ಕಟೀಲು : 10ನೇ ವರ್ಷದ ಸಾಮೂಹಿಕ ವಿವಾಹ

ಕಿನ್ನಿಗೋಳಿ : ವಧುವರರು ಸಾಮರಸ್ಯ ಹಾಗೂ ಒಬ್ಬರನ್ನೊಬ್ಬರು ಅರಿತು ಬಾಳುವ ಜೀವನ ಸಾಗಿಸಿದಾಗ ಜೀವನ ನೆಮ್ಮದಿಯಿಂದ ಇರುತ್ತದೆ ಎಂದು ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ಹೇಳಿದರು.
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಇದರ ಜಂಟೀ ಆಶ್ರಯದಲ್ಲಿ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಶನಿವಾರ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೂಡಬಿದಿರೆ ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಬಡವರ್ಗದ ಜನರಿಗೆ ದುಂದು ವೆಚ್ಚದ ಮದುವೆಗಳಿಂತ ಆರ್ಥಿಕ ಹೊರೆ ಬೀಳದಂತ ಉಚಿತ ಸಾಮೂಹಿಕ ವಿವಾಹಗಳು ಸಹಕಾರಿ. ಇಂತಹ ಕೆಲಸ ನಿರಂತರ ನಡೆಯಬೇಕು ಎಂದು ಹೇಳಿದರು. ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಸ್ತಾವನೆಗೈದು ಮಾತನಾಡಿ ಕಳೆದ 9 ವರ್ಷಗಳಿಂದ 110 ಕ್ಕೂ ಮಿಕ್ಕಿ ಜೋಡಿಗಳು ಯಶಸ್ವಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಎಂದರು.
ಮುಂಬಯಿಯ ಉದ್ಯಮಿ ಕೇಶವ ಅಂಚನ್ ಮುಂಬಯಿ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮೂಡಬಿದಿರೆಯ ಉದ್ಯಮಿ ಶ್ರೀಪತಿ ಭಟ್, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ರಾಹುಲ್ ಸುವರ್ಣ, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರಾ, ಪಟೇಲ್ ವಾಸುದೇವರಾವ್ ಪುನರೂರು, ಕದ್ರಿ ನವನೀತ ಶೆಟ್ಟಿ , ಜಯರಾಮ ಉಡುಪ, ಪದ್ಮನಾಭ ಕಟೀಲು, ಮುಂಬಯಿಯ ಸಮಾಜ ಸೇವಕ ಸತೀಶ್ ಎನ್ ಬಂಗೇರ, ಉದ್ಯಮಿ ಮೋಹನ್ ಮೆಂಡನ್, ನಿಲೇಶ್ ಶೆಟ್ಟಿಗಾರ್, ಗೋಪಾಲಕೃಷ್ಣ ಆಸ್ರಣ್ಣ , ಜಯಂತಿ ಲಕ್ಷ್ಮೀನಾರಾಯಣಆಸ್ರಣ್ಣ, ಪು. ಗುರುಪ್ರಸಾದ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ರಮ್ಯ ರವಿತೇಜ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್ :
13 ಜೋಡಿಗಳು
ಸುಜೀತ- ಜಯಂತ್, ರಮೇಶ್- ಸುಶೀಲ, ಮನೀಶ್ ಪೂಜಾರಿ- ಸಾಧನ, ಪೂವಪ್ಪ – ಸರಸ್ವತಿ, ಪ್ರಮೋದ್- ವಿನೀತಾ, ಚೇತನ್ – ಸ್ವಾತಿ, ವಿಘ್ನೆ ಶ್- ಚೈತ್ರಾ, ಸುಂದರ ಕೆ- ಜಯಶ್ರೀ, ಸುರೇಶ್ – ಶಶಿಕಲಾ ಕೆ, ಗಣೇಶ್ – ಗೀತಾ, ಎಂ. ವಿಶ್ವನಾಥ – ಭವಾನಿ ಎಸ್, ಸೂರ್ಯಕುಮಾರ್- ಚಂದ್ರಿಕಾ, ಕೃಷ್ಣ – ಶಶಿಕಲಾ,

Kinnigoli-29041803

Comments

comments

Comments are closed.

Read previous post:
Kinnigoli-29041802
ಕೆರೆಕಾಡು ವಿನಾಯಕ ಮಕ್ಕಳ ಮೇಳದ ದಶ ಸಂಭ್ರಮ

ಕಿನ್ನಿಗೋಳಿ: ಕಲೆಯನ್ನು ಆಶ್ಲೀಲವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಸಿನಿಮಾ ಗೀತೆಯನ್ನು ಅಳವಡಿಸಿ ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆ ತರುವುದನ್ನು ಸಾಮೂಹಿಕವಾಗಿ ನಿಷೇಧಿಸಬೇಕು ಎಂದು ಬಾರ್ಕೂರು ಮಹಾಸಂಸ್ಥಾನಮ್‌ನ ಡಾ.ವಿಶ್ವ ಸಂತೋಷ್ ಭಾರತೀ...

Close