ಕಿನ್ನಿಗೋಳಿ : ಬಿಜೆಪಿ ಮಹಾ ಶಕ್ತಿಕೇಂದ್ರದ ಸಮಾವೇಶ

ಕಿನ್ನಿಗೋಳಿ: ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯಗಳ ಬಗ್ಗೆ ಮತದಾರರಿಗೆ ಅರಿವು ಮೂಡಿಸಬೇಕು. ಮೋದಿ ಸರಕಾರದ ಜನಪರ ಕಾರ್ಯಗತವಾದ ಯೋಜನೆಗಳನ್ನು ತಿಳಿಸಿ ಅವರನ್ನು ಬಿಜೆಪಿ ಬೆಂಬಲಿತರನ್ನಗಿ ಮಾಡಬೇಕಾದುದು ಬಿಜೆಪಿ ತಳ ಮಟ್ಟದ ಆದ್ಯ ಕರ್ತವ್ಯ. ಎಂದು ಜಿಲ್ಲಾ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ನಾಯಕ್ ಹೇಳಿದರು
ಸೋಮವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಮೂಲ್ಕಿ ಮಹಾ ಶಕ್ತಿ ಕೇಂದ್ರದ ಕಾರ್ಯಕರ್ತ ಸಮಾವೇಶದಲ್ಲಿ ಮಾತನಾಡಿದರು.
ಮೂಲ್ಕಿ ಮೂಡಬಿದಿರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮಾತನಾಡಿ ಪಕ್ಷದ ಶಕ್ತಿ ತಳಮಟ್ಟದ ಕಾರ್ಯಕರ್ತರು. ಮತದಾರಿಗೆ ಪಕ್ಷದ ಧ್ಯೇಯ ಜನಪರ ಯೋಜನೆ ಯೋಚನೆಗಳನ್ನು ಮನವರಿಕೆ ಮಾಡಿಸಿ ಬಿಜೆಪಿ ಗೆಲ್ಲಿಸುವಂತೆ ಮಾಡಬೇಕು ಎಂದು ಹೇಳಿದರು.
ಮೂಲ್ಕಿ ಮೂಡಬಿದಿರೆ ಬಿಜೆಪಿ ಮಂಡಲದ ಅಧ್ಯಕ್ಷ ಈಶ್ವರ್ ಕಟೀಲು, ಕಾರ್ಯದರ್ಶಿ ಗಳಾದ ಜಯಾನಂದ ಮೂಲ್ಕಿ, ಸುಖೇಶ್ ಶೆಟ್ಟಿ ಶಿರ್ತಾಡಿ, ಬಿಜೆಪಿ ಮುಖಂಡರಾದ ಕೆ. ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಅಭಿಲಾಷ್ ಶೆಟ್ಟಿ, ವಿನೋದ್ ಬೊಳ್ಳೂರು, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸುನೀಲ್ ಆಳ್ವ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-01051805

Comments

comments

Comments are closed.

Read previous post:
Kinnigoli-01051801
ಕವತ್ತಾರು ಜಾತ್ರೆ

ಕವತ್ತಾರು: ಕಿನ್ನಿಗೋಳಿ ಸಮೀಪದ ಕವತ್ತಾರು ಶ್ರೀ ಅಬ್ಬಗದಾರಗ ಮಹಾಲಿಂಗೇಶ್ವರ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸಿರಿಗಳ ಆಯನ ನಡೆಯಿತು.

Close