ಮೂಲ್ಕಿ: ಬಿಜೆಪಿ ಕಚೇರಿ ಉದ್ಘಾಟನೆ

ಮೂಲ್ಕಿ: ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವುದು ನಿಶ್ಚಿತ, ಕ್ಷೇತ್ರದಲ್ಲಿ ನಡೆಯುತ್ತಿರುವ ದ್ವೇಷ ರಾಜಕಾರಣ, ಗೂಂಡಾ ಹಾಗೂ ದಬ್ಬಾಳಿಕೆಯನ್ನು ವಿರೋಧಿಸುವ ಜನ ಸಾಮಾನ್ಯರು ಬಿಜೆಪಿಯನ್ನು ಜಯದತ್ತ ಸಾಗಿಸಲಿದ್ದಾರೆ ಎಂದು ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಮೂಲ್ಕಿಯ ವಿಜಯ ಸನ್ನಿಧಿಯಲ್ಲಿ ಬಿಜೆಪಿ ಚುನಾವಣಾ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾಧ್ಯಮದೊಂದಿಗೆ ಮಾತನಾಡಿದರು.
ರಾಜ್ಯದಲ್ಲಿಯೇ ಕಾಂಗ್ರೆಸ್ ವಿರೋಧಿ ಅಲೆಯಿದೆ. ಮೂಲ್ಕಿ ಮೂಡಬಿದಿರೆಯಲ್ಲಿಯೂ ಸಹ ಹಾಲಿ ಶಾಸಕರ ವಿರೋಧಿ ಅಲೆಯು ಬಿಜೆಪಿಯನ್ನು ಜಯದ ಹಾದಿಯಲ್ಲಿ ಸಾಗಿಸಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ಲೂಟಿ ಮಾಡುವ ಗ್ಯಾಂಗ್ ಆಗಿರುವ ಕಾಂಗ್ರೆಸ್ ಮುಕ್ತ ಕರ್ನಾಟಕವನ್ನಾಗಿ ಜನರೇ ಮತದಾನದ ಮೂಲಕ ತೋರಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್‌ರ ಗೆಲುವೇ ನಮ್ಮೆಲ್ಲಾ ಕಾರ್ಯಕರ್ತರ ಜವಬ್ದಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು, ಪ್ರಧಾನ ಕಾರ್ಯದರ್ಶಿ ಜಯಾನಂದ ಮೂಲ್ಕಿ, ಪ್ರಚಾರ ಸಮಿತಿಯ ಅಧ್ಯಕ್ಷ ಕೆ.ಭುವನಾಭಿರಾಮ ಉಡುಪ, ಯುವ ಮೋರ್ಚ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವಾ, ಉಪಾಧ್ಯಕ್ಷೆ ರಾಧಿಕಾ ಕೋಟ್ಯಾನ್, ಸದಸ್ಯರಾದ ಶೈಲೇಶ್‌ಕುಮಾರ್, ಉಮೇಶ್ ಪೂಜಾರಿ, ಮಿನಾಕ್ಷಿ ಬಂಗೇರ, ಪುರಷೋತ್ತಮ ರಾವ್, ವಿಠಲ, ಪ್ರಮುಖರಾದ ಸತೀಶ್ ಅಂಚನ್, ಸತ್ಯೇಂದ್ರ ಶೆಣೈ, ಅಶೋಕ್ ಚಿತ್ರಾಪು, ರಜಾಕ್ ಮೂಲ್ಕಿ, ಕಿಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಕುಲಾಲ್ ಮತ್ತಿತರರು ಇದ್ದರು.

ಪಕ್ಷಕ್ಕೆ ಸೇರ್ಪಡೆ
ಮೂಲ್ಕಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಕಾಂಗ್ರೆಸ್‌ನ ಮೋಹನ್ ಕುಬೆವೂರು, ಮೂಲ್ಕಿ ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯ ಕಾಂಗ್ರೆಸ್‌ನ ಲಕ್ಷ್ಮಣ್ ಪೂಜಾರಿ, ಜಯ ಕರ್ನಾಟಕ ಮೂಲ್ಕಿ ಘಟಕದ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್ ಕೆಂಚನಕೆರೆ ಅವರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಇವರನ್ನು ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು ಬಿಜೆಪಿ ಧ್ವಜ ನೀಡಿ ಸ್ವಾಗತಿಸಿದರು.

Mulki-25041801 Mulki-25041802

Comments

comments

Comments are closed.

Read previous post:
Kinnigoli-24041806
ಶ್ರೀ ಮಾರಿಯಮ್ಮ ದೇವಳ ಮಾರಡ್ಕ ಬಿಂಬ ಪ್ರತಿಷ್ಠೆ.

ಕಿನ್ನಿಗೋಳಿ : ಮಾರಡ್ಕ ಶ್ರೀ ಮಾರಿಯಮ್ಮ ದೇವಳದ ಮಾರಿಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಕಿನ್ನಿಗೋಳಿ ಅಶ್ವತ್ಥಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ದೇವರ ಬಿಂಬ ಪ್ರತಿಷ್ಠೆ.

Close