಿ ಐಪಿಎಲ್ ಮಾದರಿ ಪಂದ್ಯಾಟ ಇಂದು ಹಳ್ಳಿ ಹಳ್ಳಿಯಲ್ಲೂ ನಡೆಯುತ್ತಿರುವುದು ವಿಶೇಷ ಎಂದು ಉಡುಪಿ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ದಯಾನಂದ ಹೆಜಮಾಡಿ ಹೇಳಿದರು.
ಅವರು ಮೂಲ್ಕಿ ಬಳಿಯ ಪಡುಪಣಂಬೂರು ಅರಮನೆಯ ಮೈದಾನದಲ್ಲಿ ಶುಕ್ರವಾರ ಸಸಿಹಿತ್ಲು ಶ್ರೀ ಆಂಜನೇಯ ಕ್ರಿಕೇಟರ‍್ಸ್‌ನ ಸಂಯೋಜನೆಯಲ್ಲಿ ಶ್ರೀ ಆಂಜನೇಯ ಪ್ರೀಮಿಯರ್ ಲೀಗ್-2018 ಕ್ರಿಕೇಟ್ ಪಂದ್ಯಾಟದದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.
ಜುಲೈಟಾ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಡಾ. ಗಿಲ್ಬರ್ಟ್ ಡಿಸೋಜಾ ಅಧ್ಯಕ್ಷತೆಯನ್ನು ವಹಿಸಿದ್ದರು.
ಕ್ರಿಕೇಟ್ ಪಂದ್ಯಾಟವನ್ನು ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಉದ್ಘಾಟಿಸಿದರು.
ಮೂಲ್ಕಿ ಅರಮನೆಯ ಗೌತಮ್ ಜೈನ್, ಜೋತ್ಸಾನ ಡಿಸೋಜಾ, ಉದ್ಯಮಿ ಕೆ.ಎಂ.ಶಮೀಮ್, ಮುಂಬಯಿಯ ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಅಧ್ಯಕ್ಷ ವಿಜಯ್ ಎಸ್. ತಿಂಗಳಾಯ, ಪದಾಧಿಕಾರಿಗಳು, ಸದಸ್ಯರು, ಸಸಿಹಿತ್ಲು ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಅಧ್ಯಕ್ಷ ವಿನೋದ್‌ಕುಮಾರ್, ಉಪಾಧ್ಯಕ್ಷ ಸಂತೋಷ್‌ಕುಮಾರ್, ಸಂಚಾಲಕ ಅನಿಲ್‌ಕುಮಾರ್ ಇದ್ದರು.

Kinnigoli-17041806

Comments

comments

Comments are closed.

Read previous post:
Kinnigoli-17041805
ಪಾವಂಜೆ : ವಿಶೇಷ ಬಲಿ ಉತ್ಸವ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ವಿಶೇಷ ಬಲಿ ಉತ್ಸವ ಜರುಗಿತು.

Close