ಕಿನ್ನಿಗೋಳಿ ಬೇಸಿಗೆ ಶಿಬಿರ ಸಮಾರೋಪ

ಕಿನ್ನಿಗೋಳಿ: ಎಳೆಯ ಪ್ರಾಯದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳು ಹೊರತರಲು, ಉತ್ತಮ ಚಿಂತನೆಗಳು ತುಂಬಿ ಮಕ್ಕಳ ಮನೋವಿಕಾಸಗಳ ಇಂತಹ ಶಿಬಿರಗಳಿಂದ ಉದ್ದೀಪನಗೊಳ್ಳುತ್ತದೆ ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ಕಿನ್ನಿಗೋಳಿಯ ರಾಮ ಮಂದಿರದ ಉಡುಪ ಕಾಂಪ್ಲೆಕ್ಸ್‌ನಲ್ಲಿ ಥಂಡರ್‌ಗೈಸ್ ಫೌಂಡೇಷನ್ ( ರಿ ) ಸಂಸ್ಥೆಯ ಆಶ್ರಯದಲ್ಲಿ ಕಲರವ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತಾನಡಿದರು.
ಸುರತ್ಕಲ್ ಎಸ್‌ಸಿಡಿಸಿ ಬ್ಯಾಂಕ್ ಪ್ರಬಂಧಕ ರಾಜೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರ ಸಂಸ್ಕೃತಿ ಯ ಪರಿಚಯ ಇಂತಹ ಶಿಬಿರಗಳಿಂದ ಸಾಧ್ಯ ಎಂದು ಹೇಳಿದರು.
ಗುತ್ತಿಗೆದಾರ ತ್ಯಾಗರಾಜ ಆಚಾರ್ಯ, ಮಂಗಳೂರು ಲೇಡಿಸ್ ಬ್ಯೂಟಿ ಎಸೋಸಿಯೇಶನ್ ಅಧ್ಯಕ್ಷೆ ಬಬಿತ ಯು. ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ಸೂರಜ್ ಶೆಟ್ಟಿ ಸ್ವಾಗತಿಸಿದರು. ರಾಜೇಂದ್ರ ಪ್ರಸಾದ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-23041803

 

Comments

comments

Comments are closed.

Read previous post:
Kinnigoli-23041802
ಸ್ಪೋರ್ಟ್ಸ್ ಕ್ಲಬ್ ನೂತನ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ: ಸಂಘ ಸಂಸ್ಥೆಗಳಲ್ಲಿ ಸಮಾನ ಮನಸ್ಥಿತಿಯ ಯೋಚನೆ ಯೋಜನೆಗಳನ್ನು ಹಾಕಿದಾಗ ಸುದೃಡ ಸಮಾಜ ನಿರ್ಮಾಣ ಸಾಧ್ಯ. ಕ್ರೀಡೆಯಿಂದಲೂ ಸಮಾಜ ಸೇವೆಯನ್ನು ಮಾಡಬಹುದು ಎಂದು ಪ್ರಸಿದ್ಧ ಕಲಾ ನಿರ್ದೇಶಕ ಶಶಿಧರ...

Close