ಕಟೀಲು ಸಿತ್ಲ: ಯಕ್ಷಗಾನ ಕಲಾವಿದರಿಗೆ ಸಮ್ಮಾನ

ಕಿನ್ನಿಗೋಳಿ: ಯಕ್ಷಗಾನ ಕಲೆ ನಶಿಸಿಹೋಗುವ ಕಲೆಯಲ್ಲ ಅದು ಶಿಷ್ಟ ಪರಂಪರೆಯ ಕಲೆ, ಈ ಕಲೆಯ ಮೂಲಕ ಜನರಲ್ಲಿ ಧಾರ್ಮಿಕತೆ ಪುರಾಣ ಜ್ಞಾನ ಸನ್ನಡೆತೆಯಲ್ಲಿ ಸನ್ಮಾರ್ಗದಲ್ಲಿ ಸುಸಂಸ್ಕೃತರನ್ನಾಗಿಸಲು ಸಾಧ್ಯವಿದೆ ಎಂದು ಕಟೀಲು ದೇವಳದ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಟೀಲು ಸಿತ್ಲ ಬಲಿನಲ್ಲಿ ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮಸರಣಾ ಸಮಿತಿ ಮುಂಬಯಿ ಹಾಗೂ ದುಬ ಇದರ ಆಶ್ರಯದಲ್ಲಿ ಬುಧವಾರ ಶ್ರೀಧರ್ಮಸ್ಥಳ ಮಂಜುನಾಥ ಕೃಪಾಪೋಷಿತ ಯಕ್ಷಗಾನ ಬಯಲಾಟ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಕಟಿಲು ದೇವಳದ ಅರ್ಚಕ ಶ್ರೀ ಹರಿನಾಯಣ ದಾಸ ಆಸ್ರಣ್ಣ ಮಾತನಾಡಿ ಪದದ್ಮನಾಭ ಕಟೀಲು ಅವರು ಕೀರ್ತಿಶೇಷ ಗೋಪಾಕೃಷ್ಣ ಆಸ್ರಣ್ಣರ ನೆನಪಿನಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣರ ಮಾರ್ಗದರ್ಶನದ ಮೂಲಕ ಮುಂಬಯಿ ದುಬಯಲ್ಲಿ ಯಕ್ಷಗಾನ ಹಾಗೂ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ ಹಾಗೂ ನೇಪತ್ಯದ ಕಲಾವಿದರನ್ನು ಗೌರವಿಸುವ ಸಂಪ್ರದಾಯ ಉತ್ತಮವಾದುದು, ಇತರಿಗೂ ಅನುಕರಣೀಯ ಎಂದು ಹೇಳಿದರು.
ಈ ಸಂದರ್ಭ ಮೇಳದ ಹಿರಿಯ ಕಲಾವಿದ ಕುಂಬಳೆ ಶ್ರೀಧರರಾವ್, ವಸಂತ ಕಾರ್ಯತ್ಕಡ್ಕ , ನಾಟಕಕಾರ ಅರವಿಂದ ಬೋಳಾರ, ನೇಪತ್ಯ ಕಲಾವಿದ ಪದಯ್ಯ ಗೌಡ ಅವರನ್ನು ಸಮ್ಮಾನಿಸಲಾಯಿತು.
ಮುಂಬಯಿ ಉದ್ಯಮಿಗಳಾದ ಉದ್ಯಮಿ ಆನಂದ ಡಿ. ಶೆಟ್ಟಿ ಎಕ್ಕಾರು, ಯಾದವ ಕೃಷ್ಣ ಶೆಟ್ಟಿ ಶಿಬರೂರು, ಸಂತೋಷ್ ಶೆಟ್ಟಿ ಕಿಲೆಂಜೂರು, ಸಂಘಟಕ ಪದ್ಮನಾಭ ಕಟೀಲು, ಹರಿಣಾಕ್ಷಿ ಪದ್ಮನಾಭ ಉಪಸ್ಥಿತರಿದ್ದರು.

Kateel-26041801

Comments

comments

Comments are closed.

Read previous post:
ಏ.27 ಸುರಗಿರಿ ಯುವಕಮಂಡಲ ವಾರ್ಷಿಕೋತ್ಸವ

ಕಿನ್ನಿಗೋಳಿ: ಸುರಗಿರಿ ಯುವಕ ಮಂಡಲ (ರಿ) 48ನೇ ವಾರ್ಷಿಕೋತ್ಸವ ಸುರಗಿರಿ ದೇವಳದ ವಠಾರದಲ್ಲಿ ಏ.27 ರಂದು ರಾತ್ರಿ 8.00 ಗಂಟೆಗೆ ನಡೆಯಲಿದ್ದು ಸಭಾಕಾರ್ಯಕ್ರಮದಲ್ಲಿ ಕುಂಟಾರು ರವೀಶ್ ತಂತ್ರಿ ಪ್ರಧಾನ...

Close