ಧಾರ್ಮಿಕ ಪರಂಪರೆ, ಸಂಸ್ಕಾರ ಎಳೆಯರಿಗೆ ಕಲಿಸಿ

ಮೂಲ್ಕಿ: ಅಚಲ ಭಕ್ತಿ, ವಿಶ್ವಾಸ ಹಾಗೂ ಪ್ರಾಮಾಣಿಕತೆಗೆ ದೇವರು ಒಲಿದು ನಮ್ಮನ್ನು ಬೆಳೆಸುತ್ತಾನೆ ಎಂಬುವುದಕ್ಕೆ ಈ ಕ್ಷೇತ್ರವೇ ಸಾಕ್ಷಿಯಾಗಿದೆ ಎಂದು ಹಿರಿಯ ವೈದಿಕ, ಜ್ಯೋತಿಷಿ ಶಿಮಂತೂರು ರಾಮಚಂದ್ರ ಭಟ್ ಹೇಳಿದರು.
ಶಿಮಂತೂರು ಬಿಲ್ಲವರ ಶ್ರೀರಕ್ತೇಶ್ವರಿ ನಾಗಬ್ರಹ್ಮ ಮೂಲಸ್ಥಾನದಲ್ಲಿ ಸಮುದಾಯ ಭವನ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಕಾಮಗಾರಿ ಉದ್ಘಾಟಿಸಿದ ಉದ್ಯಮಿ ಶೇಖರ ಎಂ.ಕೋಟ್ಯಾನ್ ಮಾತನಾಡಿ, ಗುರು ಹಿರಿಯರು ಹಾಗೂ ದೇವರ ಮೇಲಿನ ಅಚಲ ಭಕ್ತಿ ನಮಗೆ ನೆಮ್ಮದಿ ನೀಡುವ ಕಾರಣ ಆರೋಗ್ಯ ಕಂಡುಕೊಳ್ಳಲು ಸಾಧ್ಯ ನಮ್ಮ ಆಚಾರ ವಿಚಾರಗಳು ಧಾರ್ಮಿಕ ಪರಂಪರೆ ಹಾಗೂ ಸಂಸ್ಕಾರವನ್ನು ಎಳೆಯರಿಗೆ ಕಲಿಸಿಕೊಡುವುದೂ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.
ಈ ಸಂದರ್ಭ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ದಾನಿಗಳು ಉದ್ಘಾಟಿಸಿದರು. ಕಳೆದ ಮೂರು ತಲೆಮಾರುಗಳಿಂದ ಕ್ಷೇತ್ರದಲ್ಲಿ ಅರ್ಚಕರಾಗಿ ಸೇವೆನೀಡಿದ ಹಿರಿಯ ಚೇತನಗಳನ್ನು ಸ್ಮರಿಸಿ ಅವರ ಪರವಾಗಿ ಕಳೆದ 7 ದಶಕಗಳಿಂದಲೂ ಹೆಚ್ಚು ಸೇವೆ ನೀಡಿದ ಶಿಮಂತೂರು ರಾಮಚಂದ್ರ ಭಟ್ ರವರನ್ನು ಸಪತ್ನೀಕರಾಗಿ ವಿಶೇಷವಾಗಿ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು. ಪಾಕತಜ್ಞ ಸೀತಾರಾಮ ಭಟ್, ಅರ್ಚಕ ಮಾಧವ ಭಟ್,ದಾನಿಗಳಾದ ಶೇಖರ ಎಂ.ಕೋಟ್ಯಾನ್,ಸೋಮಪ್ಪ ಕೋಟ್ಯಾನ್, ರತ್ನಾ ಎಸ್. ಕೋಟ್ಯಾನ್, ಮೈಲಾಜೆ ಮಹಾಬಲ ಸುವರ್ಣ, ಸೀತಾರಾಮ ಪೂಜಾರಿ ಮುಂಚೂರು,ಎಂ. ಬಿ.ಸನಿಲ್ ದೇವೇಂದ್ರ ಪೂಜಾರಿ, ಜಗದೀಶ ಸುವರ್ಣ, ಸುಧೀರ್ ಸುವರ್ಣ,ಕಾವಿನಕಲ್ಲು ರಾಮ ಪೂಜಾರಿ ಕುಲಾ, ಸಾನದ ಮನೆ ಕುಟ್ಟಿ ಪೂಜಾರಿ ಶಿಮಂತೂರು ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಗದೀಶ ಸುವರ್ಣ. ಕಾರ್ಯಾಧ್ಯಕ್ಷರಾದ ಕಿಶೋರ್ ಸುವರ್ಣ, ವಿಶ್ವನಾಥ ಇಡ್ಯ, ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್, ಸದಸ್ಯ ಮೋಹನ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ವಿನೋದ್ ಕುಮಾರ್ ಸ್ವಾಗತಿಸಿದರು. ಕಿಶೋರ್ ಸುವರ್ಣ ಪ್ರಸ್ತಾವಿಸಿದರು, ವಿಶ್ವನಾಥ ಇಡ್ಯಾ ಅನಿಸಿಕೆ ವ್ಯಕ್ತಪಡಿಸಿದರು. ಗಣೇಶ್ ಬಂಗೇರಾ ನಿರೂಪಿಸಿದರು, ಗಣೇಶ್ ಸುವರ್ಣ ವಂದಿಸಿದರು.

Mulki-02051801

Comments

comments

Comments are closed.

Read previous post:
Kinnigoli-01051806
ಮೂರುಕಾವೇರಿ : ವಾರ್ಷಿಕ ಮಾರಿ ಪೂಜೆ

ಕಿನ್ನಿಗೋಳಿ : ಮೂರುಕಾವೇರಿ ಶ್ರೀ ಮಹಮ್ಮಾಯಿ ದೇವಳದ ವಾರ್ಷಿಕ ಮಾರಿಪೂಜೆಯ ಅಂಗವಾಗಿ ಮಂಗಳವಾರ ಕಿನ್ನಿಗೋಳಿ ಅಶ್ವಥ್ಥಕಟ್ಟೆಯಲ್ಲಿ ದೇವರ ಬಿಂಬ ಪ್ರತಿಷ್ಠೆ ನಡೆಯಿತು.

Close