ಹಳೆಯಂಗಡಿ : ಕಿಶೋರಿ ಶಕ್ತಿ ತರಬೇತಿ ಶಿಬಿರ

ಕಿನ್ನಿಗೋಳಿ : ಶಿಕ್ಷಣದ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯುವ ಹೆಣ್ಣು ಮಕ್ಕಳ ಮೇಲೆ ಪೋಷಕರು ವಿಶೇಷ ಕಾಳಜಿ ವಹಿಸಬೇಕು. ಹದಿಹರೆಯದಲ್ಲಿ ಅವರಲ್ಲಿ ಆಗುವಂತಹ ಅನೇಕ ಬದಲಾವಣೆಗಳನ್ನು ಗಮನಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಶಕ್ತಿ ಹೆತ್ತ ತಾಯಿಗೆ ಇದೆ ಎಂದು ಮೂಲ್ಕಿ ಅಂಗನವಾಡಿ ವಲಯದ ಮೇಲ್ವಿಚಾರಕಿ ನಾಗರತ್ನ ಹೇಳಿದರು.
ಹಳೆಯಂಗಡಿ ಸಮೀಪದ ಬೊಳ್ಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಸಂಯೋಜನೆಯಲ್ಲಿ ನಡೆದ ಕಿಶೋರಿ ಶಕ್ತಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಜಪೆ ವಲಯದ ಮೇಲ್ವಿಚಾರಕಿ ಅಶ್ವಿನಿ ಮಾತನಾಡಿ, ಹೆಣ್ಣು ಮಕ್ಕಳ ಮೇಲಿನ ಮಮತೆ ಪೋಷಕರಲ್ಲಿ ಹೆಚ್ಚಾಗಿರಬೇಕು, ಆಕೆಗೆ ತನ್ನ ಜವಬ್ದಾರಿ ತಿಳಿಯುವವರೆಗೂ ಹೆತ್ತವರೇ ಜವಬ್ದಾರರಾಗಿರುತ್ತಾರೆ. ಸಮಾಜದಲ್ಲಿ ಆಧುನಿಕತೆಯ ಯುಗದಲ್ಲಿ ಹಾದಿ ತಪ್ಪದ ಹಾಗೂ ಸೂಕ್ಷ್ಮ ವಿಚಾರಗಳನ್ನು ಆಕೆಯೊಂದಿಗೆ ಸ್ನೇಹಿತೆಯಾಗಿ ತಿಳಿಹೇಳಿರಿ ಎಂದರು.
ಐದು ದಿನದ ವರೆಗೆ ನಡೆದ ತರಬೇತಿಯನ್ನು ಮೂಲ್ಕಿ, ಕಾಟಿಪಳ್ಳ, ಬಜಪೆ ವಲಯದ ಆಂಗನವಾಡಿ ಕಾರ್ಯಕರ್ತೆ, ಸಹಾಯಕಿಯರೊಂದಿಗೆ 30 ಮಂದಿ ಕಿಶೋರಿಯರು ಹಾಗೂ ಅವರ ಪೋಷಕರು ಭಾಗವಹಿಸಿದ್ದರು. ಶಿಬಿರದಲ್ಲಿ ಭಾಗವಹಿಸಿದ ಕಿಶೋರಿಯರು ತಮ್ಮ ಅಭಿಪ್ರಾಯವನ್ನು ಸಾರ್ವತ್ರಿಕವಾಗಿ ಹೇಳಿಕೊಂಡರು.
ಶಿಬಿರದಲ್ಲಿ ವ್ಯಕ್ತಿತ್ವ ತರಬೇತಿ, ಪರಿಸರ ಸ್ವಚ್ಚತೆ, ಆರೋಗ್ಯ, ಯೋಗ, ಮನೆಯಲ್ಲಿಯೇ ತಯಾರಿಸಬಹುದಾದ ಆಟಿಕೆ, ಶೃಂಗಾರ ಸಾಮಾಗ್ರಿ, ಶಿಕ್ಷಣ, ಉದ್ಯೋಗ, ಸಮಾಜ ಮುಖಿ ಚಿಂತನೆಯ ಬಗ್ಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.

Kinnigoli-27041802

Comments

comments

Comments are closed.

Read previous post:
ಎ.28- ಹಳೆಯಂಗಡಿ ಗುರುಮೂರ್ತಿ ಪ್ರತಿಷ್ಠಾಪನಾ

ಕಿನ್ನಿಗೋಳಿ : ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಬ್ರಹ್ಮಶ್ರಿ ನಾರಾಯಣ ಗುರು ಮಂದಿರ ಹಳೆಯಂಗಡಿಯ ಗುರು ಮೂರ್ತಿ ಪ್ರತಿಷ್ಠಾಪನಾ ದಿನಾಚರಣೆ ಹಾಗೂ ಸಾಮೂಹಿಕ ಶ್ರಿ ಸತ್ಯನಾರಾಯಣ ಪೂಜೆ ಎ.28ರಂದು...

Close