ಯಕ್ಷಗಾನ ಅನಕ್ಷರಸ್ಥರಿಗೆ ಶಿಕ್ಷಣ ತಿಳಿಹೇಳುತ್ತಿದೆ.

ಕಟೀಲು : ಯಕ್ಷಗಾನ ಕೇವಲ ಕಲೆಯಾಗಿರದೆ ಅನಕ್ಷರಸ್ಥರಿಗೆ ಪ್ರಬುದ್ಧತೆಯ ಶಿಕ್ಷಣ ತಿಳಿಹೇಳುತ್ತಿದೆ. ಯಕ್ಷಗಾನ ಮತ್ತು ದೈವಾರಾದನೆ ನಮ್ಮ ತುಳು ಸಂಸ್ಕೃತಿಯ ಪ್ರತೀಕ ಅದನ್ನು ಉಳಿಸಿ ಬೆಳೆಸುವಲ್ಲಿ ಮುಂಬೈಯಲ್ಲಿ ನೆಲೆ ನಿಂತ ನಮ್ಮ ತುಳುವರ ಕೊಡುಗೆ ಅಭಿನಂದನಾರ್ಹ ಎಂದು ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ವೈ,ಎನ್. ಶೆಟ್ಟಿ ಹೇಳಿದರು ಅವರು ಕಟೀಲಿನ ಸರಸ್ವತಿ ಸದನದಲ್ಲಿ ವಸಯಿ ಕರ್ನಾಟಕ ಸಂಘದ ಶ್ರೀ ಕಟೀಲು ಯಕ್ಷಕಲಾವೇದಿಕೆಯ ವತಿಯಿಂದ ನಡೆದ ಯಕ್ಷಗಾನದ ಸಂದರ್ಭ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಕ್ಷಗಾನ ಸಾಹಿತಿ ಡಾ.ವೈ ನಾರಾಯಣ ಶೆಟ್ಟಿ ಶಿಮಂತೂರು ಮಾತನಾಡಿ ಮುಂಬೈಯಲ್ಲಿ ಮಕ್ಕಳು ಆಂಗ್ಲ ಮಾದ್ಯಮದಲ್ಲಿ ಕಲಿಯುತ್ತಿದ್ದರೂ, ಇಲ್ಲಿನ ಮಣ್ಣಿನ ಭಾಷೆ ಕಲಿಯುವ ಕೆಲಸ ಮಾಡುತ್ತಿದ್ದಾರೆ. ಯಕ್ಷಗಾನ ಮಕ್ಕಳಿಗೆ ಯಕ್ಷಗಾನ ಕಲಿಸುವುದು ದೇವರ ಪಾದ ಸೇವೆ ಮಾಡುವಷ್ಟೆ ಶ್ರೇಷ್ಠವಾದುದು ಎಂದರು.
ಈ ಸಂದರ್ಭ ಯಕ್ಷಗಾನ ಗುರು ಕಟೀಲು ಸದಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು, ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಓ.ಪಿ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು
ಕಟೀಲು ದೇವಳದ ಆಡಳಿತ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಟೀಲು ದೇವಳದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಾಂಡು ವೈ ಶೆಟ್ಟಿ, ವಿಶಾಲ್ ಪಿ ಶೆಟ್ಟಿ, ದೇವೆಂದ್ರ ಬುನ್ನನ್ ಮತ್ತಿತರರು ಉಪಸ್ಥಿತರಿದ್ದರು.
ಕೃಷ್ಣ ಶಾಸ್ತ್ರಿ ನಿರೂಪಿಸಿದರು. ಈ ಸಂದರ್ಭ ಸಂಘದ ಮಕ್ಕಳಿಂದ ಸುದರ್ಶನ ಗರ್ವಭಂಗ ಮತ್ತು ಲವಕುಶ ಕಾಳಗ ತುಳು ಯಕ್ಷಗಾನ ಬಯಲಾಟ ನಡೆಯಿತು.

Kinnigoli-28041804

Comments

comments

Comments are closed.

Read previous post:
Kinnigoli-28041803
ಹಳೆಯಂಗಡಿ ಗುರುಮೂರ್ತಿ ಪ್ರತಿಷ್ಠಾಪನಾ ದಿನ

ಹಳೆಯಂಗಡಿ : ಸಮಾನತೆಯ ಬೋಧನೆಯನ್ನು ನಡೆಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅನುಸರಿಸಿ ಅವರ ಸಂದೇಶಗಳನ್ನು ಜಗತ್ತಿಗೆ ಸಾರುವಂತಹ ಕೆಲಸ ನಾವೆಲ್ಲರೂ ಮಾಡಬೇಕು ಎಂದು ಧಾರ್ಮಿಕ...

Close