ಕಟೀಲು : ವಸಂತ ವೇದ ಶಿಬಿರ ಉದ್ಘಾಟನೆ

ಕಿನ್ನಿಗೋಳಿ: ಜಪ, ಪೂಜೆ ಮಾಡುವುದು ಶ್ಲೋಕ ಮಂತ್ರಗಳನ್ನು ಹೇಳುವುದು ಹೀಗೆ ಬ್ರಾಹ್ಮಣರು ಆಚರಣೆಗಳನ್ನು ಅರಿತು ಅಳವಡಿಸಿಕೊಂಡು ಜ್ಞಾನ ಬುದ್ದಿವಂತಿಕೆ ಆಧ್ಯಾತ್ಮದ ಶಕ್ತಿಯಿಂದ ಗೌರವಯುತ ಬದುಕನ್ನು ಕಾಣಬೇಕು ಎಂದು ಸಂಜೀವನಿ ಟ್ರಸ್ಟ್ ನ ಡಾ. ಸುರೇಶ್ ರಾವ್ ಹೇಳಿದರು.
ಕಟೀಲು ಶ್ರೀ ದುರ್ಗಾ ಸಂಸ್ಕೃತ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಕಟೀಲು ದೇವಳ, ಮುಂಬೈ ಸಂಜೀವನಿ ಚಾರಿಟೇಬಲ್ ಟ್ರಸ್ಟ್, ನಂದಿನಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ 21 ದಿನಗಳ ಕಾಲ ನಡೆಯಲಿರುವ ವಸಂತವೇದ ಶಿಬಿರದಲ್ಲಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ಗೋಪಾಲಕೃಷ್ಣ ಆಸ್ರಣ್ಣ ಆಶೀರ್ವಚನ ನೀಡಿ ಮಾತನಾಡಿ ವೇದ ಕಲಿಕೆಯಿಂದ ಜ್ಞಾನ ಹೆಚ್ಚಲಿ ವ್ಯಕ್ತಿತ್ವ ನಿರ್ಮಾಣವಾಗಲಿ ಎಂದರು.
ಪಡುಬಿದ್ರೆ ಬ್ರಹ್ಮಸ್ಥಾನದ ದೈವಪಾತ್ರಿ ಪಿ.ಜಿ. ನಾರಾಯಣ ರಾವ್ ಕಾರ್ಯಕ್ರಮ ಉದ್ಘಾಟಿಸಿದರು.
ನಂದಿನಿ ಬ್ರಾಹ್ಮಣ ಸಭಾದ ಡಾ. ಶಶಿಕುಮಾರ್ ಉಪಸ್ಥಿತರಿದ್ದರು.
ಸಂಸ್ಕೃತ ಪ್ರತಿಷ್ಠಾನದ ಪ್ರಾಚಾರ್ಯ ಪದ್ಮನಾಭ ಮರಾಠೆ ಸ್ವಾಗತಿಸಿದರು. ಚೇತನಾ ಮತ್ತು ಭಾಮತಿ ಕಾರ್ಯಕ್ರಮ ನಿರೂಪಿಸಿದರು.

Kinnigoli-24041805

Comments

comments

Comments are closed.

Read previous post:
Kinnigoli-24041804
ರೋವರಿಂಗ್ ಮಾಹಿತಿ ತರಬೇತಿ ಕಾರ್ಯಾಗಾರ

ಕಿನ್ನಿಗೋಳಿ: ಭಾರತ್ ಸ್ಕೌಟ್ ಎಂಡ್ ಗೈಡ್ಸ್‌ನ ತರಬೇತಿ ಶಿಸ್ತು ಮತ್ತು ಶ್ರಮ ಭರಿತ ಜೀವನ ಪದ್ಧತಿಯನ್ನು ಬದುಕಿನಲ್ಲಿ ಅಳಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಮೂಲ್ಕಿ ಲಯನ್ಸ್ ಅಧ್ಯಕ್ಷೆ ಶಿಲ್ಪಾ ಪಿ....

Close