ನಮ್ಮ ವೃತ್ತಿಯಬಗ್ಗೆ ಗೌರವ ಭಾವನೆ ಇರಬೇಕು

ಮೂಲ್ಕಿ: ಜೀವನ್ ಕುಮಾರ್ ರವರ ಶಿಸ್ತುಬದ್ದ ಜೀವನ ಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮದ ಮೂಲ್ಕಿ ಶಾಖೆಯ ಸಹಾಯಕ ಪ್ರಭಂದಕರಾದ ಜಯ ಕುಮಾರ್ ಎಂ ಶೆಟ್ಟಿ ಹೇಳಿದರು.
ಭಾರತೀಯ ಜೀವ ವಿಮಾ ನಿಗಮದ ಮೂಲ್ಕಿ ಶಾಖೆಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಮೂರು ದಶಕಗಳಿಂದಲೂ ಅಧಿಕ ಸೇವೆ ನೀಡಿ ನಿವೃತ್ತರಾದ ಜೀವನ್ ಕುಮಾರ್ ಬೆಳ್ಳಿಯಪ್ಪ ರವರನ್ನು ಅಭಿನಂದಿಸಿ ಮಾತನಾಡಿದರು.
ಸಹೃದಯತೆ,ಶಿಸ್ತು ಹಾಗೂ ಕಾರ್ಯ ವೈಖರಿಗೆ ಹೆಸರುವಾಸಿಯಾದ ಜೀವನ್ ಕುಮಾರ್ ನಿಗಮದ ನಡೆದಾಡುವ ಗ್ರಂಥಾಲಯದಂತೆ ಎಲ್ಲರಿಗೂ ಸಹಕಾರಿಯಾಗಿದ್ದವರು. ನಿಗಮ ನೂತನ ಪಾಲಿಸಿ ಬಿಡುಗಡೆ ಮಾಡಿದ ಸಂದರ್ಭ ಎಲ್ಲ ಪ್ರತಿನಿಧಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ ಮಾತ್ರವಲ್ಲ ತಮ್ಮ ಪ್ರತಿನಿಧಿಗಳಿಗೆ ಸಹಾಯಕವಾಗುವ ರೀತಿಯಲ್ಲಿ ವ್ಯವಹಾರ ದತ್ತಾಂಶಗಳನ್ನು ಉತ್ತಮ ರೀತಿಯಲ್ಲಿ ಕ್ರೋಡೀಕರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ಅವರ ನಾಯಕತ್ವದ ಗುಣಗಳು ಉಳಿದವರಿಗೂ ಬಹಳ ಸಹಾಯ ಸಹಕಾರ ನೀಡಿದೆ ಎಂದರು.
ಜೀವನ್ ಕುಮಾರ್ ಮಾತನಾಡಿ, ನಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ಪ್ರೀತಿಸಿದರೆ ಅಭಿವೃದ್ಧಿಯ ಜೊತೆಗೆ ಶಾಂತಿ ನೆಮ್ಮದಿ ಸಾಧ್ಯ, ಪ್ರಾಮಾಣಿಕ ಸೇವೆಗಾಗಿ ನಮಗೆ ನಿಗಮವು ಯಾವೂದೇ ಐಟಿ-ಬಿಟಿಯನ್ನು ಮೀರಿಸಿ ಸವಲತ್ತುಗಳನ್ನು ನೀಡಿದೆ ಮಾತ್ರವಲ್ಲ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳನ್ನಾಗಿ ಮಾಡಿದೆ. ಯಾವತ್ತೂ ನಮ್ಮ ವೃತ್ತಿಯಬಗ್ಗೆ ಗೌರವ ಭಾವನೆ ಇರಬೇಕು ಇದರಿಂದಲೇ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಾಗಿದ್ದು ನಾನು ಬಹಳ ಸಂತೋಷದಿಂದ ಕೆಲಸ ನಿರ್ವಹಿಸಿ ನೆಮ್ಮದಿಯಿಂದ ನಿವೃತ್ತನಾಗುತ್ತಿದ್ದೇನೆ ಎಂದರು.
ಈ ಸಂದರ್ಭ ಹಿರಿಯ ಶಾಖಾಧಿಕಾರಿ ಬಿ.ವಿಶ್ವನಾಥರವರು ಕಛೇರಿ ಸಿಬ್ಬಂದಿಗಳು, ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳ ಪರವಾಗಿ ವಿಶೇಷವಾಗಿ ಸನ್ಮಾನಿಸಿದರು. ಈ ಸಂದರ್ಭ ಅಭಿವೃದ್ಧಿ ಅಧಿಕಾರಿಗಳಾದ ಲಿಯೋ ತಾವ್ರೋ,ಬಿ,ಜೆ.ಪೈ.ಪೂರ್ಣೇಶ್, ಅಧಿಕಾರಿಗಳಾದ ಪುರುಷೋತ್ತಮ,ಜನಾರ್ದನ್,ಭಾಸ್ಕರ ಸಫಲಿಗ,ಬಿ.ಆರ್. ಭಟ್, ಮಹೇಶ್ ಶೆಟ್ಟಿ, ರಾಜ್ಯ ಪ್ರತಿನಿಧಿ ಸಂಘದ ಉಪಾಧ್ಯಕ್ಷ ರಮೇಶ್ ಕುಮಾರ್,ಜೆರಾಲ್ಡ್ ಕ್ರಾಸ್ತಾ,ವಿಲಿಯಂ ಲೋಬೊ, ಟಿ.ಎನ್.ಶ್ರೀಧರ್ ಅಭಿನಂದನಾ ಮಾತುಗಳನ್ನಾಡಿದರು. ಅಭಿವೃದ್ಧಿ ಅಧಿಕಾರಿ ಪೂರ್ಣೇಶ್ ಸ್ವಾಗತಿಸಿ ವಂದಿಸಿದರು.

Mulki-02051802

Comments

comments

Comments are closed.

Read previous post:
Mulki-02051801
ಧಾರ್ಮಿಕ ಪರಂಪರೆ, ಸಂಸ್ಕಾರ ಎಳೆಯರಿಗೆ ಕಲಿಸಿ

ಮೂಲ್ಕಿ: ಅಚಲ ಭಕ್ತಿ, ವಿಶ್ವಾಸ ಹಾಗೂ ಪ್ರಾಮಾಣಿಕತೆಗೆ ದೇವರು ಒಲಿದು ನಮ್ಮನ್ನು ಬೆಳೆಸುತ್ತಾನೆ ಎಂಬುವುದಕ್ಕೆ ಈ ಕ್ಷೇತ್ರವೇ ಸಾಕ್ಷಿಯಾಗಿದೆ ಎಂದು ಹಿರಿಯ ವೈದಿಕ, ಜ್ಯೋತಿಷಿ ಶಿಮಂತೂರು ರಾಮಚಂದ್ರ ಭಟ್...

Close