ಯಕ್ಷಗಾನ ಗೌರವಿಸುವ ಕಾರ್ಯ ಉತ್ತಮ

ಕಿನ್ನಿಗೋಳಿ; ಹಿರಿಯರು ಹಾಕಿಕೊಟ್ಟ ಹೆಜ್ಜೆಯಂದೆ ಕಿರಿಯರು ಧಾರ್ಮಿಕ ನಂಬಿಕೆಗಳನ್ನು ಮುಂದುವರಿಯುತ್ತಿರುವುದು ಅಭಿನಂದನೀಯ ಎಂದು ಕಟೀಲು ದೇವಳದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಹೇಳಿದರು.
ಪಂಜ ಮೊಗಪಾಡಿ ಕೆರೆಮನೆಯ ನಂದಗೋಕುಲ ಮನೆಯ 25ನೇ ವರ್ಷದ ಸೇವಾರೂಪದ ಯಕ್ಷಗಾನ ಬಯಲಾಟ ಸಂದರ್ಭ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಕಲಾವಿದರನ್ನು ಮತ್ತು ಯಕ್ಷಗಾನದಲ್ಲಿ ನಿರಂತರ ಸಹಕಾರವಿತ್ತವರನ್ನು ಗೌರವಿಸುವ ಕಾರ್ಯ ಉತ್ತಮವಾದುದು ಎಂದರು.
ಈ ಸಂದರ್ಭ ಯಕ್ಷಗಾನ ಕಲಾವಿದರಾದ ಸದಾಶಿವ ಶೆಟ್ಟಿ ಮುಂಡಾಜೆ, ಪುಂಡಿಕೈ ಗೋಪಾಲ ಕೃಷ್ಣ ಭಟ್, ಪ್ರಶಾಂತ್ ನೆಲ್ಯಾಡಿಯವರನ್ನು ಸನ್ಮಾನಿಸಲಾಯಿತು, 25 ವರ್ಷಗಳಿಂದ ಯಕ್ಷಗಾನ ಸೇವೆಯಲ್ಲಿ ವಿವಿಧ ರೀತಿಯಲ್ಲಿ ಸಹಕಾರ ನೀಡುವ ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ರಾಜ ಭಟ್ ಪಾವಂಜೆ, ದಿನೇಶ್ ಶೆಟ್ಟಿಗಾರ್, ಶೇಖರ್ ಕುಕ್ಯಾನ್, ದಯಾನಂದ ಅಮೀನ್, ಶೇಖರ್, ಶಿವರಾಮ ಶಿಬರೂರು ಕೃಷ್ಣಪ್ಪ, ಬಶೀರ್ ಅವರನ್ನು ಗೌರವಿಸಲಾಯಿತು.
ಜನಾರ್ದನ ಕಿಲೆಂಜೂರು, ದೀರಜ್ ಶೆಟ್ಟಿ ಮಮ್ಮೆಟ್ಟು, ಸತೀಶ್ ಶೆಟ್ಟಿ ಬೈಲಗುತ್ತು ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮದಲ್ಲಿ ಹೊಸಲೊಟ್ಟು ಬಾಬು ಶೆಟ್ಟಿ, ಪಂಜ ನಲ್ಯಗುತ್ತು ಬೋಜ ಗುತ್ತಿನಾರ್, ಅತ್ತೂರು ಭಂಡಾರ ಮನೆ ಶಂಭು ಮುಕಾಲ್ದಿ, ಮೇಳದ ಯಜಮಾನರಾದ ದೇವಿ ಪ್ರಸಾದ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಸುಧಾಮ ಶೆಟ್ಟಿ, ಸುಧಾಕರ ಶೆಟ್ಟಿ , ಮತ್ತಿತರರು ಉಪಸ್ಥಿತರಿದ್ದರು. ಅರ್ಪಿತ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-23041801

Comments

comments

Comments are closed.

Read previous post:
Kateel-21041801
ಕಟೀಲು: ಚಿನ್ನದ ರಥೋತ್ಸವ

ಕಟೀಲು; ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ವರ್ಷಾವಧಿ ಉತ್ಸವದ ಪ್ರಯುಕ್ತ ಚಿನ್ನದ ರಥೋತ್ಸವ ನಡೆಯಿತು.

Close