ವೈವಾಹಿಕ ಜೀವನಕ್ಕೆಕಾಲಿಟ್ಟ12 ಜೋಡಿ

ಕಿನ್ನಿಗೋಳಿ : ಸಾದಾತ್ ವಲಿಯುಲ್ಲಾಹೀ (ಖ.ಸಿ)ಝಿಕ್‌ರ್ ಸ್ವಲಾತ್ ಮಜ್ಲಿಸ್ ಟ್ರಸ್ಟ್ (ರಿ)ಕೆರೆಕಾಡು ಮುಲ್ಕಿ ಇದರ 14ನೇ ವರ್ಷದ ಸಾಮೂಹಿಕ ವಿವಾಹ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮ ಟ್ರಸ್ಟ್‌ನ ವಠಾರದಲ್ಲಿ ನಡೆಯಿತು.
ಅಸೈಯದ್ ಮುಝಮ್ಮಿಲ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಅವರು ನೇತೃತ್ವದಲ್ಲಿ ಜರುಗಿದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯ ಒಟ್ಟು 12 ಜೊತೆ ನವ ವಧು-ವರರು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಗೈದರು.
ಸೌಹಾರ್ದ ಸಂಗಮ ಕಾರ್ಯಕ್ರಮವನ್ನು ಅಡ್ಡೂರು ಜುಮಾ ಮಸೀದಿಯ ಖತೀಬ್ ಶರೀಫ್ ದಾರಿಮಿ ಉದ್ಘಾಟಿಸಿ ಮಾತನಾಡಿ ಆಡಂಬರದ, ಲಕ್ಷಗಟ್ಟಲೆ ಖರ್ಚು ಭರಿಸಿ ನಡೆಸುವ ಮದುವೆಗಳಿಗಿಂದ ಇಂತಹ ಸರಳ ಸಾಮೂಹಿಕ ವಿವಾಹಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಇರಬೇಕು ಎಂದು ನುಡಿದರು.
ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ ಯುವ ಜನರು ಸಾಮೂಹಿಕ ವಿವಾಹಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಪ್ರೋತ್ಸಾಹಿಸುವ ಅಗತ್ಯವಿದೆ. ತಮ್ಮ ವಿವಾಹದೊಂದಿಗೆ ಕನಿಷ್ಠ ಒಬ್ಬ ಬಡ ಹೆಣ್ಣು ಮಗಳ ಮದುವೆ ಕಾರ್ಯ ನಡೆಸಿದರೆ ಬಡ ತಂದೆತಾಯಿಯ ಕಣ್ಣೀರು ಒರೆಸಿದ ಪುಣ್ಯ ಲಭಿಸುವುದು ಎಂದರು.
ಟ್ರಸ್ಟ್‌ನ ಗೌರವಾಧ್ಯಕ್ಷ ಎಂ.ಕೆ. ಕೋಯಾಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಸೈಯದ್ ಮುಝಮ್ಮಿಲ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುವಾ ನೆರೆವೇರಿಸಿದರು.
ಸುರತ್ಕಲ್ ರೇಂಜ್ ಜಂಹಿಯತುಲ್ ಮುಲ್ಲಿಮೀನ್‌ನ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ, ಕಾರ್ಯದರ್ಶಿ ಹನೀಫ್‌ದಾರಿಮಿ, ಹೈದರ್ ಮುಸ್ಲಿಯಾರ್, ಮಾಸ್ಟರ್ ಫಕೀರ್, ನೌಶಾದ್ ಹಾಜಿ ಸೂರಲ್ಪಾಡಿ, ಸಾಹುಲ್ ಹಮೀದ್ ಕದಿಕೆ, ಟ್ರಸ್ಟ್‌ನ ಅಧ್ಯಕ್ಷ ಮುಹಮ್ಮದ್ ಕೆರೆಕಾಡು, ವೂಳೂರು ದರ್ಗಾ ಶರೀಫ್‌ನ ಮುಜಾವರರಾದ ಜನಾಬ್ ಮುನೀರ್ ಸಾಹೇಬ್, ನಝೀರ್ ಸಾಹೇಬ್, ಸಂಚಾಲಕರ ಮತ್ತು ಟ್ರಸ್ಟಿಗಳಾದ ಮೂಸಬ್ಬ ನೂರಾನಿಯಾ, ಆಶಿಕ್ ಕಟಪಾಡಿ, ಇರ್ಷಾದ್ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.
ಸಾದಾತ್ ವಲಿಯುಲ್ಲಾಹೀ (ಖ.ಸಿ)ಝಿಕ್‌ರ್ ಸ್ವಲಾತ್ ಮಜ್ಲಿಸ್ ಟ್ರಸ್ಟ್ (ರಿ)ಕೆರೆಕಾಡು ಮುಲ್ಕಿ ಇದರ ವತಿಯಿಂದ ವೈವಾಹಿಕ ಜೀವನಕ್ಕೆ ಒಳಗಾಗ ಹೆಣ್ಣುಮಕ್ಕಳಿಗೆ ಟ್ರಸ್ಟ್ ನ ವತಿಯಿಂದ ನೀಡಲಾಗುವ ಚಿನ್ನಾಭರಣವನ್ನು ಅಸೈಯದ್ ಮುಝಮ್ಮಿಲ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಮತ್ತು ಅತಿಥಿಗಳು ಹಸ್ತಾಂತರಿಸಿದರು.

Kinnigoli-28041801

Comments

comments

Comments are closed.

Read previous post:
Kinnigoli-27041803
ಎಳತ್ತೂರು ಫ್ರೆಂಡ್ಸ್ ಕ್ಲಬ್ ಪಡ್ಲಕ್ಯಾರು ವಾರ್ಷಿಕೋತ್ಸವ

ಕಿನ್ನಿಗೋಳಿ : ಆಧುನಿಕ ತಂತ್ರಜ್ಞಾನದ ಪ್ರಭಾವದಿಂದಾಗಿ ಇಂದು ಧಾರ್ಮಿಕ ಚಟುವಟಿಕೆಯಲ್ಲೂ ನಿರಾಸಕ್ತಿ ಎದ್ದು ಕಾಣುವಂತಾಗಿದೆ. ಮೊಬೈಲ್, ಟಿವಿ ಮುಂದೆ ಇರುವ ಮನುಷ್ಯನಿಗೆ ಇತರರೊಂದಿಗೆ ಭಾಂದವ್ಯ ಕಡಿಮೆಯಾಗತೊಡಗಿದೆ. ಇಂತಹ ಕಾಲಘಟ್ಟದಲ್ಲಿ ಯುವ...

Close