ಹಳೆಯಂಗಡಿ ಗುರುಮೂರ್ತಿ ಪ್ರತಿಷ್ಠಾಪನಾ ದಿನ

ಹಳೆಯಂಗಡಿ : ಸಮಾನತೆಯ ಬೋಧನೆಯನ್ನು ನಡೆಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅನುಸರಿಸಿ ಅವರ ಸಂದೇಶಗಳನ್ನು ಜಗತ್ತಿಗೆ ಸಾರುವಂತಹ ಕೆಲಸ ನಾವೆಲ್ಲರೂ ಮಾಡಬೇಕು ಎಂದು ಧಾರ್ಮಿಕ ಚಿಂತಕ ಮಹೇಶ್ ಶಾಂತಿ ಹೆಜಮಾಡಿ ಹೇಳಿದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಬ್ರಹ್ಮಶ್ರಿ ನಾರಾಯಣ ಗುರು ಮಂದಿರದಲ್ಲಿ 5ನೇ ವರ್ಷದ ಗುರು ಮೂರ್ತಿ ಪ್ರತಿಷ್ಠಾಪನಾ ದಿನಾಚರಣೆ, ಕಲಶಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಡಾ.ಗಣೇಶ್ ಅಮೀನ್ ಸಂಕಮಾರ್ ಉಪನ್ಯಾಸವಿತ್ತರು.
ಸಮಾಜ ಸೇವಕ ಕಡಂಬೋಡಿ ಮಹಾಬಲ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಗಣೇಶ್ ಜಿ. ಬಂಗೇರ, ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್ ಸುವರ್ಣ, ಹೇಮನಾಥ ಕರ್ಕೇರ, ರವಿ ಜಿ. ಅಮೀನ್, ನಿತ್ಯಾನಂದ, ಸುರೇಶ್ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಸ್ವಾಗತಿಸಿದರು, ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ವಂದಿಸಿದರು.
ಸಂಜೆ ಸಾಮೂಹಿಕ ಶ್ರಿ ಸತ್ಯನಾರಾಯಣ ಪೂಜೆ ಜರುಗಿತು.

Kinnigoli-28041803

Comments

comments

Comments are closed.

Read previous post:
Kinnigoli-28041802
ಕಿನ್ನಿಗೋಳಿ ಪಥಸಂಚಲನ

ಕಿನ್ನಿಗೋಳಿ : ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಬಂದೋಹಸ್ತಿನ ಸಲುವಾಗಿ ಸಿ.ಆರ್.ಪಿ.ಎಫ್. ಮತ್ತು ಮೂಲ್ಕಿ ಪೋಲೀಸರು ಕಿನ್ನಿಗೋಳಿಯ ಬಟ್ಟಕೋಡಿಯಿಂದ ಮೂರುಕಾವೇರಿವರೆಗೆ ಪಥಸಂಚಲನ ನಡೆಸಿದರು.

Close