ತಾ. 22ರಿಂದ ಕಟೀಲಿನಲ್ಲಿ ವಸಂತವೇದ ಶಿಬಿರ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಶ್ರಯದಲ್ಲಿ ಸಂಜೀವನೀ ಚಾರಿಟೇಬಲ್ ಟ್ರಸ್ಟ್ ನಡೆಸುವ ವಸಂತ ವೇದ ಶಿಬಿರ ತಾ.22ರಿಂದ ಇಪ್ಪತ್ತೊಂದು ದಿನಗಳ ಕಾಲ ನಡೆಯಲಿದೆ.
ಕಟೀಲು ದೇವಳದ ಶ್ರೀ ದುರ್ಗಾಸಂಸ್ಕೃತ ಪ್ರತಿಷ್ಟಾನದ ಸಂಸ್ಥೆಯಲ್ಲಿ 1995ರಿಂದ ವರ್ಷಂಪ್ರತಿ 21ದಿನಗಳ ಕಾಲ ವಸಂತ ವೇದ ಶಿಬಿರ ನಡೆಯುತ್ತಿದೆ. ಪ್ರಥಮ ವರ್ಷದ ಬಾಲಕರಿಗೆ ಗುರುಪರಂಪರಾಸ್ತೋತ್ರಗಳು, ಕೃಷ್ಣ ಅಷ್ಟೋತೆರ, ವೇಂಕಟೇಸ, ವಿಷ್ಣುಸಹಸ್ರನಾಮ ಸ್ತ್ರೋತ್ರಗಳು, ಭಗವದ್ಗೀತೆ, ತ್ರಿಕಾಲ ಸಂಧ್ಯಾವಂದನೆ, ವೇದಪಾಠ, ಪುರುಷಸೂಕ್ತ, ಶ್ರೀ ಸೂಕ್ತ ಇತ್ಯಾದಿ, ದ್ವಿತೀಯ ವರ್ಷದಲ್ಲಿ ದೇವಪೂಜಾ ಪದ್ಧತಿ, ರ್ಶರೀ ದುರ್ಗಾಸಪ್ತಶತೀ ಆರಂಭ, ದೇವಪೂಜಾ ಮಂತ್ರಗಳು, ಅಶ್ವತ್ಥಪೂಜೆ, ನಾಗತಂಬಿಲ ಇತ್ಯಾದಿಗಳನ್ನು ಮೂರನೆಯ ವರ್ಷದಲ್ಲಿ ಶ್ರೀ ದುರ್ಗಾಸಪ್ತಶತೀ ಸಂಪೂಣ್, ಗಣಹೋಮ ಪದ್ಧತಿ, ಶ್ರೀ ಸತ್ಯನಾರಾಯಣ ಪೂಜಾ ವಿಧಿಗಳನ್ನು ಕಲಿಸಲಾಗುವುದು.
ಬಾಲಿಕೆಯರಿಗೆ ಪ್ರತ್ಯೇಕವಾಗಿ ತುಳಸೀ ಸಂಕೀರ್ತನೆ, ಲಕ್ಷ್ಮೀ ಶೋಭಾನೆ, ಬತ್ತಿ ತಯಾರಿ, ಹೊಸ್ತಿಲು ಪೂಜೆ, ಕುಂಕುಮ ತಯಾರಿ, ಶ್ಲೋಕಗಳು, ರಂಗೋಲಿ, ಹೂಕಟ್ಟುವುದನ್ನು ಕಲಿಸಲಾಗುವುದು. ಶಿಬಿರಾರ್ಥಿಗಳ ಲಭ್ಯತೆ ಮೇರೆಗೆ ಯಕ್ಷಗಾನ ನಾಟ್ಯ ಕಲಿಕೆಯೂ ಇದೆ ಎಂದು ಸಂಜೀವನಿ ಟ್ರಸ್ಟ್‌ನ ಡಾ. ಕೆ. ಸುರೇಶ್ ರಾವ್ ತಿಳಿಸಿದ್ದಾರೆ. ಆಸಕ್ತ ವಿಪ್ರವಟುಗಳು ಶ್ರೀ ದುರ್ಗಾಸಂಸ್ಕೃತ ಪ್ರತಿಷ್ಟಾನದ ಪ್ರಾಚಾರ‍್ಯರು(7760242064), ಶ್ರೀಹರಿನಾರಾಯಣದಾಸ ಆಸ್ರಣ್ಣ(9448480515), ಡಾ. ಶಶಿಕುಮಾರ್(9480054554) ಸಂಪರ್ಕಿಸಬಹುದು.

Comments

comments

Comments are closed.

Read previous post:
Kinnigoli-18041806
ಶಾಂತಿ, ಸಹನೆಗೆ ಯಾಗವೇ ಪ್ರೇರಕ

ಕಿನ್ನಿಗೋಳಿ : ಮನಸ್ಸಿಗೆ ಶಾಂತಿ, ಸಹನೆಗೆ ಪ್ರೇರಣೆ ನೀಡಲು ಯಾಗಗಳು ಸಹಕಾರಿಯಾಗಿವೆ. ನಮ್ಮ ಸನಾತನ ಋಷಿ ಮುನಿಗಳು ಶೋಸಿದ ಯಾಗ ಪ್ರಕ್ರಿಯೆಗಳು ಲೋಕದ ಒಳಿತನ್ನು ಹಾರೈಸುತ್ತವೆ. ತ್ಯಾಗಮಯ ಬದುಕಿನ...

Close