ಸುರಗಿರಿ ಮಹಿಳಾ ಮಂಡಲ ವಾರ್ಷಿಕೋತ್ಸವ

ಕಿನ್ನಿಗೋಳಿ : ಸಂಘ ಸಂಸ್ಥೆಗಳು ಗ್ರಾಮದ ಜನರ ಕಷ್ಟ ಸುಖಕ್ಕೆ ಸ್ಪಂದಿಸಿ ಇತರರಿಗೆ ಮಾದರಿಯಾಗಬೇಕು. ಕೇವಲ ವಾರ್ಷಿಕೋತ್ಸವ , ಕ್ರೀಡಾ ಕೂಟಕ್ಕೆ ಸೀಮಿತವಾಗಬಾರದು ಎಂದು ಶ್ರೀ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಕೆ. ಸೀತರಾಮ ಶೆಟ್ಟಿ ಹೇಳಿದರು.
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಗುರುವಾರ ನಡೆದ ಸುರಗಿರಿ ಮಹಿಳಾ ಹಾಗೂ ಯುವತಿ ಮಂಡಲದ 12ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಯುವ ವಾಗ್ಮಿ ಅಕ್ಷತಾ ಬಜಪೆ ಮಾತನಾಡಿ ಯುವ ಜನಾಂಗ ಧಾರ್ಮಿಕತೆಯಿಂದ ದೂರ ಸಾಗುತ್ತಿದ್ದು ನಮ್ಮ ಸನಾತನ ಧರ್ಮಕ್ಕೆ ಪೆಟ್ಟು ಬೀಳುತ್ತಿದೆ. ಇದರ ಬಗ್ಗೆ ಎಚ್ಚರ ಹಾಗೂ ಜಾಗೃತಿ ಅತೀ ಅಗತ್ಯ ಎಂದು ಹೇಳಿದರು.
ಈ ಸಂದರ್ಭ ಹಿರಿಯ ಕೃಷಿಕರಾದ ಕಮಲ ಶೆಟ್ಟಿ ಅಂಗಡಿ ಮನೆ ಅವರನ್ನು ಗೌರವಿಸಲಾಯಿತು.
ಮೂಲ್ಕಿ ಕೊಲಕಾಡಿ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ರಾಜೇಶ್ವರೀ ಸೂರ್ಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಸುರಗಿರಿ ದೇವಳ ಅರ್ಚಕ ವಿಶ್ವೇಶ ಭಟ್ , ಸುರಗಿರಿ ಯುವಕ ಮಂಡಲದ ಅಧ್ಯಕ್ಷ ಧೀರಜ್ ಶೆಟ್ಟಿ ಮುಮ್ಮೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಸುರಗಿರಿ ಮಹಿಳಾ ಮಂಡಲದ ಅಧ್ಯಕ್ಷೆ ನಿರ್ಮಲಾ ನಾಯಕ್ ಸ್ವಾಗತಿಸಿದರು. ಗೀತಾ ಬಿ ಆಳ್ವ ವರದಿ ವಾಚಿಸಿದರು. ಪ್ರಮೀಳಾ ಶೆಟ್ಟಿ ಬಹುಮಾನಿತರ ವಿವರ ನೀಡಿದರು. ಅಮಿತಾ ಪಿ ಶೆಟ್ಟಿ ವಂದಿಸಿದರು . ಕೃಷ್ಣ ರಾಜ್ ಭಟ್ ಕೋಡು ಕಾರ್ಯಕ್ರಮ ನಿರೂಪಿಸಿದರು.

Kinnigoli-27041801

Comments

comments

Comments are closed.

Read previous post:
ಏ. 28-29 ಕೆರೆಕಾಡು ಯಕ್ಷ ಕೌಮುದಿ- 2018 

ಕಿನ್ನಿಗೋಳಿ : ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು ಇದರ ದಶ ಸಂಭ್ರಮ ಯಕ್ಷಕೌಮುದಿ -2018 ಕಾರ್ಯಕ್ರಮ ಏ. 28 ಹಾಗೂ 29 ರಂದು ಸಂಜೆ ಎಸ್. ಕೋಡಿ ಎಮ್ ಆರ್...

Close