ಉಳೆಪಾಡಿ: ಬ್ರಹ್ಮಕಲಶ ಧಾರ್ಮಿಕ ಸಭೆ

ಕಿನ್ನಿಗೋಳಿ: ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಿಂದ ಗ್ರಾಮದಲ್ಲಿ ಸುಭಿಕ್ಷೆ ನೆಲಸಲು ಸಾಧ್ಯವಿದೆ ಎಂದು ಕೇಮಾರು ಸಾಂದೀಪನಿ ಸಾಧಾಶ್ರಮದ ಮಠಾದೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಉಳೆಪಾಡಿಯ ಶ್ರೀ ಉಮಾ ಮಹೇಶ್ವರ ಮಹಾಗಣಪತಿ ದೇವಳದಲ್ಲಿ ನೂತನ ಗರ್ಭಗೃಹದಲ್ಲಿ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿ ಟಿ. ವಿ ಹಾಗೂ ಮೊಬೈಲ್‌ನಿಂದ ಯುವ ಜನತೆ ಪಾಶ್ಚತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿದ್ದು ಇತರ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಇದರ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ಹೇಳಿದರು.
ಶ್ರೀ ಕ್ಷೇತ್ರ ಮುಂಡ್ಕೂರು ದೇವಳ ಅರ್ಚಕ ಅನಂತಕೃಷ್ಣ ಆಚಾರ್ಯ, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಮುಂಡ್ಕೂರು ದೇವಳದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ವಾದಿರಾಜ ಶೆಟ್ಟಿ, ಕಜೆಮಾರಿಗುಡಿಯ ಗೌರವಾಧ್ಯಕ್ಷ ಎಂ. ಕೆ. ಕರ್ಕೇರಾ, ಸುಧಾಕರ ಶೆಟ್ಟಿ ಮುಲ್ಲಡ್ಕ ಗುರುಪ್ರಸಾದ್, ಮುಂಬಯಿ ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಕಾರ್ಯಧ್ಯಕ್ಷ ದಿವಾಕರ ಚೌಟ ಬಡಗು ಮನೆ, ನಾರಾಯಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಬಡಗುಮನೆ, ಕೋಶಾಕಾರಿ ನವೀನ್ ಶೆಟ್ಟಿ, ಕೃಷ್ಣ ಶೆಟ್ಟಿ, ಪಡ್ಡಣ ಗುತ್ತು, ಮುಂಬಯಿ ಸಮಿತಿಯ ಕೃಷ್ಣ ರಾಜ ಶೆಟ್ಟಿ, ರವೀಂದ್ರ ಶೆಟ್ಟಿ ಉಳೆಪಾಡಿಗುತ್ತು , ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.
ಅಧ್ಯಕ್ಷ ರಾಜೇಶ್ ಶೆಟ್ಟಿ ಪುಲ್ಲೋಡಿ ಬೀಡು ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿದರು.

Kinnigoli-24041802

Comments

comments

Comments are closed.

Read previous post:
Kinnigoli-24041801
ಪಕ್ಷಿಕೆರೆ ಬೇಸೆಗೆ ಶಿಬಿರ ಸಮಾರೋಪ

ಕಿನ್ನಿಗೋಳಿ: ಎಳೆಯ ಪ್ರಾಯದ ಮಕ್ಕಳ ಮನಸ್ಸನ್ನು ಅರ್ಥಮಾಡಿ ಕೊಂಡು ಮಕ್ಕಳಿಗೆ ಜ್ಞಾನ ತುಂಬುವಂತಹ ಕೆಲಸ ಇಂತಹ ಬೇಸಗೆ ಶಿಬಿರಗಳಿಂದ ಸಾಧ್ಯ ಎಂದು ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ...

Close