ಪಾವಂಜೆ : ಬ್ರಹ್ಮಕಲಶೋತ್ಸವಕ್ಕೆ ಪೂರ್ವ ಸಿದ್ಧತೆ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ಗುರುವಾರ (ಇಂದು) ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಪೂರ್ವ ಸಿದ್ಧತೆಗಳು ನಡೆದಿದೆ.
ದೇವಳದಲ್ಲಿ ವಿಶ್ವ ಜಿಗೀಷದ್ ಯಾಗ ಹಾಗೂ ಮಹಾರಥೋತ್ಸವ ಸಂಭ್ರಮದ ಮುಕ್ತಾಯದ ಜೊತೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿರುವುದರಿಂದ ಕ್ಷೇತ್ರಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಇದಕ್ಕೆ ಪೂರಕವಾಗಿ ದೇವಳದ ಆಡಳಿತ ಮಂಡಳಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಸಜ್ಜಾಗಿದೆ.
ಬ್ರಹ್ಮಕಲಶೋತ್ಸವವು ಎಲ್ಲಾ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕವಟೋದ್ಘಾಟನೆ, ಚೂರ್ಣೋತ್ಸವ, ಬಲಿ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ನಿತ್ಯ ಪೂಜೆ, ನಿತ್ಯ ರಂಗ ಪೂಜೆ, ಬಲಿ, ಅವಭೃತೋತ್ಸವ, ಧ್ವಜಾವರೋಹಣ, ಮಂತ್ರಾಕ್ಷತೆ, ಅಣ್ಣಪ್ಪ ಸ್ವಾಮೀಗೆ ನರ್ತನ ಸೇವೆ ನಡೆಯಲಿದೆ.
ಶಾರಧ್ವತ ಯಜ್ಞಾಂಗಣದಲ್ಲಿ ಕಲಶಗಳಿಗೆ ವಿಶೇಷ ಪೂಜೆಯನ್ನು ವೇದೋಕ್ತವಾಗಿ ಬುಧವಾರ ನಡೆಸಲಾಯಿತು.
ಚಿನ್ಮಯ ಮಿಷನ್‌ನ ಮುಖ್ಯಸ್ಥರಾದ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ, ವೇದ ಕೃಷಿಕ ಕೆ.ಎಸ್.ನಿತ್ಯಾನಂದ ಸ್ವಾಮೀಜಿ, ದೇವಳದ ಧರ್ಮದರ್ಶಿ ಡಾ.ಯಾಜಿ ನಿರಂಜನ್ ಭಟ್, ಮೊಕ್ತೇಸರ ಎಂ.ಶಶೀಂದ್ರಕುಮಾರ್, ಟ್ರಸ್ಟಿ ನಕ್ರೆ ಬಾಲಕೃಷ್ಣ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಪದಾಽಕಾರಿಗಳು, ಸದಸ್ಯರು, ವಿಶ್ವ ಜಿಗೀಷದ್ ಯಾಗ ಸಮಿತಿಯ ಪ್ರಮುಖರು, ಮತ್ತಿತರರು ಉಪಸ್ಥಿತರಿದ್ದರು.

ಶಿಖರಕ್ಕೆ ಸಾರ್ವತ್ರಿಕ ಕಲಶಾಭಿಷೇಕ :
ಬ್ರಹ್ಮಕಲಶದ ಸಂದರ್ಭ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಲಶಗಳನ್ನು ಸ್ಥಾಪಿಸಿ, ಪೂಜಿಸಿ ಶಕ್ತಿ ಸಂಚಯಿಸಿ ಆ ಪವಿತ್ರ ತೀರ್ಥ ಜಲವನ್ನು ಶ್ರೀ ದೇವರಿಗೆ ಅಭಿಷೇಕಿಸಿ, ಶೇಷ ಭಾಗವನ್ನು ಗರ್ಭಗೃಹದ ಶಿಖರಕ್ಕೆ ಪುರುಷ ಸೇವಾದಾರರು ವಸ್ತ್ರ ಸಂಹಿತೆಯಾಗಿ, ಸ್ವತಃ ಅಭಿಷೇಕ ಮಾಡುವ ಅಪೂರ್ವ ಕಾರ‍್ಯಕ್ರಮ ಈ ಕಲಶಾಭಿಷೇಕದಲ್ಲಿ ಅವಕಾಶವಿದ್ದು, ಹಿರಿಯರು ಶಾಂತಿ ಕರ್ಮದ ಫಲವನ್ನು ಅನುಭವಿಸುವುದಕ್ಕೆ ಸದಾವಕಾಶ ಇದೆ. ದೇವಳದ ಶಿಖರಕ್ಕೆ ಅಭಿಷೇಕ ಮಾಡಿ, ಶಿಖರಕ್ಕೆ ಒಂದು ಹಿಡಿ ನಾಣ್ಯವನ್ನೂ ಅಭಿಷೇಕ ಮಾಡಿ, ಹೂವಿನ ಹಾರ ಹಾಕಿ ಪೂಜಿಸುವುದರಿಂದ 60 ಸಂವತ್ಸರ ತುಂಬಿದ ಹಿರಿಯರಿಗೆ ಷಷ್ಟ್ಯಬ್ದಿ, ಭೀಮರಥ, ವಿಜಯರಥ.. ಇತ್ಯಾದಿ ಶಾಂತಿಕರ್ಮಗಳ ಫಲಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿಂದ ಈ ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕ ನಿರ್ಮಿಸಿರುವ ಅಟ್ಟಳಿಗೆಯನ್ನು ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

Kinnigoli-1804201801

Comments

comments

Comments are closed.

Read previous post:
Kinnigoli-1804201807
ಕಟೀಲು : ಭಕ್ತಿ ಸಂಗೀತ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಉತ್ಸವಾಂಗ ಬುಧವಾರ ಸ್ವರಾಂಜಲಿ ಸಂಗೀತ ಶಾಲೆಯ ಕಲಾವಿದರಿಂದ ಭಕ್ತಿ ಸಂಗೀತ ನಡೆಯಿತು.

Close