ರೋವರಿಂಗ್ ಮಾಹಿತಿ ತರಬೇತಿ ಕಾರ್ಯಾಗಾರ

ಕಿನ್ನಿಗೋಳಿ: ಭಾರತ್ ಸ್ಕೌಟ್ ಎಂಡ್ ಗೈಡ್ಸ್‌ನ ತರಬೇತಿ ಶಿಸ್ತು ಮತ್ತು ಶ್ರಮ ಭರಿತ ಜೀವನ ಪದ್ಧತಿಯನ್ನು ಬದುಕಿನಲ್ಲಿ ಅಳಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಮೂಲ್ಕಿ ಲಯನ್ಸ್ ಅಧ್ಯಕ್ಷೆ ಶಿಲ್ಪಾ ಪಿ. ಕುಡ್ವಾ ಹೇಳಿದರು.
ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಮೂಲ್ಕಿ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ಮೂಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಇ.ಟಿ. ರೋವರ‍್ಸ್ ಘ ಟಕದ ಜಂಟಿ ಸಹಯೋಗದಲ್ಲಿ ಜರಗಿದ ರೋವರಿಂಗ್ ಮತ್ತು ಸಮುದಾಯ ಅಭಿವೃದ್ಧಿ ಮಾಹಿತಿ ತರಬೇತಿ ಕಾರ್ಯಾಗಾರ ಉಧ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂಧರ್ಭ ಶಿಲ್ಪಾ ಕುಡ್ವಾ ದಾನಿಗಳಿಂದ ಕೊಡಮಾಡಿದ ಸಮವಸ್ತ್ರಗಳನ್ನು ವಿತರಿಸಿದರು.
ಭಾರತ್ ಸ್ಕೌಟ್ ಎಂಡ್ ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಯು.ಗೋಪಾಲ ಕೃಷ್ಣ ಭಟ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಮೂಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ಸರೋಜಿನಿ ಸುವರ್ಣ, ಜಿಲ್ಲಾ ಸಂಘಟಕ ಭರತ್ ರಾಜ್, ಯುವ ವಿಭಾಗದ ಮುಖ್ಯಸ್ಥ ಪ್ರೀತೇಶ್, ಉದ್ಯಮಿ ಪ್ರಭೋದ್ ಕುಡ್ವಾ, ತರಬೇತಿ ದಾರ ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.
ಮೂಲ್ಕಿ ರಾಮಕ್ರಷ್ಣ ಪೂಂಜಾ ಕೇಂದ್ರದ ಪ್ರಿನ್ಸಿಪಾಲ್ ವೆ .ಎನ್. ಸಾಲ್ಯಾನ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹರಿಶ್ಚಂದ್ರ ಎಂ. ವಂದಿಸಿದರು. ರೋವರ್ ಲೀಡರ್ ಸುರೇಶ್ ಎಸ್. ಕಾರ್ಯಕ್ರಮ ನಿರೂಪಿಸಿದರು.

Kinnigoli-24041804

Comments

comments

Comments are closed.

Read previous post:
Kinnigoli-24041803
ಯಕ್ಷಗಾನ ಬಯಲಾಟ

ಕಿನ್ನಿಗೋಳಿ: ಯಕ್ಷಗಾನದ ಮೂಲಕವಾಗಿ ಜನರಲ್ಲಿ ಧಾರ್ಮಿಕತೆ, ಪುರಾಣ ಜ್ಞಾನ, ಸನ್ಮಾರ್ಗ ಹಾಗೂ ಸುಸಂಸ್ಕೃತರನ್ನಾಗಿಸಲು ಸಾಧ್ಯವಿದೆ ಎಂದು ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಕಟೀಲು ಮಚ್ಚಾರಿನಲ್ಲಿ...

Close