ಪಕ್ಷಿಕೆರೆ ಬೇಸೆಗೆ ಶಿಬಿರ ಸಮಾರೋಪ

ಕಿನ್ನಿಗೋಳಿ: ಎಳೆಯ ಪ್ರಾಯದ ಮಕ್ಕಳ ಮನಸ್ಸನ್ನು ಅರ್ಥಮಾಡಿ ಕೊಂಡು ಮಕ್ಕಳಿಗೆ ಜ್ಞಾನ ತುಂಬುವಂತಹ ಕೆಲಸ ಇಂತಹ ಬೇಸಗೆ ಶಿಬಿರಗಳಿಂದ ಸಾಧ್ಯ ಎಂದು ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಧರ್ಮಗುರು ಫಾ| ಅಂಡ್ರ್ಯೋ ಲಿಯೋಡಿಸೋಜ ಹೇಳಿದರು. ಪಕ್ಷಿಕೆರೆ ಪೇಟೆಯ ಗಣೇಶ ಮಂಟಪದಲ್ಲಿ ಭಾನುವಾರ ನಡೆದ ಪಕ್ಷಿಕೆರೆ ಕಲಾತರಂಗ ಸಂಘಟನೆಯ ಆಶ್ರಯದಲ್ಲಿ ಒಂದು ವಾರಗಳ ಕಾಲ ನಡೆದ ಬೇಸಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸುರಗಿರಿ ದೇವಳದ ಅರ್ಚಕ ವಿಶ್ವೇಶ ಭಟ್ ಮಾತನಾಡಿ ಎಲ್ಲಾ ಮಕ್ಕಳಲ್ಲಿ ಒಂದಲ್ಲ ಒಂದು ಪ್ರತಿಭೆ ಇದೆ ಅದನ್ನು ತಿದ್ದಿ ತೀಡುಚುದು ಹಿರಿಯರ ಕೆಲಸ ಎಂದು ಹೇಳಿದರು. ಪಕ್ಷಿಕೆರೆ ಮಸೀದಿಯ ಧರ್ಮಗುರು ಅಶ್ರಪ್ ಅಂಜದಿ, ಉಪನ್ಯಾಸಕಿ ಅರ್ಪಿತಾ ಶೆಟ್ಟಿ, ಸಂಘಟಕ ನಿತಿನ್ ವಾಸ್ ಪಕ್ಷಿಕೆರೆ ಉಪಸ್ಥಿತರಿದ್ದರು.
ನಿಯಾಲ್ ಸ್ವಾಗತಿಸಿದರು. ಜಾಹ್ನವಿ ಹಾಗೂ ಸಾತ್ವಿಕ್ ಕಾರ್ಯಕ್ರಮ ನಿರೂಪಿಸಿದರು.

Kinnigoli-24041801

Comments

comments

Comments are closed.

Read previous post:
Kinnigoli-23041804
ಉಳೆಪಾಡಿ: ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಉಳೆಪಾಡಿ ಶ್ರೀ ಉಮಾ ಮಹೇಶ್ವರ ಮಹಾಗಣಪತಿ ದೇವಳದಲ್ಲಿ ಸೋಮವಾರ ಬೆಳಿಗ್ಗೆ 10.50 ರ ಮಿಥುನ ಲಗ್ನದಲ್ಲಿ ಎಡಪದವು ಬ್ರಹ್ಮಶ್ರೀ ವೆಂಕಟೇಶ ತಂತ್ರಿಗಳ ನೇತ್ರತ್ವದಲ್ಲಿ ಮುಂಡ್ಕೂರು ವೇದಮೂರ್ತಿ ಅನಂತ...

Close