ಸ್ಪೋರ್ಟ್ಸ್ ಕ್ಲಬ್ ನೂತನ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ: ಸಂಘ ಸಂಸ್ಥೆಗಳಲ್ಲಿ ಸಮಾನ ಮನಸ್ಥಿತಿಯ ಯೋಚನೆ ಯೋಜನೆಗಳನ್ನು ಹಾಕಿದಾಗ ಸುದೃಡ ಸಮಾಜ ನಿರ್ಮಾಣ ಸಾಧ್ಯ. ಕ್ರೀಡೆಯಿಂದಲೂ ಸಮಾಜ ಸೇವೆಯನ್ನು ಮಾಡಬಹುದು ಎಂದು ಪ್ರಸಿದ್ಧ ಕಲಾ ನಿರ್ದೇಶಕ ಶಶಿಧರ ಅಡಪ ಬೆಂಗಳೂರು ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ವಠಾರದಲ್ಲಿ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರು ಕೇಂದ್ರ ವಿಶ್ವ ವಿದ್ಯಾನಿಲಯದ ಉಪನ್ಯಾಸಕ ಕೆ.ವೈ. ನಾರಾಯಣ ಸ್ವಾಮಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಮಾತ್ರ ಸಹಬಾಳ್ವೆಯ ಜೀವನ ನೋಡಲು ಸಿಗುತ್ತಿದೆ. ನಗರದ ಒತ್ತಡದ ಜೀವನದಲ್ಲಿ ಸೇವಾ ಮನೋಭಾವನೆ ಮರೆಯಾಗುತ್ತಿದೆ. ಕ್ರೀಡೆಗೆಂದು ಹುಟ್ಟಿಕೊಂಡ ಸಂಸ್ಥೆ ಸಮಾಜ ಕಟ್ಟುವಲ್ಲಿ ಬೆರೆಯುತ್ತಿರುವುದು ಬಹಳ ಅಪರೂಪ ಎಂದು ಹೇಳಿದರು.
ಸುಮಾರು ೨೫ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡವನ್ನು ಕಲ್ಬುರ್ಗಿ ಕೇಂದ್ರ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್.ಆರ್. ಶೆಟ್ಟಿ ಬೆಂಗಳೂರು ಉದ್ಘಾಟಿಸಿದರು.
ವೇ.ಮೂ. ಶಿಬರೂರು ಗೋಪಾಲಕೃಷ್ಣ ತಂತ್ರಿ, ಪಕ್ಷಿಕೆರೆ ಸೈಂಟ್ ಜೂಡ್ ಚರ್ಚ್‌ನ ಧರ್ಮಗುರು ಫಾ.ಆಂಡ್ರಿಯೋ ಲಿಯೋ ಡಿಸೋಜಾ, ಸುರತ್ಕಲ್ ಚೊಕ್ಕಬೆಟ್ಟಿನ ಖತೀಬ್ ಜಾಮೀಯ ಮಸೀದಿಯ ಅಬ್ದುಲ್ ಅಜೀಜ್ ದಾರಿಮಿ ಆಶೀರ್ವಚನ ನೀಡಿದರು.
ಈ ಸಂದರ್ಭ ಸ್ಥಳದಾನ ನೀಡಿದ ಹೇಮನಾಥ್ ಅಮೀನ್, ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಡಾ.ಎನ್.ಆರ್.ಶೆಟ್ಟಿ ಬೆಂಗಳೂರು, ಮುಂಬಯಿಯ ರಾಮಣ್ಣ ದೇವಾಡಿಗ, ಯಶೋದಾ ಆರ್. ಸುವರ್ಣ, ಮೋಹನ್ ಸುವರ್ಣ ಪೂನಾ, ಪುರುಷೋತ್ತಮ ಅಚಾರ್ ಅವರನ್ನು ಸಮ್ಮಾನಿಸಲಾಯಿತು.
ಎಂಆರ್‌ಪಿಎಲ್‌ನ ಎಂಪ್ಲೋಯಿಸ್ ಯೂನಿಯನ್‌ನ ಸುದೇಂದು ಕೆ.ವಿ., ಸಮಿತಿಯ ಗೌರವ ಮಾರ್ಗದರ್ಶಕರಾದ ಶಿವಕುಮಾರ್ ಬೇಕಲ್, ಗೌರವಾಧ್ಯಕ್ಷರಾದ ಭಾಸ್ಕರ ಶೆಟ್ಟಿ ತೋಕೂರು ಗುತ್ತು, ರಾಮಣ್ಣ ದೇವಾಡಿಗ ಮುಂಬೈ, ಹರಿಪ್ರಸಾದ್ ಶೆಟ್ಟಿ ಬೆಂಗಳೂರು, ಜೈ ಕೃಷ್ಣ ಬಿ. ಕೋಟ್ಯಾನ್, ಕ್ಲಬ್‌ನ ಅಧ್ಯಕ್ಷ ರತನ್ ಶೆಟ್ಟಿ, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.
ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್‌ದಾಸ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ವರದಿ ವಾಚಿಸಿದರು, ಕೋಶಾಧಿಕಾರಿ ಪ್ರಶಾಂತ್‌ಕುಮಾರ್ ಬೇಕಲ್ ಪ್ರಸ್ತಾವನೆಗೈದರು, ಗಣೇಶ್ ಕುಮಾರ್ ವಂದಿಸಿದರು, ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-23041802

Comments

comments

Comments are closed.

Read previous post:
Kinnigoli-23041801
ಯಕ್ಷಗಾನ ಗೌರವಿಸುವ ಕಾರ್ಯ ಉತ್ತಮ

ಕಿನ್ನಿಗೋಳಿ; ಹಿರಿಯರು ಹಾಕಿಕೊಟ್ಟ ಹೆಜ್ಜೆಯಂದೆ ಕಿರಿಯರು ಧಾರ್ಮಿಕ ನಂಬಿಕೆಗಳನ್ನು ಮುಂದುವರಿಯುತ್ತಿರುವುದು ಅಭಿನಂದನೀಯ ಎಂದು ಕಟೀಲು ದೇವಳದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಹೇಳಿದರು. ಪಂಜ ಮೊಗಪಾಡಿ ಕೆರೆಮನೆಯ ನಂದಗೋಕುಲ...

Close