ಪಂಜ : ಬಿರುಗಾಳಿಗೆ ಅವಾಂತರ

ಪಂಜ : ಪಕ್ಷಿಕೆರೆ ಸಮೀಪದ ಪಂಜ ಕೊಯಿಕುಡೆ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಬೀಸಿದ ಭಾರಿ ಬಿರುಗಾಳಿ ಮಳೆಗೆ ಹಲವು ಮನೆಗಳ ಮೇಲೆ ಮರಗಳು ಬಿದ್ದು ನಷ್ಟ ಸಂಭವಿಸಿದೆ. ಪಂಜದ ಉಲ್ಯದ ಮಾ ಶೆಟ್ಟಿ, ಕುದ್ರುವಿನ ಗಣೇಶ್ ಪೂಜಾರಿ , ನಲ್ಯಗುತ್ತು ಸಮೀಪದ ಕೂಕ್ರ ಅಪ್ಪಿ ಮಡಿವಾಳ ಅವರ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಸುಮಾರು 10 ವರ್ಷಗಳ ಹಿಂದೆ ಬೀಕರ ನೆರೆ ಬಂದದನ್ನು ಜನರು ನೆನಪಿಸಿಕೊಂಡಿದ್ದಾರೆ. ಹಲವು ಮನೆಗಳ ಅಡಿಕೆ ಮರ, ಬಾಳೆ ತೋಟಗಳು ಹಾನಿಯಾಗಿವೆ. ಕಿಲೆಂಜೂರುವಿನಲ್ಲಿ ಬಿರುಗಾಳಿಗೆ ಅಡಿಕೆ ತೋಟ ಹಾನಿಯಾಗಿದೆ.
ಘಟನಾ ಸ್ಥಳಗಳಿಗೆ ಗ್ರಾಮ ಕರಣಿಕ ಸಂತೋಷ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಪಂಜ, ಸತೀಶ್ ಶೆಟ್ಟಿ ಬೈಲಗುತ್ತು, ಬೋಜ ದೇವಾಡಿಗ ಭೇಟಿ ನೀಡಿದ್ದಾರೆ.

Kinnigoli-18041802 Kinnigoli-18041803

Comments

comments

Comments are closed.

Read previous post:
Kinnigoli-18041801
ಕೆಂಚನಕೆರೆ :ವಿದ್ಯುತ್ ಕಂಬಗಳಿಗೆ ಹಾನಿ

ಮೂಲ್ಕಿ - ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಪ್ರಾಥಮಿಕ ಶಾಲೆಯ ಮುಂದಿನ ಮರ ಮಂಗಳವಾರ ಮುಂಜಾನೆ ಸುರಿದ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದು ವಹನಗಳ ಸಂಚಾರಕ್ಕೆ...

Close