ಏ. 28-29 ಕೆರೆಕಾಡು ಯಕ್ಷ ಕೌಮುದಿ- 2018 

ಕಿನ್ನಿಗೋಳಿ : ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು ಇದರ ದಶ ಸಂಭ್ರಮ ಯಕ್ಷಕೌಮುದಿ -2018 ಕಾರ್ಯಕ್ರಮ ಏ. 28 ಹಾಗೂ 29 ರಂದು ಸಂಜೆ ಎಸ್. ಕೋಡಿ ಎಮ್ ಆರ್ ಪೂಂಜಾ ಐಟಿಐ ಮುಂಭಾಗದಲ್ಲಿನ ಷಣ್ಮುಖ ನಗರದಲ್ಲಿ ನಡೆಯಲಿದೆ. ಬಾರ್ಕೂರು ಸಂಸ್ಥಾನದ ಶ್ರೀ ಡಾ. ವಿಶ್ವಸಂತೋಷ ಭಾರತೀ ಶ್ರೀಪಾದರು ದಶ ಸಂಭ್ರಮ ಉದ್ಘಾಟಿಸಿಲಿರುವರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆಯನ್ನು ವಹಿಸಲಿರುವರು. ಒಡಿಯೂರು ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡಲಿರುವರು. ಈ ಸಂದರ್ಭ ಗಣೇಶ್ ಕೊಲಕಾಡಿ, ಮಾಬಾಂಡಿ ಸುಬ್ರಹ್ಮಣ್ಯ ಭಟ್, ಪ್ರಸಾದ್ ಚೇರ್ಕಾಡಿ, ದಿವಾಕರ ದಾಸ್, ದಿನೇಶ್ ಶೆಟ್ಟಿ ಕಾವಳಕಟ್ಟೆ, ಮೋಹನ ಆಚಾರ್ಯ, ರವಿ ಭಟ್ ಹಳೆಯಂಗಡಿ ಗುರುವಂದನೆಯಡಿಯಲ್ಲಿ ಗೌರವಿಸಲಾಗುವುದು. ರಾತ್ರಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಂಬಯಿ ಧರ್ಮದರ್ಶಿ ಅಣ್ಣಿ ಶೆಟ್ಟಿ, ಆರ್ಯಭಟ ಪ್ರಶಸ್ತಿ ಪಡೆದ ವಿ. ಕೆ. ಸುವರ್ಣ ಪಡುಬಿದ್ರಿ, ಮೆಸ್ಕಾಂ ಇಂಜಿನಿಯರ್ ಮಂಜಪ್ಪ, ನೆರುಲ್ ಉದ್ಯಮಿ ಸತೀಶ್ ಪೂಜಾರಿ, ಮುಂಬೈ ಹೆಗ್ಡ ಸೇವಾ ಸಂಘದ ಅಧ್ಯಕ್ಷ ವಿಜಯ್ ಹೆಗ್ಡೆ, ಮುಂಬೈ ಉದ್ಯಮಿ ಶ್ಯಾಮ ಶೆಟ್ಟಿ, ಕನ್ನಡ ಕಲಾ ಕೇಂದ್ರದ ಬಲೂರು ರಾಮಚಂದ್ರರಾವ್, ನೆರುಲ್ ಮುಂಬೈ ಪ್ರಭಾಕರ ಹೆಗ್ಡೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ದೇವಿ ಪ್ರಸಾದ್ ಶೆಟ್ಟಿ, ಮುಂಬೈ ಉದ್ಯಮಿ ಧನಂಜಯ ಅಮೀನ್ ಅವರನ್ನು ಯಕ್ಷಕೌಮುದಿ ಪ್ರಶಸ್ತಿ ನೀಡಿ ಗೌರವಿಲಾಗುವುದು. ಅರ್ಥಧಾರಿ ಕಲಾವಿದರಾಸ ಕೆ. ಕೆ. ಶೆಟ್ಟಿ , ಯಕ್ಷಗಾನ ಕಲಾವಿದ ಸೀತರಾಮ ಕುಮಾರ್ ಕಟೀಲು, ಚಂದ್ರಶೇಖರ ಧರ್ಮಸ್ಥಳ, ಕಲಾವಿದರಾದ ಅನಿಲ್ ಕೆ. ಹೆಗ್ಡೆ, ರಂಜಿತ್ ಶೆಟ್ಟಿ, ಜಗದೀಶ ಶೆಟ್ಟಿ, ಕಲಾ ಪೋಷಕ ರೂಪರಾಜ ಶೆಟ್ಟಿ ಮುಂಡ್ಕೂರು, ಆನಂದ ಪಿರಿಯ ಪೂಜಾರಿ ಹೆರೂರು, ಭಾಗವತ ರವಿಶಂಕರ ಆಚಾರ‍್ಯ , ಕಲಾವಿದ ವಿಶ್ವನಾಥ ಪೂಜಾರಿ ಅವರನ್ನು ವಿನಾಯಕ ಯಕ್ಷಕಲಾ ರತ್ನ ಪ್ರಶಸ್ತಿ ನೀಡಿ ಸಮ್ಮಾನಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಜಯಂತ್ ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-27041804
ಎಳತ್ತೂರು ದೇವಳ ಹಗಲು ರಥೋತ್ಸವ

 ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಮಹೋತ್ಸವದ ಪ್ರಯುಕ್ತ ಶುಕ್ರವಾರ ಹಗಲು ರಥೋತ್ಸವ ನಡೆಯಿತು.

Close