ಎಳತ್ತೂರು ಫ್ರೆಂಡ್ಸ್ ಕ್ಲಬ್ ಪಡ್ಲಕ್ಯಾರು ವಾರ್ಷಿಕೋತ್ಸವ

ಕಿನ್ನಿಗೋಳಿ : ಆಧುನಿಕ ತಂತ್ರಜ್ಞಾನದ ಪ್ರಭಾವದಿಂದಾಗಿ ಇಂದು ಧಾರ್ಮಿಕ ಚಟುವಟಿಕೆಯಲ್ಲೂ ನಿರಾಸಕ್ತಿ ಎದ್ದು ಕಾಣುವಂತಾಗಿದೆ. ಮೊಬೈಲ್, ಟಿವಿ ಮುಂದೆ ಇರುವ ಮನುಷ್ಯನಿಗೆ ಇತರರೊಂದಿಗೆ ಭಾಂದವ್ಯ ಕಡಿಮೆಯಾಗತೊಡಗಿದೆ. ಇಂತಹ ಕಾಲಘಟ್ಟದಲ್ಲಿ ಯುವ ಸಂಘ-ಸಂಸ್ಥೆಗಳು ಧಾರ್ಮಿಕ ತಳಹದಿಯಲ್ಲಿ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಎಂದು ಉಡುಪಿ ಸಾಯಿರಾಧ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಹರ ಶೆಟ್ಟಿ ತಿಳಿಸಿದರು.
ಎಳತ್ತೂರು ಫ್ರೆಂಡ್ಸ್ ಕ್ಲಬ್ ಪಡ್ಲಕ್ಯಾರು ಇದರ 7 ನೇ ವಾರ್ಷಿಕೋತ್ಸವ ನಿಮಿತ್ತ ಎಳತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ ವೇದಿಕೆಯಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಮಾತನಾಡಿ, ಎಳತ್ತೂರು ಫ್ರೆಂಡ್ಸ್ ಕ್ಲಬ್ ಕಳೆದ ಏಳು ವರುಷಗಳಲ್ಲಿ ಮಾದರಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಅಶಕ್ತರಿಗೆ ನೆರವು ನೀಡುವ ಜೊತೆಗೆ ಸಮಾಜದ ಮರೆಯಲ್ಲಿದ್ದು ಸೇವೆಯನ್ನು ನೀಡುತ್ತಾ ಬಂದವರನ್ನು ತೆರೆ ಮೇಲೆ ತಂದು ಸನ್ಮಾನಿಸುವಂತಹ ಪುಣ್ಯದ ಕೆಲಸವೂ ಮಾಡುತ್ತಾ ಬಂದಿದೆ. ಇಂತಹ ಕೆಲಸ ಕಾರ್ಯ ಇನ್ನಷ್ಟು ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಶ್ರೀ ಮಹಮ್ಮಾಯಿ ದೇವಳದ ಪಡ್ಲಕ್ಯಾರು ಇದರ ಹಿರಿಯ ಅರ್ಚಕರಾದ ಜಾನೋಜಿ ರಾವ್ ಅವರನ್ನು ಸಮ್ಮಾನಿಸಲಾಯಿತು. ಆರ್ಥಿಕ ಅಶಕ್ತ ಕುಟುಂಬದ ಸುಂದರಿ ಆಚಾರಿ, ಕುಸುಮಾ, ಸೌಮ್ಯಾ ಇವರಿಗೆ ಫ್ರೆಂಡ್ಸ್ ಕ್ಲಬ್ ವತಿಯಂದ ಧನ ಸಹಾಯ ಮಾಡಲಾಯಿತು. ಸಾಧಕಿ ಶೃತಿ ಕುಲಾಲ್ ಇವರನ್ನು ಗೌರವಿಸಿ, ಪ್ರೋತ್ಸಾಹ ಧನ ನೀಡಲಾಯಿತು.
ಯಕ್ಷಗಾನ ಯಕ್ಷ ಕವಿ ಅರ್ಥಧಾರಿ, ಫ್ರೆಂಡ್ಸ್ ಕ್ಲಬ್‌ನ ಗೌರವ ಸಲಹೆಗಾರ ಶ್ರೀಧರ ಡಿ.ಎಸ್., ಅಭಿನಂದನಾ ಭಾಷಣಗೈದರು.
ಎಳತ್ತೂರು ಶ್ರೀಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಶ್ರೀ ಸಂತೋಷ್ ಕುಮಾರ್ ಹೆಗ್ಡೆ, ಉದ್ಯಮಿ ಧನಪಾಲ ಶೆಟ್ಟಿ ತಾಳಿಪಾಡಿ ಗುತ್ತು, ಉದಯ್ ಶೆಟ್ಟಿ ಕೆರೆಗುತ್ತು, ಶಶಿಧರ ಶೆಟ್ಟಿ ನಡಿಯಾಲ್ ಗುತ್ತು, ಫ್ರೆಂಡ್ಸ್ ಕ್ಲಬ್ ಸಲಹೆಗಾರ ಪ್ರಕಾಶ್ ಹೆಗ್ಡೆ, ಎಳತ್ತೂರು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶ್ಯಾಮ್ ಸುಂದರ್ ಶೆಟ್ಟಿ, ಫ್ರೆಂಡ್ಸ್ ಕ್ಲಬ್ ಮಹಿಳಾ ಘಟಕಾಧ್ಯಕ್ಷೆ ಲೀಲಾ ಪೂಜಾರ್ತಿ ಮತ್ತಿತರರು ಉಪಸ್ಥಿತರಿದ್ದರು.
ಶಶಿಕಾಂತ್ ರಾವ್ ಸ್ವಾಗತಿಸಿ, ಶ್ಯಾಮ್ ಸುಂದರ್ ಶೆಟ್ಟಿ ವಂದಿಸಿದರು. ದಿವಾಕರ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

Kinnigoli-27041803

Comments

comments

Comments are closed.

Read previous post:
Kinnigoli-27041802
ಹಳೆಯಂಗಡಿ : ಕಿಶೋರಿ ಶಕ್ತಿ ತರಬೇತಿ ಶಿಬಿರ

ಕಿನ್ನಿಗೋಳಿ : ಶಿಕ್ಷಣದ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯುವ ಹೆಣ್ಣು ಮಕ್ಕಳ ಮೇಲೆ ಪೋಷಕರು ವಿಶೇಷ ಕಾಳಜಿ ವಹಿಸಬೇಕು. ಹದಿಹರೆಯದಲ್ಲಿ ಅವರಲ್ಲಿ ಆಗುವಂತಹ ಅನೇಕ ಬದಲಾವಣೆಗಳನ್ನು ಗಮನಿಸಿ ಅವರಿಗೆ...

Close