ಸಂಘಟನೆಯಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ

ಕಿನ್ನಿಗೋಳಿ : ಸಂಘಟನೆಯಿಂದ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯ. ಸಂಘಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ನೆರವಿಗೆ ತಲುಪಿದಲ್ಲಿ ಮಾತ್ರ ಸಂಘಗಳು ಉಳಿಯಲು ಸಾಧ್ಯ. ಯುವ ಸಮುದಾಯವನ್ನು ಸೆಳೆಯುವ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಸಸಿಹಿತ್ಲು ಅಗ್ಗಿದ ಕಳಿಯ ಬ್ರಹ್ಮಶ್ರಿ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷ ಚಂದಯ್ಯ ಬಿ. ಕರ್ಕೇರಾ ಹೇಳಿದರು.
ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರಿ ನಾರಾಯಣ ಗುರು ಸೇವಾ ಸಂಘದ 13ನೇ ವರ್ಷದ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಬಯಿ ಪೂವೈನ ಮಹಾಶೇಷ ರುಂಡಮಾಲಿನಿ ದೇವಳದ ರಾಹುಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವ ಸಮುದಾಯವನ್ನು ಸಮಾಜ ಮುಖಿ ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿ ಹಾದಿ ತಪ್ಪದಂತೆ ನೋಡಿಕೊಳ್ಳುವ ಜವಬ್ದಾರಿ ಸಂಘಗಳಿಗೆ ಇದೆ ಎಂದು ಹೇಳಿದರು.
ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಶುಭ ಹಾರೈಸಿದರು.
ಈ ಸಂದರ್ಭ 21 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿಯನ್ನು ನೀಡಲಾಯಿತು. ಸಂಘದಲ್ಲಿ ಕರಾಟೆ ಶಿಕ್ಷಣ ಪಡೆಯುತ್ತಿರುವ ೮ ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಬ್ರಹ್ಮಶ್ರಿ ನಾರಾಯಣ ಗುರು ಸೇವಾ ಸಂಘದ ಕಾರ್ಯಾಧ್ಯಕ್ಷ ಕೇಶವ ಅಂಚನ್ ಮುಂಬಯಿ, ಮಹಿಳಾ ಸಮಿತಿಯ ಅಧ್ಯಕ್ಷೆ ಶುಭಾ ಪ್ರೇಮ್‌ನಾಥ್ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಪ್ರಕಾಶ್‌ಕುಮಾರ್ ಬಿ.ಎನ್. ಸ್ವಾಗತಿಸಿದರು. ಸಂಚಾಲಕ ರಮೇಶ್ ಪೂಜಾರಿ ಚೇಳ್ಯಾರು ಪ್ರಸ್ತಾವನೆಗೈದರು. ಕೋಶಾಧಿಕಾರಿ ವಸಂತ ಪೂಜಾರಿ ವಂದಿಸಿದರು, ಪ್ರಧಾನ ಕಾರ್ಯದರ್ಶಿ ನರೇಶ್‌ಕುಮಾರ್ ನಿರೂಪಿಸಿದರು.

ಸಸಿಹಿತ್ಲು ಹಳೆ ವಿದ್ಯಾರ್ಥಿ ಸಂಘ ಹಾಗೂ ಲಚ್ಚಿಲ್ ಮೊಗವೀರ ಸಭಾದ ಅಧ್ಯಕ್ಷ ನಾಗೇಶ್ ಡಿ. ಬಂಗೇರಾ ಲಚ್ಚಿಲ್, ಅಂಚೆ ಪೇದೆ ದಿನೇಶ್ ಶೆಟ್ಟಿಗಾರ್, ಸರೋಜಿನಿ ಕಲ್ಲಕೋಟೆ, ಚಂದ್ರಶೇಖರ್ ಮುಂಡ, ನಾಗೇಶ್ ಸಾಲ್ಯಾನ್, ಮಧು ಸುವರ್ಣ, ಕರಾಟೆ ಶಿಕ್ಷಕ ಪ್ರಕಾಶ್ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.

Kinnigoli-04051802

Comments

comments

Comments are closed.

Read previous post:
Kinnigoli-04051801
ಕಟೀಲು : ಬಿಜೆಪಿ ಸಮಾವೇಶ ಸಭೆ

ಕಿನ್ನಿಗೋಳಿ: ಕಟೀಲು ಬೀದಿಯಲ್ಲಿ ಬಿ.ಜೆ.ಪಿ. ಕಾರ್ಯಕರ್ತರ ಸಮಾವೇಶ ಸಭೆ ಬುಧವಾರ ನಡೆಯಿತು. ಈ ಸಂದರ್ಭ ಮೂಲ್ಕಿ ಮೂಡಬಿದಿರೆ ಬಿ.ಜೆ.ಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್, ಮಂಡಲಾಧ್ಯಕ್ಷ ಈಶ್ವರ್ ಕಟೀಲು,...

Close