ಕೆರೆಕಾಡು ವಿನಾಯಕ ಮಕ್ಕಳ ಮೇಳದ ದಶ ಸಂಭ್ರಮ

ಕಿನ್ನಿಗೋಳಿ: ಕಲೆಯನ್ನು ಆಶ್ಲೀಲವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಸಿನಿಮಾ ಗೀತೆಯನ್ನು ಅಳವಡಿಸಿ ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆ ತರುವುದನ್ನು ಸಾಮೂಹಿಕವಾಗಿ ನಿಷೇಧಿಸಬೇಕು ಎಂದು ಬಾರ್ಕೂರು ಮಹಾಸಂಸ್ಥಾನಮ್‌ನ ಡಾ.ವಿಶ್ವ ಸಂತೋಷ್ ಭಾರತೀ ಸ್ವಾಮೀಜಿ ಹೇಳಿದರು.
ಕಿನ್ನಿಗೋಳಿ ಸಮೀಪದ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದ ಮಕ್ಕಳ ಮೇಳದ ದಶಸಂಭ್ರಮವನ್ನು ಎಸ್.ಕೋಡಿಯ ಷಣ್ಮುಖ ನಗರದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
ನವರಸ ಭರಿತ ಕಲೆಯಾಗಿರುವ ಯಕ್ಷಗಾನಕ್ಕೆ ಮತ್ತೊಂದು ಸಮಾನತೆಯ ಕಲೆಯಿಲ್ಲ ಇಂತಹ ಯಕ್ಷಗಾನವನ್ನು ನೋಡುವ ಸಂಖ್ಯೆ ಕ್ಷೀಣವಾಗುತ್ತಿದೆ. ಪರಂಪರೆಯ ವೇಷ ಭೂಷಣಗಳು ಮರೆಯಾಗುತ್ತಿದೆ. ಆಶ್ಲೀಲತೆ, ಅಂಗ ಚಲನೆಯ ಹಾಸ್ಯ ಒಳಹೊಕ್ಕಿ ಧಕ್ಕೆ ತರುತ್ತಿದೆ ಎಂದರು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಕ್ಕಳಿಂದ ಯಕ್ಷಗಾನ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನಕ್ಕೆ ಕೆರೆಕಾಡಿನ ಮಕ್ಕಳ ಮೇಳ ಇಂದು ಹೊರ ರಾಜ್ಯಕ್ಕೂ ವಿಸ್ತರಣೆಯಾಗಿರುವುದು ಶ್ಲಾಘನೀಯ ಎಂದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಮಾತಾನಂದಮಯಿ ಆಶೀರ್ವಚನ ನೀಡಿ ಹಿರಿಯರ ಸಾಂಸ್ಕೃತಿಕ ಪರಂಪರೆಯನ್ನು ಕಿರಿಯರ ಮೂಲಕ ಮುಂದಿನ ಜನಾಂಗಕ್ಕೆ ತಲುಪಿಸುವ ಜವಬ್ದಾರಿ ನಮ್ಮ ಮೇಲಿದೆ ಎಂದರು.
ಈ ಸಂದರ್ಭ ಗುರುವಂದನೆ ಅಂಗವಾಗಿ ಗಣೇಶ್ ಕೊಲಕಾಡಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪ್ರಸಾದ್ ಚೇರ್ಕಾಡಿ, ದಿವಾಕರ ದಾಸ್, ದಿನೇಶ್ ಶೆಟ್ಟಿ ಕಾವಳಕಟ್ಟೆ, ಮೋಹನ್ ಆಚಾರ್ಯ, ರವಿರಾಜ್ ಭಟ್ ಹಳೆಯಂಗಡಿ ಅವರನ್ನು ಸನ್ಮಾನಿಸಲಾಯಿತು.
ಮೇಳದ ಪ್ರಮುಖರಾದ ಉಮೇಶ್ ಜೆ. ಆಚಾರ್ಯ, ಅಭಿಜಿತ್ ಕೆರೆಕಾಡು, ತಾರಾನಾಥ ಶೆಟ್ಟಿಗಾರ್, ಅಶೋಕ್, ಗಣೇಶ್ ಬಂಗೇರ, ರಾಮಪ್ರಕಾಶ, ಶ್ರೀಪತಿ ನಾಯಕ್, ಕಾವ್ಯಶ್ರೀ ಅಜೇರು, ಪ್ರೇಮಲತಾ ಅಮೀನ್, ಸಂಧ್ಯಾ ಆಚಾರ್ಯ, ರೇಷ್ಮಾ ಜಿ. ಬಂಗೇರ, ನರೇಂದ್ರ ಕೆರೆಕಾಡು ಅವರನ್ನು ಗೌರವಿಸಲಾಯಿತು.
ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮೂಡಬಿದ್ರೆ ಇನ್ನರ್‌ವ್ಹೀಲ್ ಅಧ್ಯಕ್ಷ ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಪಟೇಲ್ ವಾಸುದೇವ ರಾವ್ ಪುನರೂರು, ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಭಾಸ್ಕರ್ ದೇವಸ್ಯ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು, ಕಿನ್ನಿಗೋಳಿ ಸ್ವಾಮೀ ವಿವೇಕಾನಂದ ಸೇವಾ ಸಂಸ್ಥೆಯ ಪ್ರವರ್ತಕ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಮೇಳದ ಮುಂಬಯಿ ಸಮಿತಿಯ ಕಿಶೋರ್ ಕೊಟ್ಯಾನ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ ಶೆಟ್ಟಿ ಮುಚ್ಚೂರು, ಯಕ್ಷಕೌಮುದಿ ಕಲಾ ಸಂಘದ ಅಧ್ಯಕ್ಷ ಡಾ.ಕಿಶೋರ್‌ಕುಮಾರ್ ರೈ ಶೇಣಿ, ಯಕ್ಷಕೌಮುದಿ ಮಹಿಳಾ ಸಂಘದ ಅಧ್ಯಕ್ಷೆ ಪ್ರಜ್ಞಾ ದೀಪಕ್, ಮೇಳದ ಗೌರವಾಧ್ಯಕ್ಷ ಜೈಕೃಷ್ಣ ಕೋಟ್ಯಾನ್, ಉಪಾಧ್ಯಕ್ಷ ಉಮೇಶ್ ಜೆ. ಅಚಾರ್ಯ, ಕಾರ್ಯದರ್ಶಿ ರೇಷ್ಮಾ ಜಿ. ಬಂಗೇರ, ಸಹ ಕಾರ್ಯದರ್ಶಿ ಸಂಧ್ಯಾ ಆಚಾರ್ಯ, ಕೋಶಾಧಿಕಾರಿ ಪ್ರೇಮಲತಾ ಜೆ. ಅಮೀನ್ ಉಪಸ್ಥಿತರಿದ್ದರು.
ಮೇಳದ ಅಧ್ಯಕ್ಷ ಜಯಂತ್ ಅಮೀನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಯಕ್ಷಕೌಮುದಿ ಕಲಾ ಸಂಘದ ಅಧ್ಯಕ್ಷ ಡಾ.ಕಿಶೋರ್‌ಕುಮಾರ್ ರೈ ಶೇಣಿ ಪರಿಚಯಿಸಿದರು, ಉಪಾಧ್ಯಕ್ಷ ಉಮೇಶ್ ಜೆ. ಅಚಾರ್ಯ ವಂದಿಸಿದರು. ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Kinnigoli-29041802

Comments

comments

Comments are closed.

Read previous post:
Kinnigoli-29041801
ಕಟೀಲು ಬಿಜೆಪಿ ಸೇರ್ಪಡೆ

ಕಟೀಲು:  ಕಟೀಲು ಸೌಂದರ್ಯ ಪ್ಯಾಲೇಸ್‌ನ ಬಿಜೆಪಿ ಕಛೇರಿಯಲ್ಲಿ ಕಾರ್ಯಕರ್ತ ಸಭೆಯಲ್ಲಿ ಕಾಂಗ್ರೆಸ ಮುಂಖಡರಾದ ಸುನಿಲ್ ಕುಮಾರ್ ಕಟೀಲು, ಸರೂಜ್ , ಜಯರಾಮ ಕೊಂಡೇಲ, ಕಿರಣ್, ಜಯರಾಮ ಶೆಟ್ಟಿ ಅವರನ್ನು...

Close