ಕಿನ್ನಿಗೋಳಿ ದೇವರಾಯ ಮಲ್ಯ ಪ್ರಶಸ್ತಿ ಪ್ರಧಾನ

ಕಿನ್ನಿಗೋಳಿ : ಸಮಾಜದಲ್ಲಿ ಸಾಧನೆ ಮಾಡಿದ ಹಿರಿಯರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಎಲ್ಲರಿಗೂ ಪ್ರೇರಣೆ ಆಗಲಿ ಎಂದು ಕಿನ್ನಿಗೋಳಿ ಜಿ. ಎಸ್ ಬಿ ಎಸೋಶಿಯೇಶನ್ ಅಧ್ಯಕ್ಷ ಕೆ. ಅಚ್ಯುತ ಮಲ್ಯ ಹೇಳಿದರು.
ಕಿನ್ನಿಗೋಳಿ ದೇವರಾಯ ಮಲ್ಯ ಪ್ರತಿಷ್ಠಾನದ ಆಶ್ರಯದಲ್ಲಿ ಕಿನ್ನಿಗೋಳಿ ರಾಮ ಮಂದಿರದಲ್ಲಿ ಸೋಮವಾರ ನಡೆದ ದೇವರಾಯ ಮಲ್ಯ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಹಿರಿಯ ಭಜನಾ ಸಂಘಟಕ, ಜಿ. ಎಸ್. ಬಿ. ಮುಂದಾಳು ಅಚ್ಯುತ ಗಣಪತಿ ಕುಡ್ವ ಅವರಿಗೆ ದೇವರಾಯ ಮಲ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಜಿ. ಎಸ್ ಬಿ ಎಸೋಶಿಯೇಶನ್ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಪ್ರತಿಷ್ಠಾನದ ಲಕ್ಷ್ಮೀದೇವಿ ಮಲ್ಯ, ಸ್ನೇಹಲತಾ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ದೇವರಾಯ ಮಲ್ಯ ಪ್ರತಿಷ್ಠಾನದ ಅಧ್ಯಕ್ಷ ಕೆ. ಜಿ. ಮಲ್ಯ ಸ್ವಾಗತಿಸಿದರು.

Kinnigoli-30041802

Comments

comments

Comments are closed.

Read previous post:
Kinnigoli-29041803
ಕಟೀಲು : 10ನೇ ವರ್ಷದ ಸಾಮೂಹಿಕ ವಿವಾಹ

ಕಿನ್ನಿಗೋಳಿ : ವಧುವರರು ಸಾಮರಸ್ಯ ಹಾಗೂ ಒಬ್ಬರನ್ನೊಬ್ಬರು ಅರಿತು ಬಾಳುವ ಜೀವನ ಸಾಗಿಸಿದಾಗ ಜೀವನ ನೆಮ್ಮದಿಯಿಂದ ಇರುತ್ತದೆ ಎಂದು ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ. ಆಶಾ ಜ್ಯೋತಿ...

Close