ಯಕ್ಷಗಾನ ಬಯಲಾಟ

ಕಿನ್ನಿಗೋಳಿ: ಯಕ್ಷಗಾನದ ಮೂಲಕವಾಗಿ ಜನರಲ್ಲಿ ಧಾರ್ಮಿಕತೆ, ಪುರಾಣ ಜ್ಞಾನ, ಸನ್ಮಾರ್ಗ ಹಾಗೂ ಸುಸಂಸ್ಕೃತರನ್ನಾಗಿಸಲು ಸಾಧ್ಯವಿದೆ ಎಂದು ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಟೀಲು ಮಚ್ಚಾರಿನಲ್ಲಿ ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ಮುಂಬಯಿ ಹಾಗೂ ದುಬೈ ಇದರ ಆಶ್ರಯದಲ್ಲಿ ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ಶ್ರೀ ಹರಿನಾಯಣ ದಾಸ ಆಸ್ರಣ್ಣ ಮಾತನಾಡಿ ಯಕ್ಷಗಾನದ ಮೂಲ ಚೌಕಟ್ಟಿಗೆ ಚ್ಯುತಿ ಬಾರದಂತೆ ಬದಲಾವಣೆ ಆಗಬೇಕು ಎಂದು ಹೇಳಿದರು.
ಈ ಸಂದರ್ಭ ಮೇಳದ ಅರ್ಚಕ ಅನಂತರಾಮ ಭಟ್, ಹಿರಿಯ ಕಲಾವಿದ ಪಡ್ರೆ ಕುಮಾರ, ಕೈರಂಗಳ ಕೃಷ್ಣ ಮೂಲ್ಯ, ನೇಪತ್ಯ ಕಲಾವಿದ ಪುತ್ತುನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ಮುಂಬಯಿ ಉದ್ಯಮಿ ಸಂತೋಷ್ ಶೆಟ್ಟಿ ಕಿಲೆಂಜೂರು, ಸಂಘಟಕ ಪದ್ಮನಾಭ ಕಟೀಲು, ಹರಿಣಾಕ್ಷಿ ಪದ್ಮನಾಭ ಉಪಸ್ಥಿತರಿದ್ದರು.

Kinnigoli-24041803

Comments

comments

Comments are closed.

Read previous post:
Kinnigoli-24041802
ಉಳೆಪಾಡಿ: ಬ್ರಹ್ಮಕಲಶ ಧಾರ್ಮಿಕ ಸಭೆ

ಕಿನ್ನಿಗೋಳಿ: ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಿಂದ ಗ್ರಾಮದಲ್ಲಿ ಸುಭಿಕ್ಷೆ ನೆಲಸಲು ಸಾಧ್ಯವಿದೆ ಎಂದು ಕೇಮಾರು ಸಾಂದೀಪನಿ ಸಾಧಾಶ್ರಮದ ಮಠಾದೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಉಳೆಪಾಡಿಯ ಶ್ರೀ ಉಮಾ...

Close