ಬಿಜೆಪಿ ಸರಕಾರ ಅಭಿವೃದ್ದಿ ಪರ

ಕಿನ್ನಿಗೋಳಿ: ಈ ಬಾರಿ ಬಿಜೆಪಿಗೆ ಅದ್ಭುತವಾದ ಜನ ಬೆಂಬಲ ಸಿಗುತ್ತಿದೆ. ಮುಸ್ಲೀಂ ಮತ್ತು ಕ್ರೈಸ್ತ ಬಂಧುಗಳೂ ಬಿಜೆಪಿ ಪರ ಒಲವನ್ನು ಇರಿಸಿದ್ದಾರೆ. ರಾಜ್ಯದಲ್ಲಿಯೂ ಬಿಜೆಪಿ ಸರಕಾರ ಬರಬೇಕು ಆಗ ಅಭಿವೃದ್ದಿ ಪೂರಕ ಕೆಲಸಗಳು ಆಗುತ್ತದೆ ಎಂದು ಮೂಲ್ಕಿ ಮೂಡಬಿದ್ರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಹೇಳಿದರು.
ಪುನರೂರಿನಲ್ಲಿ ಗುರುವಾರ ನಡೆದ ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಗ್ರಾಮ ಪ್ರವಾಸದಲ್ಲಿ ಮಾತನಾಡಿದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಬ್ರಿಜೇಶ್ ಚೌಟ, ಮೇಘನಾಥ ಶೆಟ್ಟಿ, ವಿನೋದ್ ಬೋಳ್ಳೂರು, ದಿವಾಕರ ಕರ್ಕೇರ, ಕೆ. ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ರಘುರಾಮ ಪುನರೂರು, ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kateel-26041804

Comments

comments

Comments are closed.

Read previous post:
Kateel-26041803
ಸುರಗಿರಿ – ಹಗಲು ರಥೋತ್ಸವ

ಕಿನ್ನಿಗೋಳಿ : ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಜಾತ್ರಾಮಹೋತ್ಸವದ ಪ್ರಯುಕ್ತ ಗುರುವಾರ ಹಗಲು ರಥೋತ್ಸವ ನಡೆಯಿತು.  

Close